IND vs AUS 3rd T20I: ಭಾರತ-ಆಸ್ಟ್ರೇಲಿಯಾ ತೃತೀಯ ಟಿ20 ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿದೆ
TV9 Web | Updated By: Vinay Bhat
Updated on:
Sep 26, 2022 | 11:22 AM
India vs Australia: ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ತೃತೀಯ ಟಿ20 ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.
1 / 8
ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ತೃತೀಯ ಟಿ20 ಪಂದ್ಯದಲ್ಲಿ ಭಾರತ (India vs Australia) ರೋಚಕ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.
2 / 8
ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಸ್ಫೋಟಕ ಆಟ ಹಾಗೂ ವಿರಾಟ್ ಕೊಹ್ಲಿಯ (Virat Kohli) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿರ್ಣಾಯಕ ಕದನದಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳ ಜಯ ಕಂಡು 2-1 ಅಂತರದಿಂದ ಟಿ20 ಸರಣಿ ಬಾಚಿಕೊಂಡಿದೆ.
3 / 8
ಈ ಗೆಲುವಿನೊಂದಿಗೆ ಭಾರತ ಪರ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ನಾಯಕರ ಪಟ್ಟಿಯಲ್ಲಿ ರೋಹಿತ್ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ರೋಹಿತ್ 32 ಪಂದ್ಯಗಳಲ್ಲಿ ಗೆದ್ದು ಜಂಟಿ ಸ್ಥಾನ ಹಂಚಿಕೊಂಡಿದ್ದರು.
4 / 8
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 186 ರನ್‌ಗಳ ಸವಾಲಿನ ಮೊತ್ತ ಗಳಿಸಿತ್ತು. ಮರೂನ್ ಗ್ರೀನ್ 21 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಮೇತ 52 ರನ್ ಚಚ್ಚಿದರು. ಟಿಮ್ ಡೇವಿಡ್ 54 ರನ್ ಗಳಿಸಿದರು.
5 / 8
ಭಾರತ ಆರಂಭದಲ್ಲೇ ಕೆಎಲ್ ರಾಹುಲ್, ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಆದರೆ, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ 104 ರನ್‌ಗಳ ಜೊತೆಯಾಟ ಆಡಿದ್ದು ತಂಡದ ಗೆಲುವಿಗೆ ನೆರವಾಯಿತು.
6 / 8
ಸೂರ್ಯಕುಮಾರ್ ಆಸ್ಟ್ರೇಲಿಯಾ ಬೌಲರ್ಗಳ ಬೆಂಡೆತ್ತಿದರು. 5 ಬೌಂಡರಿ, 5 ಸಿಕ್ಸರ್ ಸಮೇತ 69 ರನ್ ಗಳಿಸಿದರು.
7 / 8
ಕೊಹ್ಲಿ ಮಹತ್ವದ ಪಂದ್ಯದಲ್ಲಿ ಭರ್ಜರಿ ಬ್ಯಾಟ್ ಬೀಸಿ 33 ನೇ ಅರ್ಧಶತಕ ಸಿಡಿಸಿದರು. 4 ಸಿಕ್ಸರ್, 3 ಬೌಂಡರಿ ಸಮೇತ 63 ರನ್ ಗಳಿಸಿದರು.
8 / 8
ಆದರೆ, ಈ ಪಂದ್ಯದಲ್ಲೂ ರೋಹಿತ್ ಪಡೆಯ ಬೌಲಿಂಗ್ ವಿಭಾಗ ಪರಿಣಾಮಕಾರಿ ಆಗಿ ಗೋಚರಿಸಲಿಲ್ಲ. ಸ್ಪಿನ್ನರ್ಗಳು ತಮ್ಮ ಜವಾಬ್ದಾರಿ ನಿರ್ವಹಿಸಿದರೆ ವೇಗಿಗಳು ದುಬಾರಿ ಆದರು. ಜಸ್ಪ್ರೀತ್ ಬುಮ್ರಾ ಕೂಡ 4 ಓವರ್ಗೆ 50 ನೀಡಿದರು. ಅಕ್ಷರ್ ಪಟೇಲ್ 3 ವಿಕೆಟ್ ಕಿತ್ತರು.