India vs Pakistan: ಭಾರತ-ಪಾಕ್ ಕದನದಲ್ಲಿ ಸೃಷ್ಟಿಯಾಗಬಹುದಾದ ಪ್ರಮುಖ ದಾಖಲೆಗಳಿವು

|

Updated on: Oct 14, 2023 | 11:31 AM

India vs Pakistan, ICC ODI World Cup 2023: ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ವಿಶ್ವದ ಅತಿ ದೊಡ್ಡ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇನ್ನು ಈ ಪಂದ್ಯದಲ್ಲಿ ಉಭಯ ತಂಡಗಳ ಕ್ರಿಕೆಟಿಗರು ಹಲವು ಮೈಲಿಗಲ್ಲುಗಲನ್ನು ಸೃಷ್ಟಿಸುವ ತವಕದಲ್ಲಿದ್ದಾರೆ.

1 / 9
ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ವಿಶ್ವದ ಅತಿ ದೊಡ್ಡ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇನ್ನು ಈ ಪಂದ್ಯದಲ್ಲಿ ಉಭಯ ತಂಡಗಳ ಕ್ರಿಕೆಟಿಗರು ಹಲವು ಮೈಲಿಗಲ್ಲುಗಲನ್ನು ಸೃಷ್ಟಿಸುವ ತವಕದಲ್ಲಿದ್ದಾರೆ.

2 / 9
ರೋಹಿತ್ ಶರ್ಮಾ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ 300 ಸಿಕ್ಸರ್‌ಗಳ ಗಡಿ ದಾಟಲು ಇನ್ನು 3 ಸಿಕ್ಸರ್‌ಗಳ ದೂರದಲ್ಲಿದ್ದಾರೆ.

3 / 9
ಶ್ರೇಯಸ್ ಅಯ್ಯರ್: ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್ ಅಯ್ಯರ್ ಇಂದು ತಮ್ಮ 50 ನೇ ಏಕದಿನ ಪಂದ್ಯವನ್ನಾಡಲಿದ್ದಾರೆ. ಅಲ್ಲದೆ ಎಲ್ಲಾ ಮೂರು ಸ್ವರೂಪಗಳಲ್ಲಿ ಸಿಕ್ಸರ್‌ಗಳ ಶತಕವನ್ನು ಪೂರ್ಣಗೊಳಿಸಲು ಶ್ರೇಯಸ್‌ಗೆ 6 ಸಿಕ್ಸರ್‌ಗಳ ಅಗತ್ಯವಿದೆ.

4 / 9
ಶುಭ್‌ಮನ್ ಗಿಲ್: ಭಾರತದ ಯುವ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಅವರು ಏಕದಿನ ಕ್ರಿಕೆಟ್​ನಲ್ಲಿ 2000 ರನ್‌ಗಳನ್ನು ಪೂರೈಸಲು 83 ರನ್‌ಗಳ ಅಂತರದಲ್ಲಿದ್ದಾರೆ. ಸದ್ಯಕ್ಕೆ ಏಕದಿನದಲ್ಲಿ ಗಿಲ್ 1917 ರನ್ ಕಲೆಹಾಕಿದ್ದಾರೆ.

5 / 9
ವಿರಾಟ್ ಕೊಹ್ಲಿ: ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 150 ಕ್ಯಾಚ್‌ಗಳ ಮೈಲಿಗಲ್ಲನ್ನು ತಲುಪಲು ವಿರಾಟ್ ಕೊಹ್ಲಿ ಇನ್ನೂ 2 ಕ್ಯಾಚ್‌ಗಳ ದೂರದಲ್ಲಿದ್ದಾರೆ.

6 / 9
ಇಶಾನ್ ಕಿಶನ್: ಏಕದಿನದಲ್ಲಿ 1000 ರನ್‌ಗಳ ಮೈಲಿಗಲ್ಲು ಪೂರ್ಣಗೊಳಿಸಲು ಇಶಾನ್ ಕಿಶನ್ 67 ರನ್ ಗಳಿಸಬೇಕಾಗಿದೆ. ಸದ್ಯ ಇಶಾನ್ ಕಿಸಾನ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 933 ರನ್ ಬಾರಿಸಿದ್ದಾರೆ.

7 / 9
ಬಾಬರ್ ಆಝಂ: ಪಾಕಿಸ್ತಾನದ ನಾಯಕ ಬಾಬರ್ ಆಝಂ ಏಕದಿನದಲ್ಲಿ ಅರ್ಧಶತಕ ಕ್ಯಾಚ್‌ಗಳನ್ನು ಪೂರ್ಣಗೊಳಿಸಲು ಇನ್ನೂ ಮೂರು ಕ್ಯಾಚ್‌ಗಳ ದೂರದಲ್ಲಿದ್ದಾರೆ. ಬಾಬರ್ ಈಗ ಏಕದಿನದಲ್ಲಿ 47 ಕ್ಯಾಚ್‌ಗಳನ್ನು ಹಿಡಿದಿದ್ದಾರೆ.

8 / 9
ಹಸನ್ ಅಲಿ: ಏಕದಿನದಲ್ಲಿ ವಿಕೆಟ್‌ಗಳ ಶತಕವನ್ನು ಪೂರ್ಣಗೊಳಿಸಲು ಪಾಕಿಸ್ತಾನದ ಸ್ಟಾರ್ ಹಸನ್ ಅಲಿ ಇನ್ನೂ 3 ವಿಕೆಟ್‌ಗಳನ್ನು ಪಡೆಯಬೇಕಾಗಿದೆ.

9 / 9
ಫಖರ್ ಜಮಾನ್: ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ ಫಖರ್ ಜಮಾನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5000 ರನ್ ಪೂರ್ಣಗೊಳಿಸಲು 91 ರನ್ ಗಳಿಸಬೇಕಾಗಿದೆ.