SA vs IND 2nd T20I Weather: ಭಾರತ- ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯ ಕೂಡ ನಡೆಯುವುದು ಡೌಟ್: ಯಾಕೆ ನೋಡಿ
Gqeberha Weather Forecast, India vs South Africa 2nd T20I: ಭಾರತ- ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯವು ಒಂದೂ ಎಸೆತ ಕಾಣದೆ ಮಳೆಯ ಕಾರಣ ರದ್ದಾಯಿತು. ಇದೀಗ ಗೆಬರ್ಹದ ಸ್ಯಾಂಟ್ ಜಾರ್ಜ್ ಪಾರ್ಕ್ನಲ್ಲಿ ಆಯೋಜಿಸಿರುವ ಎರಡನೇ ಟಿ20 ಪಂದ್ಯ ಕೂಡ ನಡೆಯುವುದು ಅನುಮಾನ. ಮಂಗಳವಾರ ನಡೆಯಲಿರುವ ದ್ವಿತೀಯ ಟಿ20 ಪಂದ್ಯಕ್ಕೆ ಕೂಡ ಮಳೆ ಅಡ್ಡಿ ಪಡಿಸಲಿದೆ.
1 / 7
ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಅಂದುಕೊಂಡಂತೆ ಉತ್ತಮವಾಗಿ ಆರಂಭವಾಗಲಿಲ್ಲ. ಡರ್ಬನ್ನ ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಸೌತ್ ಆಫ್ರಿಕಾ - ಭಾರತ ನಡುವಣ ಮೊದಲ ಟಿ20 ಪಂದ್ಯವು ಒಂದೂ ಎಸೆತ ಕಾಣದೆ ಮಳೆಯ ಕಾರಣ ರದ್ದಾಯಿತು.
2 / 7
ಇದೀಗ ಉಭಯ ತಂಡಗಳು ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಗೆಬರ್ಹದ ಸ್ಯಾಂಟ್ ಜಾರ್ಜ್ ಪಾರ್ಕ್ನಲ್ಲಿ ಡಿಸೆಂಬರ್ 12 ಮಂಗಳವಾರದಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ದ್ವಿತೀಯ ಟಿ20 ಪಂದ್ಯ ಆಯೋಜಿಸಲಾಗಿದೆ. ಆದರೆ, ಈ ಪಂದ್ಯ ಕೂಡ ನಡೆಯುವುದು ಅನುಮಾನ.
3 / 7
ಡರ್ಬನ್‌ನಲ್ಲಿ ನಡೆಯಬೇಕಿದ್ದ ಪಂದ್ಯದಲ್ಲಿ ಟಾಸ್ ಪ್ರಕ್ರಿಯೆ ಕೂಡ ಮಾಡಲಾಗದೆ ರದ್ದುಗೊಳಿಸಲಾಯಿತು. ಇದು ಅಭಿಮಾನಿಗಳು ನಿರಾಸೆ ಉಂಟುಮಾಡಿತು. ಇದೀಗ ಮಂಗಳವಾರ ನಡೆಯಲಿರುವ ದ್ವಿತೀಯ ಟಿ20 ಪಂದ್ಯಕ್ಕೆ ಕೂಡ ಮಳೆ ಅಡ್ಡಿ ಪಡಿಸಲಿದೆ ಎಂದು ವರದಿ ಆಗಿದೆ.
4 / 7
ಭಾರತ-ಆಫ್ರಿಕಾ ಎರಡನೇ ಟಿ20 ಪಂದ್ಯ ನಡೆಯುವ ದಿನ ಶೇ. 45ರಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಅಭಿಮಾನಿಗಳಿಗೆ ಹಾಗೂ ಆಟಗಾರರಿಗೆ ಸಂತಸದ ಸುದ್ದಿ ಸಿಕ್ಕಿಲ್ಲ. ಇನ್ನು ಕೆಲವೇ ತಿಂಗಳುಗಳಲ್ಲಿ ಟಿ20 ವಿಶ್ವಕಪ್ ಬರಲಿರುವುದರಿಂದ ಆಟಗಾರರಿಗೆ ಇದು ದೊಡ್ಡ ಹೊಡೆತವಾಗಿದೆ.
5 / 7
ಭಾರತ vs ದಕ್ಷಿಣ ಆಫ್ರಿಕಾ ದ್ವಿತೀಯ ಟಿ20 ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಪಂದ್ಯಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮ್ ಮಾಡುತ್ತದೆ.
6 / 7
ಭಾರತ ಹಾಗೂ ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8:30ಕ್ಕೆ ಆರಂಭವಾಗಲಿದೆ. ಉಳಿದಿರುವುದು ಕೇಲವ ಎರಡು ಟಿ20 ಪಂದ್ಯ ಆಗಿರುವುದರಿಂದ ಎರಡೂ ಪಂದ್ಯವನ್ನು ಗೆದ್ದ ತಂಡ ಸರಣಿ ವಶಪಡಿಸಿಕೊಳ್ಳಲಿದೆ.
7 / 7
ಭಾರತ ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪ ಹಾಯಕ), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್.