- Kannada News Photo gallery Cricket photos ODI World Cup 2023 Points Table after New Zealand vs Bangladesh match
ಕಿವೀಸ್ಗೆ ಹ್ಯಾಟ್ರಿಕ್ ಜಯ; ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಭಾರತಕ್ಕೆ ಯಾವ ಸ್ಥಾನ?
ODI World Cup 2023 Points Table: ಭಾರತ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು 2 ಅಂಕ ಸಂಪಾದಿಸಿದೆ. ಆದರೆ ಮೊದಲೆರಡು ಸ್ಥಾನ ಪಡೆದಿರುವ ತಂಡಗಳಿಗಿಂತ ಅದರ ನೆಟ್ ರನ್ರೇಟ್ ಕಡಿಮೆ ಇದೆ. ಪ್ರಸ್ತುತ ಭಾರತ +1.500 ನೆಟ್ ರನ್ರೇಟ್ ಹೊಂದಿದೆ.
Updated on: Oct 14, 2023 | 7:27 AM

ಶುಕ್ರವಾರ ನಡೆದ ವಿಶ್ವಕಪ್ನ 11 ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಬಾಂಗ್ಲಾದೇಶವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ, ನ್ಯೂಜಿಲೆಂಡ್ ಏಕದಿನ ವಿಶ್ವಕಪ್ ಅಂಕಗಳ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.

ಕಿವೀಸ್ ಪಡೆ ಸತತ ಮೂರು ಪಂದ್ಯಗಳನ್ನು ಗೆದ್ದು, ಒಟ್ಟು ಆರು ಅಂಕ ಹಾಗೂ +1.604 ನೆಟ್ರನ್ರೇಟ್ನೊಂದಿಗೆ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ದಕ್ಷಿಣ ಆಫ್ರಿಕಾ ತಂಡ ಆಡಿರುವ ಎರಡು ಪಂದ್ಯಗಳಿಂದ ನಾಲ್ಕು ಅಂಕ ಹಾಗೂ +2.360 ನೆಟ್ ರನ್ರೇಟ್ನೊಂದಿಗೆ ಎರಡನೇ ಸ್ಥಾನದಲ್ಲಿದೆ.

ಭಾರತ ಕೂಡ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು 2 ಅಂಕ ಸಂಪಾದಿಸಿದೆ. ಆದರೆ ಮೊದಲೆರಡು ಸ್ಥಾನ ಪಡೆದಿರುವ ತಂಡಗಳಿಗಿಂತ ಅದರ ನೆಟ್ ರನ್ರೇಟ್ ಕಡಿಮೆ ಇದೆ. ಪ್ರಸ್ತುತ ಭಾರತ +1.500 ನೆಟ್ ರನ್ರೇಟ್ ಹೊಂದಿದೆ.

ಭಾರತದಂತೆ ಪಾಕಿಸ್ತಾನ ಕೂಡ ಎರಡು ಪಂದ್ಯಗಳನ್ನು ಗೆದ್ದಿದ್ದು, 2 ಅಂಕಗಳೊಂದಿಗೆ +0.927 ನೆಟ್ ರನ್ರೇಟ್ ಹೊಂದಿದ್ದು, ನಾಲ್ಕನೇ ಸ್ಥಾನದಲ್ಲಿದೆ.

ಇದೀಗ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಪರಸ್ಪರ ಗೆಲುವು ಸಾಧಿಸುವ ಮೂಲಕ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕುವ ಅವಕಾಶವನ್ನು ಹೊಂದಿವೆ.

ಹಾಲಿ ಚಾಂಪಿಯನ್ ಇಂಗ್ಲೆಂಡ್ ಇದುವರೆಗೆ ಆಡಿರುವ 2 ಪಂದ್ಯಗಳಲ್ಲಿ ಒಂದರಲ್ಲಿ ಸೋತು, ಒಂದರಲ್ಲಿ ಗೆದ್ದು 2 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.

ಈ ವಿಶ್ವಕಪ್‌ನಲ್ಲಿ ಸತತ ಎರಡನೇ ಪಂದ್ಯದಲ್ಲಿ ಸೋತರೂ, ಬಾಂಗ್ಲಾದೇಶ ಅಂಕಪಟ್ಟಿಯಲ್ಲಿ ತನ್ನ 6 ನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ಮೂರು ಪಂದ್ಯಗಳಿಂದ ಎರಡು ಅಂಕಗಳನ್ನು ಹೊಂದಿರುವ ಬಾಂಗ್ಲಾದ ನೆಟ್ ರನ್ರೇಟ್ -0.699 ಆಗಿದೆ.

ಉಳಿದಂತೆ ಈ ವಿಶ್ವಕಪ್‌ನಲ್ಲಿ ಶ್ರೀಲಂಕಾ, ನೆದರ್‌ಲ್ಯಾಂಡ್ಸ್, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ಇನ್ನೂ ಒಂದು ಪಂದ್ಯವನ್ನು ಗೆದ್ದಿಲ್ಲ.
























