3.5 ಕೋಟಿ ವೀಕ್ಷಣೆ..! ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದ ಭಾರತ- ಪಾಕ್ ಪಂದ್ಯ

Updated on: Oct 15, 2023 | 1:13 PM

India vs Pakistan, ICC World Cup 2023: ಭಾರತ-ಪಾಕಿಸ್ತಾನ ಪಂದ್ಯವು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ 3.5 ಕೋಟಿ ವೀಕ್ಷಣೆ ಕಂಡಿದ್ದು, ಲೈವ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್​ನಲ್ಲಿಯೇ ಇದು ದಾಖಲೆಯ ವೀಕ್ಷಣೆಯಾಗಿದೆ. ಇದು ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಪಂದ್ಯದ ಅತಿ ಹೆಚ್ಚು ವೀಕ್ಷಣೆ ಪಡೆದ ಹೊಸ ಜಾಗತಿಕ ದಾಖಲೆಯಾಗಿದೆ.

1 / 8
ಭಾರತ-ಪಾಕಿಸ್ತಾನ ಪಂದ್ಯವು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ 3.5 ಕೋಟಿ ವೀಕ್ಷಣೆ ಕಂಡಿದ್ದು, ಲೈವ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್​ನಲ್ಲಿಯೇ ಇದು ದಾಖಲೆಯ ವೀಕ್ಷಣೆಯಾಗಿದೆ. ಇದು ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಪಂದ್ಯದ ಅತಿ ಹೆಚ್ಚು ವೀಕ್ಷಣೆ ಪಡೆದ ಹೊಸ ಜಾಗತಿಕ ದಾಖಲೆಯಾಗಿದೆ.

ಭಾರತ-ಪಾಕಿಸ್ತಾನ ಪಂದ್ಯವು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ 3.5 ಕೋಟಿ ವೀಕ್ಷಣೆ ಕಂಡಿದ್ದು, ಲೈವ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್​ನಲ್ಲಿಯೇ ಇದು ದಾಖಲೆಯ ವೀಕ್ಷಣೆಯಾಗಿದೆ. ಇದು ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಪಂದ್ಯದ ಅತಿ ಹೆಚ್ಚು ವೀಕ್ಷಣೆ ಪಡೆದ ಹೊಸ ಜಾಗತಿಕ ದಾಖಲೆಯಾಗಿದೆ.

2 / 8

ಈ ಮೂಲಕ ಕಳೆದ ಐಪಿಎಲ್ 2023 ರಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ಸಮಯದಲ್ಲಿ ಮಾಡಿದ 3.2 ಕೋಟಿ ವೀಕ್ಷಕರ ದಾಖಲೆಯನ್ನು ಮುರಿದಿದೆ.

3 / 8

ವಿಶ್ವಕಪ್​ಗೂ ಮುನ್ನ ಕಳೆದ ತಿಂಗಳು ನಡೆದ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಡಿಸ್ನಿ ಹಾಟ್‌ಸ್ಟಾರ್ 2.8 ಕೋಟಿ ವೀಕ್ಷಕರ ದಾಖಲೆ ನಿರ್ಮಿಸಿತ್ತು.

4 / 8

ಇದಕ್ಕೂ ಮೊದಲು, ಈ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಈ ಹಿಂದೆ 2.53 ಕೋಟಿ ವೀಕ್ಷಕರ ದಾಖಲೆಯನ್ನು ದಾಖಲಿಸಿತ್ತು. ವಾಸ್ತವವಾಗಿ 2019 ರ ವಿಶ್ವಕಪ್​ನ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿ-ಫೈನಲ್ ಪಂದ್ಯವನ್ನು 2.53 ಕೋಟಿ ವೀಕ್ಷಕರು ವೀಕ್ಷಿಸಿದ್ದರು.

5 / 8

ಇನ್ನು ಭಾರತ-ಪಾಕಿಸ್ತಾನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನೆಲ್‌ಗಳಲ್ಲಿ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗಿದ್ದು, ಟಿವಿ ಪ್ರೇಕ್ಷಕರ ಅಂಕಿಅಂಶಗಳನ್ನು ದಾಖಲಿಸುವ ಸಂಸ್ಥೆಯಾದ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಈ ವಾರದ ಅಂತ್ಯದ ವೇಳೆಗೆ ಈ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತದೆ.

6 / 8

ಇದಲ್ಲದೆ ಪ್ರಮುಖ ಮಲ್ಟಿಪ್ಲೆಕ್ಸ್ ಆಪರೇಟರ್ ಪಿವಿಆರ್ ಐನಾಕ್ಸ್ ತನ್ನ ಆಯ್ದ ಚಿತ್ರಮಂದಿರಗಳಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಪ್ರದರ್ಶಿಸಿದ್ದು, ಅಲ್ಲಿಯೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, PVR ಐನಾಕ್ಸ್‌ನ ಅನೇಕ ಚಿತ್ರಮಂದಿರಗಳು ಹೌಸ್‌ಫುಲ್ ಆಗಿದ್ದವು ಎಂದು ತಿಳಿದುಬಂದಿದೆ.

7 / 8

ಹೆಚ್ಚಿನ ವೀಕ್ಷಕರನ್ನು ತನ್ನ ಪ್ಲಾಟ್‌ಫಾರ್ಮ್‌ಗೆ ಆಕರ್ಷಿಸಲು, ಡಿಸ್ನಿ ಹಾಟ್‌ಸ್ಟಾರ್ ಭಾರತದಲ್ಲಿನ ಮೊಬೈಲ್ ಬಳಕೆದಾರರಿಗೆ ಏಷ್ಯಾಕಪ್ ಮತ್ತು ಐಸಿಸಿ ಕ್ರಿಕೆಟ್ ವಿಶ್ವಕಪ್ ಸೇರಿದಂತೆ ಪ್ರಮುಖ ಕ್ರಿಕೆಟ್ ಪಂದ್ಯಾವಳಿಗಳ ಉಚಿತ ಸ್ಟ್ರೀಮಿಂಗ್ ಅನ್ನು ನೀಡುವುದಾಗಿ ಜೂನ್‌ನಲ್ಲಿ ಘೋಷಿಸಿತ್ತು.

8 / 8

ಕಳೆದ ವರ್ಷ, ಡಿಸ್ನಿ ಸ್ಟಾರ್ ಎಲ್ಲಾ ಐಸಿಸಿ ಈವೆಂಟ್‌ಗಳ ಡಿಜಿಟಲ್ ಮತ್ತು ದೂರದರ್ಶನ ಹಕ್ಕುಗಳನ್ನು 2027 ರ ಅಂತ್ಯದವರೆಗೆ $3 ಬಿಲಿಯನ್‌ಗೆ ಖರೀದಿಸಿತ್ತು.

Published On - 1:12 pm, Sun, 15 October 23

Loading...
Unable to load recommendations.
Follow Us