IND vs WI: 2ನೇ ಏಕದಿನ ಪಂದ್ಯದಲ್ಲಿ ದಾಖಲೆ ಬರೆಯಲು ಸಜ್ಜಾದ ರೋಹಿತ್, ಕೊಹ್ಲಿ, ಜಡೇಜಾ

IND vs WI: ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಮೂವರು ಆಟಗಾರರು ಮೂರು ದಾಖಲೆಗಳನ್ನು ಮುರಿಯುವ ಹೊಸ್ತಿಲಿನಲ್ಲಿದ್ದಾರೆ.

ಪೃಥ್ವಿಶಂಕರ
|

Updated on: Jul 29, 2023 | 10:46 AM

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯವು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್‌ನಲ್ಲಿ ಶನಿವಾರ ಅಂದರೆ ಜುಲೈ 29 ರಂದು ತನ್ನ ಎರಡನೇ ಏಕದಿನ ಪಂದ್ಯವನ್ನು ಆಡಲಿದೆ.

1 / 9
ಇನ್ನು ಇದೇ ಮೈದಾನದಲ್ಲಿ ಮೊದಲ ಏಕದಿನ ಪಂದ್ಯವನ್ನಾಡಿದ್ದ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಐದು ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ಮತ್ತೊಮ್ಮೆ ಅದೇ ಪ್ರದರ್ಶನವನ್ನು ಮುಂದುವರೆಸಲು ರೋಹಿತ್ ಬಳಗ ಪ್ರಯತ್ನಿಸಲಿದೆ. ಇನ್ನೊಂದೆಡೆ ವಿಂಡೀಸ್ ಬಳಗ ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ಜೀವಂತವಾಗಿಡಲು ಪ್ರಯತ್ನಿಸಲಿದೆ.

2 / 9
2006 ರಿಂದ ಕೆರಿಬಿಯನ್ ನಾಡಲ್ಲಿ ಏಕದಿನ ಸರಣಿ ಗೆಲ್ಲುತ್ತಾ ಬಂದಿರುವ ಟೀಂ ಇಂಡಿಯಾ, ವಿಂಡೀಸ್ ವಿರುದ್ಧ ಆಡಿರುವ ಕೊನೆಯ ಒಂಬತ್ತು ಏಕದಿನ ಪಂದ್ಯಗಳನ್ನು ಗೆದ್ದು ಬೀಗಿದೆ. ಹೀಗಾಗಿ ಈ ಪಂದ್ಯದಲ್ಲೂ ಭಾರತ ಗೆಲುವಿನ ಫೆವರೆಟ್ ತಂಡವಾಗಿದೆ. ಇನ್ನು ಇದೇ ಪಂದ್ಯದಲ್ಲಿ ಟೀಂ ಇಂಡಿಯಾದ ಮೂವರು ಆಟಗಾರರು ಮೂರು ದಾಖಲೆಗಳನ್ನು ಮುರಿಯುವ ಹೊಸ್ತಿಲಿನಲ್ಲಿದ್ದಾರೆ.

3 / 9
ರವೀಂದ್ರ ಜಡೇಜಾ: ಇದುವರೆಗೆ ಆಡಿರುವ 30 ಏಕದಿನ ಪಂದ್ಯಗಳಲ್ಲಿ ಒಟ್ಟು 44 ವಿಕೆಟ್‌ಗಳನ್ನು ಪಡೆದಿರುವ ಸ್ಟಾರ್ ಆಲ್‌ರೌಂಡರ್ ಜಡೇಜಾ ಭಾರತ-ವೆಸ್ಟ್ ಇಂಡೀಸ್ ಏಕದಿನ ಮುಖಾಮುಖಿಯಲ್ಲಿ ಅತ್ಯಧಿಕ ವಿಕೆಟ್ ಉರುಳಿಸಿದ ಬೌಲರ್​ಗಳ ಪೈಕಿ ಜಂಟಿಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

