R Ashwin: ವಿಂಡೀಸ್ ವಿರುದ್ಧ 75 ವಿಕೆಟ್ ಪಡೆದು ಅನಿಲ್ ಕುಂಬ್ಳೆ ದಾಖಲೆ ಮುರಿದ ಅಶ್ವಿನ್..!

|

Updated on: Jul 24, 2023 | 1:50 PM

India Vs West Indies, 2nd Test: ವೆಸ್ಟ್ ಇಂಡೀಸ್ ವಿರುದ್ಧ ಇದುವರೆಗೆ ಒಟ್ಟು 13 ಟೆಸ್ಟ್ ಪಂದ್ಯಗಳನ್ನಾಡಿರುವ ಅಶ್ವಿನ್ 77 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

1 / 7
ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯ ಇಂದು ಮುಕ್ತಾಯಗೊಳ್ಳಲಿದೆ. ಪಂದ್ಯದಲ್ಲಿ ಹಿಡಿತ ಸಾಧಿಸಿರುವ ಭಾರತ, ಸರಣಿಯನ್ನು ತನ್ನದಾಗಿಸಿಕೊಳ್ಳುವ ತವಕದಲ್ಲಿದೆ. ಭಾರತ ಗೆಲ್ಲಬೇಕೆಂದರೆ ವಿಂಡೀಸ್ ಪಾಳಯದ 8 ವಿಕೆಟ್​ಗಳನ್ನು ಉರುಳಿಸಿಬೇಕಾಗಿದೆ. ಹಾಗಾಗಿ ಗೆಲುವಿನ ಜವಬ್ದಾರಿ ತಂಡದ ವೇಗಿಗಳ ಮೇಲಿದೆ.

2 / 7
ಈಗಾಗಲೇ ವಿಂಡೀಸ್ ಬ್ಯಾಟರ್​ಗಳ ವಿಕೆಟ್ ಬೇಟೆ ಆರಂಭಿಸಿದರು ರವಿಚಂದ್ರನ್ ಅಶ್ವಿನ್, ವಿಂಡೀಸ್ ಆರಂಭಿಕರನ್ನು ಪೆವಿಲಿಯನ್​ಗಟ್ಟುವಲ್ಲಿ ಯಶ್ವಿಯಾಗಿದ್ದಾರೆ. ಇದರೊಂದಿಗೆ ವಿಂಡೀಸ್ ನೆಲದಲ್ಲಿ ಅವರ ವಿರುದ್ಧವೇ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ.

3 / 7
ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯುತ್ತಿರುವ ಸರಣಿಯ 2 ನೇ ಟೆಸ್ಟ್‌ನ 4 ನೇ ದಿನದಂದು 2 ವಿಕೆಟ್ ಉರುಳಿಸಿದ ಅಶ್ವಿನ್, ಟೀಂ ಇಂಡಿಯಾದ ಮಾಜಿ ದಂತಕಥೆ ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿದ್ದಾರೆ.

4 / 7
ವೆಸ್ಟ್ ಇಂಡೀಸ್ ವಿರುದ್ಧ ಇದುವರೆಗೆ ಒಟ್ಟು 13 ಟೆಸ್ಟ್ ಪಂದ್ಯಗಳನ್ನಾಡಿರುವ ಅಶ್ವಿನ್ 77 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.

5 / 7
ಈ ಹಿಂದೆ 17 ಟೆಸ್ಟ್ ಪಂದ್ಯಗಳಲ್ಲಿ 74 ವಿಕೆಟ್ ಪಡೆದಿದ್ದ ಕನ್ನಡಿಗ ಅನಿಲ್ ಕುಂಬ್ಳೆ ಹೆಸರಿನಲ್ಲಿ ಈ ದಾಖಲೆ ಇತ್ತು.

6 / 7
ವಿಂಡೀಸ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್​ಗಳ ಪೈಕಿ 89 ವಿಕೆಟ್​ಗಳೊಂದಿಗೆ ಕಪಿಲ್ ದೇವ್ ಅಗ್ರಸ್ಥಾನದಲ್ಲಿದ್ದಾರೆ.

7 / 7
ಇನ್ನು ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಸರಣಿಯಲ್ಲಿ ರವಿಚಂದ್ರನ್ ಅಶ್ವಿನ್, ಇದುವರೆಗಿನ ಸರಣಿಯಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಡೊಮಿನಿಕಾದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಒಟ್ಟು 12 ವಿಕೆಟ್ ಉರುಳಿಸಿದ್ದರು. ಎರಡನೇ ಟೆಸ್ಟ್‌ನಲ್ಲಿ ಇದುವರೆಗೆ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವಾಸ್ತವವಾಗಿ, ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಅರ್ಧಶತಕವನ್ನೂ ಬಾರಿಸಿದ್ದರು.