- Kannada News Photo gallery Cricket photos India to an 8-wicket win over West Indies in the ongoing Women's T20I Tri-Series Cricket News in Kannada
WIW vs INDW: ವಿಂಡೀಸ್ ವಿರುದ್ಧ ಭಾರತಕ್ಕೆ 8 ವಿಕೆಟ್ಗಳ ಜಯ: ಫೆ. 2ಕ್ಕೆ ಆಫ್ರಿಕಾ ವಿರುದ್ಧ ಫೈನಲ್ ಫೈಟ್
India Women vs West Indies Women: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳೆಯರ ತ್ರಿಕೋನ ಟಿ20 ಸರಣಿಯ ಅಂತಿಮ ರೌಂಡ್ ರಾಬಿನ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ಗೆ ಸೋಲುಣಿಸಿರುವ ಭಾರತ ಮಹಿಳಾ ತಂಡ ಫೈನಲ್ಗೆ ಪ್ರವೇಶ ಪಡೆದಿದೆ. ಇತ್ತ ಕೆರಿಬಿಯನ್ ಮಹಿಳೆಯರು ಸೋತು ಸರಣಿಯಿಂದ ಹೊರಬಿದ್ದಿದ್ದಾರೆ.
Updated on: Jan 31, 2023 | 9:51 AM

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳೆಯರ ತ್ರಿಕೋನ ಟಿ20 ಸರಣಿಯ ಅಂತಿಮ ರೌಂಡ್ ರಾಬಿನ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ಗೆ ಸೋಲುಣಿಸಿರುವ ಭಾರತ ಮಹಿಳಾ ತಂಡ ಫೈನಲ್ಗೆ ಪ್ರವೇಶ ಪಡೆದಿದೆ. ಇತ್ತ ಕೆರಿಬಿಯನ್ ಮಹಿಳೆಯರು ಸೋತು ಸರಣಿಯಿಂದ ಹೊರಬಿದ್ದಿದ್ದಾರೆ.

ಫೆಬ್ರವರಿ 2 ರಂದು ಹರ್ಮನ್ಪ್ರೀತ್ ಪಡೆ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತೀಯ ವನಿತೆಯರು ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚಿದರು.

ಈಸ್ಟ್ ಲಂಡನ್ನ ಬಫೆಲೊ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ಗಳ ಅಮೋಘ ಜಯ ಸಾಧಿಸಿದರು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ವೆಸ್ಟ್ ಇಂಡೀಸ್ ನಿಧಾನಗತಿಯ ಆರಂಭ ಪಡೆದುಕೊಳ್ಳುವ ಜೊತೆಗೆ ವಿಕೆಟ್ ಕೂಡ ಕಳೆದುಕೊಂಡಿತು.

ರಶ್ಚಡಾ ವಿಲಿಯಮ್ಸ್ (8), ಎಸ್ ಕ್ಯಾಂಪ್ಬೆಲ್ (0) ಹಾಗೂ ಡೆನಬಾ ಜೋಸೆಫ್ (3) ಬೇಗನೆ ಔಟಾಗಿ ಪೆವಿಲಿಯನ್ ಸೇರಿಕೊಂಡರು. ನಾಯಕಿ ಹೇಲೆ ಮ್ಯಾಥ್ಯೂಸ್ 34 ಎಸೆತಗಳಲ್ಲಿ 34 ರನ್ಗಳ ಕೊಡುಗೆ ನೀಡಿದರು.

ಜೈದಾ ಜೇಮ್ಸ್ 31 ಎಸೆತಗಳಲ್ಲಿ ಅಜೇಯ 21 ರನ್ ಬಾರಿಸಿದರು. ಶಬಿಕಾ ಗಜ್ನಬಿ 12 ಹಾಗೂ ಅಲಿಯಾ ಅಲ್ನೆನಿ 9 ರನ್ ಗಳಿಸಿದರು. ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿತಷ್ಟೆ.

ಭಾರತ ಪರ ದೀಪ್ತಿ ಶರ್ಮಾ 3 ವಿಕೆಟ್ ಕಿತ್ತರೆ, ಪೂಜಾ ವಸ್ತ್ರಾಕರ್ 2 ಹಾಗೂ ಗಾಯಕ್ವಾಡ್ 1 ವಿಕೆಟ್ ಪಡೆದರು.

ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತೀಯ ವನಿತೆಯರು ಸ್ಮೃತಿ ಮಂದಾನ (5) ಹಾಗೂ ಹರ್ಲಿನ್ ಡಿಯೊನ್ (13) ವಿಕೆಟ್ ಬೇಗನೆ ಕಳೆದುಕೊಂಡಿತಾದರೂ ತಂಡಕ್ಕೆ ಯಾವುದೇ ಹೊಡೆತ ಬೀಳಲಿಲ್ಲ.

ಜೆಮಿಯ ರೋಡ್ರಿಗಸ್ 39 ಎಸೆತಗಳಲ್ಲಿ 5 ಫೋರ್ನೊಂದಿಗೆ ಅಜೇಯ 42 ರನ್ ಸಿಡಿಸಿದರೆ, ನಾಯಕಿ ಹರ್ಮನ್ಪ್ರೀತ್ ಕೌರ್ 23 ಎಸೆತಗಳಲ್ಲಿ 4 ಫೋರ್ನೊಂದಿಗೆ ಅಜೇಯ 32 ರನ್ ಬಾರಿಸಿದರು.

ಭಾರತ 13.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿ 8 ವಿಕೆಟ್ಗಳ ಜಯ ಸಾಧಿಸಿತು. ವಿಂಡೀಸ್ ಪರ ಶಮಿಲಾ ಕೊನೆಲ್ ಹಾಗೂ ಹೇಲೆ ಮ್ಯಾಥ್ಯೂಸ್ ತಲಾ 1 ವಿಕೆಟ್ ಪಡೆದರು.
