India vs south africa: ಟೀಮ್ ಇಂಡಿಯಾದಲ್ಲಿ ದ್ರಾವಿಡ್ ಇರುವುದೇ ದಕ್ಷಿಣ ಆಫ್ರಿಕಾದ ದೊಡ್ಡ ಚಿಂತೆ
TV9 Web | Updated By: ಝಾಹಿರ್ ಯೂಸುಫ್
Updated on:
Dec 20, 2021 | 6:31 PM
India vs south africa: ಈ ಬಾರಿ ಟೀಮ್ ಇಂಡಿಯಾ ಹೊಸ ಇತಿಹಾಸ ಬರೆಯಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಅದರಲ್ಲೂ 15 ವರ್ಷಗಳ ಹಿಂದೆ ರಾಹುಲ್ ದ್ರಾವಿಡ್ ಮೊಟ್ಟ ಮೊದಲ ಗೆಲುವು ತಂದುಕೊಟ್ಟ ಸೆಂಚುರಿಯನ್ ಮೈದಾನದ ಮೂಲಕವೇ ಈ ಬಾರಿ ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು ಆರಂಭಿಸುತ್ತಿದೆ.
1 / 6
ಭಾರತ-ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಸರಣಿ ಡಿಸೆಂಬರ್ 26 ರಿಂದ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯನ್ನು ಟೀಮ್ ಇಂಡಿಯಾ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಏಕೆಂದರೆ ಭಾರತ ತಂಡವು ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ.
2 / 6
ಹರಿಣರ ನಾಡಲ್ಲಿ ಟೀಮ್ ಇಂಡಿಯಾ ಈವರೆಗೆ 20 ಟೆಸ್ಟ್ ಪಂದ್ಯಗಳನ್ನು ಆಡಿದೆ. ಅದರಲ್ಲಿ ಗೆದ್ದಿರುವುದು ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ. ಇನ್ನು ಕಳೆದ ಬಾರಿ 2018 ರಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ದ 1-2 ಅಂತರದಿಂದ ಸರಣಿ ಸೋತಿತ್ತು. ಇದೀಗ ಮತ್ತೊಮ್ಮೆ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಆಡಲು ಸಜ್ಜಾಗಿದೆ.
3 / 6
ಆದರೆ ಈ ಬಾರಿ ರಾಹುಲ್ ದ್ರಾವಿಡ್ ಅವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಆಡುತ್ತಿರುವುದು ದಕ್ಷಿಣ ಆಫ್ರಿಕಾ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ವಿರುದ್ದ ಪಾರುಪತ್ಯ ಮೆರೆದಿದ್ದ ದಕ್ಷಿಣ ಆಫ್ರಿಕಾಗೆ ಮೊದಲ ಸೋಲು ತೋರಿಸಿದ್ದೇ ರಾಹುಲ್ ದ್ರಾವಿಡ್.
4 / 6
ಹೌದು, ಡಿಸೆಂಬರ್ 2006 ರಲ್ಲಿ ನಡೆದ ಸೆಂಚುರಿಯನ್ನಲ್ಲಿನ ಟೆಸ್ಟ್ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 123 ರನ್‌ಗಳಿಂದ ಸೋಲಿಸಿತು. ಇದು ದಕ್ಷಿಣ ಆಫ್ರಿಕಾದಲ್ಲಿ ಭಾರತ ಕ್ರಿಕೆಟ್ ತಂಡದ ಮೊದಲ ಟೆಸ್ಟ್ ಗೆಲುವು ಎಂಬುದು ವಿಶೇಷ. ಆ ಸಮಯದಲ್ಲಿ ಭಾರತ ಟೆಸ್ಟ್ ತಂಡದ ನಾಯಕ ರಾಹುಲ್ ದ್ರಾವಿಡ್. ಇದೀಗ ಅವರೇ ಟೀಮ್ ಇಂಡಿಯಾದ ಕೋಚ್ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿಯೇ ಈ ಹಿಂದಿಗಿಂತ ಈ ಬಾರಿ ಭಾರತ ತಂಡದ ಬಲಿಷ್ಠವಾಗಿ ಕಾಣಿಸಿಕೊಳ್ಳುತ್ತಿದೆ.
5 / 6
ಏಕೆಂದರೆ 15 ವರ್ಷಗಳ ಹಿಂದೆ ರಣತಂತ್ರ ಹೆಣೆದಿದ್ದ ಅದೇ ರಾಹುಲ್ ದ್ರಾವಿಡ್ ಇದೀಗ ಇಡೀ ತಂಡದ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಅಲ್ಲದೆ ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನೂ ಕೂಡ ಮೂಡಿಸಿದ್ದಾರೆ. ಏಕೆಂದರೆ ಟೀಮ್ ಇಂಡಿಯಾ ಅಂಡರ್-19 ಮತ್ತು ಭಾರತ-ಎ ತಂಡಗಳಲ್ಲಿ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿದ ಆಟಗಾರರೇ ಈಗ ಟೀಮ್ ಇಂಡಿಯಾದಲ್ಲಿದೆ. ಹೀಗಾಗಿ ಆಟಗಾರರು ಹಾಗೂ ಕೋಚ್ ನಡುವೆ ಈ ಹಿಂದಿಗಿಂತಲೂ ಉತ್ತಮ ಹೊಂದಾಣಿಕೆ ಕಂಡು ಬರುತ್ತಿದೆ.
6 / 6
ಹೀಗಾಗಿ ಈ ಬಾರಿ ಟೀಮ್ ಇಂಡಿಯಾ ಹೊಸ ಇತಿಹಾಸ ಬರೆಯಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಅದರಲ್ಲೂ 15 ವರ್ಷಗಳ ಹಿಂದೆ ರಾಹುಲ್ ದ್ರಾವಿಡ್ ಮೊಟ್ಟ ಮೊದಲ ಗೆಲುವು ತಂದುಕೊಟ್ಟ ಸೆಂಚುರಿಯನ್ ಮೈದಾನದ ಮೂಲಕವೇ ಈ ಬಾರಿ ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು ಆರಂಭಿಸುತ್ತಿದೆ. ಹೀಗಾಗಿ ಮೊದಲ ಪಂದ್ಯವೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.