
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ಸನಿಹದಲ್ಲಿದೆ. ಕಿವೀಸ್ ಪಡೆಯ ಉಳಿದಿರುವ ಐದು ವಿಕೆಟ್ ಕಿತ್ತರೆ ಟೆಸ್ಟ್ ಸರಣಿ ವಶಪಡಿಸಕೊಂಡ ಸಾಧನೆ ಭಾರತ ಮಾಡಲಿದೆ.

ಇಂದು ನಾಲ್ಕನೇ ದಿನವೇ ಪಂದ್ಯವನ್ನು ಮುಗಿಸುವ ಯೋಜನೆಯಲ್ಲಿದೆ ಕೊಹ್ಲಿ ಪಡೆ. ಇತ್ತ ನ್ಯೂಜಿಲೆಂಡ್ಗೆ ಗೆಲುವು ಸುಲಭವಿಲ್ಲ, ಡ್ರಾ ಸಾಧಿಸುವುದು ದೂರದ ಮಾತು. ಕಿವೀಸ್ ಪಡೆಯ ಗೆಲುವಿಗೆ ಇನ್ನೂ 400 ರನ್ಗಳ ಅಗತ್ಯವಿದೆ. ಕೈನಲ್ಲಿ ವಿಕೆಟ್ ಕೂಡ ಇಲ್ಲದ ಕಾರಣ ಸೋಲು ಕಟ್ಟಿಟ್ಟ ಬುತ್ತಿ. ಮೂರನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 140 ರನ್ ಗಳಿಸಿ 5 ವಿಕೆಟ್ಗಳನ್ನು ಕಳೆದುಕೊಂಡಿದೆ.

ಮಳೆ ಕಾಟದ ನಡುವೆಗೂ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಭಾರತ ತಂಡ ಮೊದಲ ಇನಿಂಗ್ಸ್ನಲ್ಲಿ 325 ರನ್ ಗಳಿಸಿ, ಬಳಿಕ ಕಿವೀಸ್ ಪಡೆಯನ್ನು ಪ್ರಥಮ ಇನಿಂಗ್ಸ್ನಲ್ಲಿ 62 ರನ್ಗಳ ಅಲ್ಪ ಮೊತ್ತಕ್ಕೆ ಆಲ್ಔಟ್ ಮಾಡಿತು. ಫಾಲೋ ಆನ್ ಹೇರದೆ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 2ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 69 ರನ್ಗಳಿಸಿತ್ತು.

ಮೂರನೇ ದಿನದಾಟ ಆರಂಭಿಸಿದ ಭಾರತ ಪರ ಮಯಾಂಕ್ ಅಗರ್ವಾಲ್ (62ರನ್, 108 ಎಸೆತ, 9ಬೌಂಡರಿ, 1 ಸಿಕ್ಸರ್) ಹಾಗೂ ಚೇತೇಶ್ವರ ಪೂಜಾರ (47 ರನ್, 97 ಎಸೆತ, 6 ಬೌಂಡರಿ, 1 ಸಿಕ್ಸರ್) ಜೋಡಿ ಉತ್ತಮ ಲಯ ಕಂಡುಕೊಂಡಿತು.

ಇದರ ನಡುವೆಯೂ ಅಜಾಜ್ ಪಟೇಲ್ (106ಕ್ಕೆ 4) ಹಾಗೂ ರಚಿನ್ ರವೀಂದ್ರ (56ಕ್ಕೆ 3) ಮಾರಕ ದಾಳಿಯಿಂದ ಗಮನಸೆಳೆದರು. ಬಳಿಕ ಉತ್ತಮ ಟಾರ್ಗೆಟ್ ಪೇರಿಸಿದ ಹಿನ್ನೆಲೆಯಲ್ಲಿ ಭಾರತ ತಂಡ 7 ವಿಕೆಟ್ಗೆ 276 ರನ್ಗಳಿಸಿ ಎರಡನೇ ಇನಿಂಗ್ಸ್ಗೆ ಡಿಕ್ಲೇರ್ ಘೋಷಿಸಿತ್ತು.

ನ್ಯೂಜಿಲೆಂಡ್ ಮತ್ತೊಮ್ಮೆ ಟೀಮ್ ಇಂಡಿಯಾ ಬೌಲರ್ಗಳ ದಾಳಿಗೆ ಸಿಲುಕಿ ಪರದಾಡಿತು. ಆದರೆ, ಕೇನ್ ವಿಲಿಯಮ್ಸನ್ ಸ್ಥಾನದಲ್ಲಿ ಆಡುವ ಅವಕಾಶ ಪಡೆದಿರುವ ಡ್ಯಾರಿಲ್ ಮಿಚೆಲ್ ಅದ್ಭುತ ಹೋರಾಟ ಪ್ರದರ್ಶಿಸಿದರು. 92 ಎಸೆತಗಳನ್ನು ಎದುರಿಸಿದ ಮಿಚೆಲ್ 7 ಫೋರ್ ಮತ್ತು 2 ಸಿಕ್ಸರ್ ಒಳಗೊಂಡ 60 ರನ್ ಗಳಿಸಿ ಔಟಾದರು.

6ನೇ ವಿಕೆಟ್ಗೆ ಜೊತೆಯಾಟ ಕಟ್ಟುತ್ತಿರುವ ಹೆನ್ರಿ ನಿಕೋಲ್ಸ್ (36*) ಮತ್ತು ರಚಿನ್ ರವೀಂದ್ರ (2*) ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೂರನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 140 ರನ್ ಗಳಿಸಿ 5 ವಿಕೆಟ್ಗಳನ್ನು ಕಳೆದುಕೊಂಡಿದೆ.

ಟೀಂ ಇಂಡಿಯಾ

IND vs NZ