Kensington Oval Pitch Report: ದ್ವಿತೀಯ ಏಕದಿನ ಪಂದ್ಯ ನಡೆಯಲಿರುವ ಕೆನ್ಸಿಂಗ್ಟನ್ ಓವಲ್ ಪಿಚ್ ಹೇಗಿದೆ?: ಯಾರಿಗೆ ಹೆಚ್ಚು ಸಹಕಾರಿ
IND vs WI 2nd ODI: ಎರಡನೇ ಏಕದಿನ ಪಂದ್ಯ ನಡೆಯಲಿರುವ ಕೆನ್ನಿಂಗ್ಟನ್ ಓವಲ್ ಪಿಚ್ ಕೂಡ ಅದ್ಭುತವಾಗಿದೆ. ಕೆನ್ಸಿಂಗ್ಟನ್ ಓವಲ್ನ ಮೇಲ್ಮೈ ಬೌಲಿಂಗ್ ಸ್ನೇಹಿಯಾಗಿದೆ. ಇದು ನಿಧಾನವಾದ ಪಿಚ್ ಆಗಿದ್ದು ವೇಗಿಗಳಿಗಿಂತ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಾಯ ಮಾಡುತ್ತದೆ.
1 / 7
ಬಾರ್ಬಡೊಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಇಂದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ದ್ವಿತೀಯ ಏಕದಿನ ಪಂದ್ಯ ನಡೆಯಲಿದೆ. ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು.
2 / 7
ಪ್ರಥಮ ಏಕದಿನದಲ್ಲಿ ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ಕೆರಿಬಿಯನ್ ಪಡೆ ಅಲ್ಪ ಮೊತ್ತಕ್ಕೆ ಆಲೌಟ್ ಆಗಿ ರೋಹಿತ್ ಪಡೆ 5 ವಿಕೆಟ್ಗಳಿಂದ ಗೆದ್ದಿತ್ತು. ಇದೀಗ ಎರಡನೇ ಪಂದ್ಯದಲ್ಲೂ ಭಾರತ ಗೆದ್ದು ಸರಣಿ ವಶಪಡಿಸಿಕೊಳ್ಳುವ ಪ್ಲಾನ್ನಲ್ಲಿದೆ.
3 / 7
ಎರಡನೇ ಏಕದಿನ ಪಂದ್ಯ ನಡೆಯಲಿರುವ ಕೆನ್ಸಿಂಗ್ಟನ್ ಓವಲ್ ಪಿಚ್ ಕೂಡ ಅದ್ಭುತವಾಗಿದೆ. ಕೆನ್ಸಿಂಗ್ಟನ್ ಓವಲ್ನ ಮೇಲ್ಮೈ ಬೌಲಿಂಗ್ ಸ್ನೇಹಿಯಾಗಿದೆ. ಇದು ನಿಧಾನವಾದ ಪಿಚ್ ಆಗಿದ್ದು ವೇಗಿಗಳಿಗಿಂತ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಾಯ ಮಾಡುತ್ತದೆ. ಇದು ಮೊದಲ ಏಕದಿನದಲ್ಲಿ ಸಾಭೀತಾಗಿತ್ತು.
4 / 7
ಈ ಪಿಚ್ನಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 229. ಒಟ್ಟು 50 ಪಂದ್ಯಗಳು ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದಿವೆ. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 22 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ತಂಡ 26 ಗೆದ್ದಿದೆ. ಆದರೆ, ಇಲ್ಲಿ ಆಡಿದ ಕಳೆದ 11 ಪಂದ್ಯಗಳ ಪೈಕಿ 8 ಪಂದ್ಯ ಚೇಸಿಂಗ್ ಮೂಲಕ ಗೆದ್ದಿದೆ.
5 / 7
ಇಲ್ಲಿ ದಾಖಲಾದ ಅತ್ಯಧಿಕ ಸ್ಕೋರ್ 364 ಆಗಿದೆ. ಇದು ಈ ಮೈದಾನದಲ್ಲಿ ದಾಖಲಾದ ಅತ್ಯಧಿಕ ಚೇಸ್ ಕೂಡ ಹೌದು. 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಈ ಸಾಧನೆ ಗೈದಿತ್ತು. 2007ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐರ್ಲೆಂಡ್ ಗಳಿಸಿದ 91 ರನ್‌ಗಳು ಇಲ್ಲಿ ದಾಖಲಾದ ಲೋ ಸ್ಕೋರ್.
6 / 7
ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುವ ಈ ಪಿಚ್ನಲ್ಲಿ ಓರ್ವ ವೇಗಿಯನ್ನು ಕೈಬಿಡುವ ಸಾಧ್ಯತೆ ಇದೆ. ಮುಖೇಶ್ ಕುಮಾರ್ ಬದಲಿಗೆ ಯುಜ್ವೇಂದ್ರ ಚಹಲ್ ಕಣಕ್ಕಿಳಿಯಬಹುದು. ಕುಲ್ದೀಪ್ ಯಾದವ್ ಹಾಗೂ ರವೀಂದ್ರ ಜಡೇಜಾ ಸ್ಪಿನ್ ಜಾದು ಈಗಾಗಲೇ ಎದುರಾಳಿಗರಲ್ಲಿ ನಡುಕ ಹುಟ್ಟಿಸಿದೆ.
7 / 7
ಉಮ್ರಾನ್ ಮಲಿಕ್ ಇನ್ನಷ್ಟು ಮಾರಕವಾಗಬೇಕಿದೆ. ಶಾರ್ದೂಲ್ ಥಾಕೂರ್ ಹಾಗೂ ಹಾರ್ದಿಕ್ ಪಾಂಡ್ಯ ಕಳೆದ ಪಂದ್ಯದಲ್ಲಿ ತಲಾ ಒಂದೊಂದು ವಿಕೆಟ್ ಕಿತ್ತಿದ್ದರು.