IND vs WI: ಭಾರತ-ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯದ ಕೆಲ ರೋಚಕ ಫೋಟೋಗಳು
TV9 Web | Updated By: Vinay Bhat
Updated on:
Jul 23, 2022 | 9:43 AM
India vs West Indies: ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 3 ರನ್ ಗಳ ರೋಚಕ ಗೆಲುವು ಸಾಧಿಸಿದೆ.
1 / 7
ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 3 ರನ್ ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
2 / 7
ನಾಯಕ ಶಿಖರ್ ಧವನ್, ಶುಭ್ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದಿಂದ ಭಾರತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿತು. ಗಿಲ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.
3 / 7
ಧವನ್ ಶತಕದ ಅಂಚಿನಲ್ಲಿ ಎಡವಿದರು. 99 ಎಸೆತಗಳಲ್ಲಿ 10 ಫೋರ್, 3 ಸಿಕ್ಸರ್ ಸಿಡಿಸಿ 97 ರನ್ ಗೆ ಬ್ಯಾಟ್ ಕೆಳಗಿಟ್ಟರು.
4 / 7
ಅಯ್ಯರ್ ಕೂಡ 57 ಎಸೆತಗಳಲ್ಲಿ ಶ್ರೇಯಸ್ 5 ಫೋರ್, 2 ಸಿಕ್ಸರ್ ಬಾರಿಸಿ 54 ರನ್ ಕಲೆಹಾಕಿದರು. ನಂತರ ಬಂದ ಬ್ಯಾಟರ್ ಗಳ ಪೈಕಿ ದೀಪಕ್ ಹೂಡ (27) ಹಾಗೂ ಅಕ್ಷರ್ ಪಟೇಲ್ (21) ಕೊಂಚ ರನ್ ಗಳಿಸಿದ್ದು ಬಿಟ್ಟರೆ ಉಳಿದವರೆಲ್ಲ ಬೇಗನೆ ಪೆವಿಲಿಯನ್ ಸೇರಿಕೊಂಡರು.
5 / 7
309 ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ನಂತರ ಖೈಲ್ ಮೇಯೆಯರ್ಸ್ (75) ಹಾಗೂ ಶಮರ್ ಬ್ರೂಕ್ಸ್ (46) ಭರ್ಜರಿ ಬ್ಯಾಟಿಂಗ್ ನಡೆಸಿದರು. ಬ್ರಾಂಡನ್ ಕಿಂಗ್ ಕೂಡ 66 ಎಸೆತಗಳಲ್ಲಿ 54 ರನ್ ಗಳಿಸಿ ಗೆಲುವಿಗೆ ಹೋರಾಟ ನಡೆಸಿದರು.
6 / 7
ಅಖೆಲ್ ಹುಸೈನ್ (32*) ಹಾಗೂ ರೊಮಾರಿಯೊ ಶೆಫೆರ್ಡ್ (39*) ಕೊನೆ ಕ್ಷಣದಲ್ಲಿ ಜಯಕ್ಕೆ ಸಾಕಷ್ಟು ಹೋರಾಟ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ವಿಂಡೀಸ್ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿತಷ್ಟೆ.
7 / 7
ಭಾರತ ಪರ ಮೊಹಮ್ಮದ್ ಸಿರಾಜ್ 10 ಓವರ್ಗೆ 57 ರನ್ ನೀಡಿ 2 ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ ಹಾಗೂ ಚಹಲ್ ಕೂಡ 2 ವಿಕೆಟ್ ಕಿತ್ತರು.