4 / 9
ಪ್ರಸ್ತುತ ಲೆಜೆಂಡರಿ ವೆಸ್ಟ್ ಇಂಡೀಸ್ ವೇಗಿ ಕರ್ಟ್ನಿ ವಾಲ್ಷ್ ತಮ್ಮ ವೃತ್ತಿಜೀವನದಲ್ಲಿ ಭಾರತದ ವಿರುದ್ಧ ಆಡಿದ 38 ಪಂದ್ಯಗಳಲ್ಲಿ 44 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಇದೀಗ ಜಡೇಜಾ ಎರಡನೇ ಪಂದ್ಯದಲ್ಲಿ ಕನಿಷ್ಠ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ, ಭಾರತ-ವೆಸ್ಟ್ ಇಂಡೀಸ್ ಏಕದಿನ ಕಾಳಗದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲಿದ್ದಾರೆ.

5 / 9
ವಿರಾಟ್ ಕೊಹ್ಲಿ: ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಈ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಬ್ಯಾಟಿಂಗ್​ಗೆ ಇಳಿದು ಶತಕ ಸಿಡಿಸಿದರೆ ಅಂದರೆ, 102 ರನ್ ಬಾರಿಸಿದರೆ, ಏಕದಿನದಲ್ಲಿ 13 ಸಾವಿರ ರನ್ ಪೂರೈಸಲಿದ್ದಾರೆ.

6 / 9
ಪ್ರಸ್ತುತ ಕೊಹ್ಲಿ ಏಕದಿನ ಮಾದರಿಯಲ್ಲಿ 12,898 ರನ್ ಬಾರಿಸಿದ್ದು, ಈ ಪಂದ್ಯದಲ್ಲಿ 102 ರನ್‌ ಸಿಡಿಸಿದರೆ, ಏಕದಿನ ಮಾದರಿಯಲ್ಲಿ 13,000 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಿದ ಎರಡನೇ ಭಾರತೀಯ ಮತ್ತು ಒಟ್ಟಾರೆ ಐದನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಅಲ್ಲದೆ ಅತಿ ವೇಗವಾಗಿ 13 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಆಗಲಿದ್ದಾರೆ.

7 / 9
ಕೊಹ್ಲಿ-ರೋಹಿತ್: ಕೊಹ್ಲಿ ಮತ್ತು ರೋಹಿತ್ ಇಲ್ಲಿಯವರೆಗೆ ಏಕದಿನದಲ್ಲಿ 85 ಬಾರಿ ಒಟ್ಟಿಗೆ ಬ್ಯಾಟ್ ಮಾಡಿದ್ದಾರೆ. ಇದರಲ್ಲಿ ಈ ಜೋಡಿ ಒಟ್ಟಾಗಿ 4998 ರನ್ ಕಲೆಹಾಕಿದೆ. ಇದೀಗ ಈ ಇಬ್ಬರು ಈ ಪಂದ್ಯದಲ್ಲಿ 2 ರನ್​ಗಳ ಜೊತೆಯಾಟ ನಡೆಸಿದರೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟಾಗಿ 5000 ರನ್ ಪೂರೈಸಿದ ಎಂಟನೇ ಬ್ಯಾಟಿಂಗ್ ಜೋಡಿ ಎನಿಸಿಕೊಳ್ಳಲಿದ್ದಾರೆ.

8 / 9
ಈ ಮೂರು ದಾಖಲೆಗಳಲ್ಲದೆ, ಏಕದಿನದಲ್ಲಿ 10,000 ರನ್ ಪೂರೈಸಿದ ಆರನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ರೋಹಿತ್ ಪಾತ್ರರಾಗಲಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ಎಂಎಸ್ ಧೋನಿಯಂತಹ ಆಟಗಾರರನ್ನು ಒಳಗೊಂಡಿರುವ ಗಣ್ಯರ ಪಟ್ಟಿಗೆ ಸೇರಲು ರೋಹಿತ್​​ಗೆ ಇನ್ನು 163 ರನ್‌ಗಳ ಅಗತ್ಯವಿದೆ.

9 / 9
Follow us
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು

ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ

ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ

ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ

ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ

ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