- Kannada News Photo gallery Cricket photos Virat Kohli seek blessings at Rishikesh ashram Kannada News zp
Virat Kohli: ಆಧ್ಯಾತ್ಮಿಕ ಪಯಣದಲ್ಲಿ ವಿರಾಟ್ ಕೊಹ್ಲಿ
Virat Kohli: ಟೀಮ್ ಇಂಡಿಯಾದಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಫೆಬ್ರವರಿ 9 ರಂದು ಪ್ರಾರಂಭವಾಗುವ ಭಾರತ-ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ತಂಡವನ್ನು ಕೂಡಿಕೊಳ್ಳಲಿದ್ದಾರೆ.
Updated on: Jan 31, 2023 | 8:30 PM

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಈಗ ಎಲ್ಲಿದ್ದಾರೆ ಎಂಬ ಪ್ರಶ್ನೆಗೆ...ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ ಎಂಬ ಉತ್ತರ ಸಿಗುತ್ತದೆ.

ಹೌದು, ಕಿಂಗ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಆಧ್ಯಾತ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೀಗ ವಿರುಷ್ಕಾ ದಂಪತಿ ಉತ್ತಾರಖಂಡದ ಋಷಿಕೇಶದಲ್ಲಿದ್ದು, ಅಲ್ಲಿ ಅವರು ಸ್ವಾಮಿ ದಯಾನಂದ ಜಿ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

ಕಳೆದ ಎರಡು ದಿನಗಳಿಂದ ಋಷಿಕೇಶದಲ್ಲಿರುವ ವಿರಾಟ್ ಕೊಹ್ಲಿ ಅಲ್ಲಿನ ಬ್ರಹ್ಮಲಿನ್ ದಯಾನಂದರು ಸರಸ್ವತಿ ಸಮಾಧಿ ಬಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಆ ಬಳಿಕ ಗಂಗಾ ಘಾಟ್‌ನಲ್ಲಿ ನಡೆದ ಗಂಗಾ ಆರತಿಯಲ್ಲಿ ಭಾಗವಹಿಸಿದ್ದರು ಎಂದು ಆಶ್ರಮದ ಪಿಆರ್‌ಒ ಗುಣಾನಂದ ರಾಯಲ್ ತಿಳಿಸಿದ್ದಾರೆ.

ಹಾಗೆಯೇ ಮಂಗಳವಾರ (ಜ 31) ಬೆಳಗ್ಗೆ ಆಶ್ರಮದಲ್ಲಿ ನಡೆದ ಭಂಡಾರ ಎಂಬ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿರುಷ್ಕಾ ಜೋಡಿ ಇನ್ನೂ ಕೆಲ ದಿನಗಳ ಕಾಲ ಉತ್ತರಾಖಂಡ್ನಲ್ಲೇ ಉಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಇದೀಗ ಆಧ್ಯಾತ್ಮಿಕ ಪ್ರವಾಸದಲ್ಲಿರುವ ವಿರುಷ್ಕಾ ಜೋಡಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ ಫೆಬ್ರವರಿ 9 ರಂದು ಪ್ರಾರಂಭವಾಗುವ ಭಾರತ-ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ತಂಡವನ್ನು ಕೂಡಿಕೊಳ್ಳಲಿದ್ದಾರೆ.
























