IND vs AUS: ವಿಶ್ವ ದಾಖಲೆ ಬರೆದ ಜಡೇಜಾ; ಇಮ್ರಾನ್ ಖಾನ್- ಕಪಿಲ್ ದೇವ್ ದಾಖಲೆ ಉಡೀಸ್..!

|

Updated on: Feb 17, 2023 | 2:42 PM

IND vs AUS: ಖವಾಜಾ ಅವರನ್ನು ಔಟ್ ಮಾಡಿದ ತಕ್ಷಣ ಟೆಸ್ಟ್ ಕ್ರಿಕೆಟ್​ನಲ್ಲಿ ದೊಡ್ಡ ದಾಖಲೆ ಮಾಡಿದ ಜಡೇಜಾ, ಟೆಸ್ಟ್ ಕ್ರಿಕೆಟ್‌ನಲ್ಲಿ 250 ವಿಕೆಟ್ ಪಡೆದ ಸಾಧನೆ ಮಾಡಿದರು.

1 / 5
5 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳಿರುವ ರವೀಂದ್ರ ಜಡೇಜಾ ಆಸ್ಟ್ರೇಲಿಯ ವಿರುದ್ಧ ನಡೆಯುತ್ತಿರುವ 4 ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಎನಿಸಿಕೊಂಡಿದ್ದರು. ಇದೀಗ ಜಡೇಜಾ ಎರಡನೇ ಟೆಸ್ಟ್‌ನ ಮೊದಲ ದಿನವೂ ಅದ್ಭುತ ಪ್ರದರ್ಶನ ನೀಡಿದ್ದಾರೆ.

2 / 5
ದೆಹಲಿ ಟೆಸ್ಟ್‌ನ ಮೊದಲ ದಿನವೇ ಅದ್ಭುತ ಪ್ರದರ್ಶನ ನೀಡಿದ ಜಡೇಜಾ, ಪಂದ್ಯದ ಎರಡನೇ ಸೆಷನ್​ನಲ್ಲಿ 81 ರನ್‌ಗಳಿಸಿದ್ದ ಆಸ್ಟ್ರೇಲಿಯಾದ ಆರಂಭಿಕ ಉಸ್ಮಾನ್ ಖವಾಜಾ ಅವರ ವಿಕೆಟ್ ಪಡೆದರು.

3 / 5
ಖವಾಜಾ ಅವರನ್ನು ಔಟ್ ಮಾಡಿದ ತಕ್ಷಣ ಟೆಸ್ಟ್ ಕ್ರಿಕೆಟ್​ನಲ್ಲಿ ದೊಡ್ಡ ದಾಖಲೆ ಮಾಡಿದ ಜಡೇಜಾ, ಟೆಸ್ಟ್ ಕ್ರಿಕೆಟ್‌ನಲ್ಲಿ 250 ವಿಕೆಟ್ ಪಡೆದ ಸಾಧನೆ ಮಾಡಿದರು.

4 / 5
ಈ ವಿಕೆಟ್‌ನೊಂದಿಗೆ ಜಡೇಜಾ ಕಪಿಲ್ ದೇವ್ ಮತ್ತು ಇಮ್ರಾನ್ ಖಾನ್ ಅವರ ದಾಖಲೆಯನ್ನೂ ಹಿಂದಿಕ್ಕಿದ್ದಾರೆ. ಅಲ್ಲದೆ ಜಡೇಜಾ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 2500 ರನ್ ಮತ್ತು 250 ವಿಕೆಟ್‌ಗಳನ್ನು ಗಳಿಸಿದ ಏಷ್ಯಾದ ಅತ್ಯಂತ ವೇಗದ ಆಟಗಾರ ಎನಿಸಿಕೊಂಡಿದ್ದಾರೆ.

5 / 5
ಜಡೇಜಾ 62 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರೆ, ಇಮ್ರಾನ್ ಖಾನ್ 64 ಮತ್ತು ಕಪಿಲ್ ದೇವ್ 65 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.