IND vs ENG 5th Test: ಭಾರತ-ಇಂಗ್ಲೆಂಡ್ 5ನೇ ಟೆಸ್ಟ್ಗೆ ಮಳೆಯ ಕಾಟ?: ಧರ್ಮಶಾಲಾ ಸ್ಟೇಡಿಯಂ ಹೇಗಿದೆ ನೋಡಿ
Dharamshala Weather report: ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ನಡೆಯಲಿರುವ ಎಲ್ಲಾ ಐದು ದಿನಗಳು ತುಂಬಾ ಚಳಿಯಿರುತ್ತದೆ. ಮೊದಲ ದಿನದಂದು ಮಳೆಯಿಂದ ಪಂದ್ಯ ಹಾಳಾಗುವ ಸಾಧ್ಯತೆ ದಟ್ಟವಾಗಿದೆ. ಇಲ್ಲಿದೆ ನೋಡಿ ಧರ್ಮಶಾಲಾದಲ್ಲಿನ ಕಂಪ್ಲೀಟ್ ವೆದರ್ ರಿಪೋರ್ಟ್.
1 / 6
ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯವು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಮಾರ್ಚ್ 7 ಗುರುವಾರದಿಂದ ಶುರುವಾಗಲಿದೆ. ಟೀಮ್ ಇಂಡಿಯಾ ಪ್ರಸ್ತುತ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ.
2 / 6
ರೋಹಿತ್ ಪಡೆ ಇದೀಗ ಕೊನೆಯ ಟೆಸ್ಟ್ ಅನ್ನು ಕೂಡ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸುವ ಗುರಿಯನ್ನು ಹೊಂದಿದೆ. ಮತ್ತೊಂದೆಡೆ, ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಮೊದಲ ಸರಣಿ ಸೋಲಿನ ನಂತರ ಇಂಗ್ಲೆಂಡ್ ಕಮ್ಬ್ಯಾಕ್ ಮಾಡಲು ಅಭ್ಯಾಸ ಆರಂಭಿಸಿದೆ. ಹೀಗೆ ರೋಚಕತೆ ಸೃಷ್ಟಿಸಿರುವ ಐದನೇ ಟೆಸ್ಟ್ಗೆ ಮಳೆ ಅಡ್ಡಿ ಪಡಿಸುತ್ತಾ?, ಧರ್ಮಶಾಲಾದಲ್ಲಿನ ಹವಾಮಾನ ಹೇಗಿದೆ ನೋಡೋಣ.
3 / 6
ಧರ್ಮಶಾಲಾದಲ್ಲಿ ಟೆಸ್ಟ್ ಪಂದ್ಯ ನಡೆಯಲಿರುವ ಎಲ್ಲಾ ಐದು ದಿನಗಳು ತುಂಬಾ ಚಳಿಯಿರುತ್ತದೆ. ಮೊದಲ ದಿನದಂದು ಮಳೆಯಿಂದ ಪಂದ್ಯ ಹಾಳಾಗುವ ಸಾಧ್ಯತೆ ದಟ್ಟವಾಗಿದೆ. ದಿನ 3 ಮತ್ತು 4 ರಂದು ಹೆಚ್ಚು ಸೂರ್ಯನ ಬೆಳಕು ಇರುತ್ತದೆ, ಆದರೆ 5 ನೇ ದಿನದಂದು ಮತ್ತೆ ಮೋಡ ಕವಿದಿರುತ್ತದೆ. ಕೊನೆಯ ದಿನ ಮಳೆ ಆಗಬಹುದು ಎನ್ನಲಾಗಿದೆ.
4 / 6
ಇನ್ನು ಬ್ಯಾಡ್ ಲೈಟ್ ಹೆಚ್ಚಿನ ದಿನಗಳಲ್ಲಿ ಆಟವನ್ನು ಹಾಳುಮಾಡುತ್ತದೆ. ಚಹಾದ ನಂತರ ಫ್ಲಡ್‌ಲೈಟ್‌ಗಳನ್ನು ಬಳಸುವ ಸಾಧ್ಯತೆಯಿದೆ, ಇದು ಸರಣಿಯ ಅಂತಿಮ ಟೆಸ್ಟ್‌ನಲ್ಲಿ ಆಟಗಾರರಿಗೆ ಸ್ವಲ್ಪ ಸಮಸ್ಯೆಯಾಗಬಹುದು. ಹವಾಮಾನವನ್ನು ಗಮನಿಸಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡುವುದು ಉತ್ತಮ ಆಯ್ಕೆ. ಇಲ್ಲಿನ ಪರಿಸ್ಥಿತಿ ವೇಗಿಗಳಿಗೆ ಹೆಚ್ಚು ನೆರವಾಗುತ್ತದೆ.
5 / 6
ಜಸ್ಪ್ರೀತ್ ಬುಮ್ರಾ ರಾಂಚಿ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆದ ನಂತರ ಐದನೇ ಟೆಸ್ಟ್‌ನಲ್ಲಿ ಪ್ಲೇಯಿಂಗ್ XI ಗೆ ಮರಳಲಿದ್ದಾರೆ. ಧರ್ಮಶಾಲಾದಲ್ಲಿನ ಪರಿಸ್ಥಿತಿಯನ್ನು ಗಮನಿಸಿದರೆ, ರೋಹಿತ್ ಶರ್ಮಾ ನೇತೃತ್ವದ ತಂಡವು ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಮತ್ತು ಬುಮ್ರಾ ಹೀಗೆ ಮೂರು ವೇಗಿಗಳನ್ನು ಕಣಕ್ಕಿಳಿಸಬಹುದು.
6 / 6
ಭಾರತದ ಬ್ಯಾಟಿಂಗ್ ವಿಷಯಕ್ಕೆ ಬಂದರೆ, ರಜತ್ ಪಾಟಿದಾರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೆ ತನ್ನನ್ನು ತಾನು ಸಾಬೀತುಪಡಿಸಲು ಸಾಧ್ಯವಾಗದಿದ್ದರೂ ಆಡುವ XI ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹಾಗೆಯೆ ದೇವದತ್ ಪಡಿಕ್ಕಲ್ ಕೂಡ ಆಡಲಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ರವಿಚಂದ್ರನ್ ಅಶ್ವಿನ್ ತಮ್ಮ 100 ನೇ ಟೆಸ್ಟ್ ಪಂದ್ಯವನ್ನು ಧರ್ಮಶಾಲಾದಲ್ಲಿ ಆಡಲಿದ್ದಾರೆ.