IND vs WI: ಭಾರತ-ವೆಸ್ಟ್ ಇಂಡೀಸ್ ದ್ವಿತೀಯ ಏಕದಿನ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿದೆ ನೋಡಿ
TV9 Web | Updated By: Vinay Bhat
Updated on:
Jul 25, 2022 | 10:58 AM
India vs West Indies: ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲೂ ಭಾರತ ರೋಚಕ ಗೆಲುವು ಕಂಡಿದೆ. ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ಕಾದಾಟದಲ್ಲಿ ಟೀಮ್ ಇಂಡಿಯಾ 2 ವಿಕೆಟ್ ಗಳಿಂದ ಗೆದ್ದು 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.
1 / 6
ಟ್ರಿನಿಡಾಡ್ ನ ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲೂ ಭಾರತ ರೋಚಕ ಗೆಲುವು ಕಂಡಿದೆ. ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ಕಾದಾಟದಲ್ಲಿ ಟೀಮ್ ಇಂಡಿಯಾ 2 ವಿಕೆಟ್ ಗಳಿಂದ ಗೆದ್ದು 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.
2 / 6
7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಅಕ್ಷರ್ ಪಟೇಲ್ ವಿಂಡೀಸ್ ಲೆಕ್ಕಚಾರವನ್ನು ತಲೆಕೆಳಗಾಗಿಸಿದರು. ಕ್ರೀಸ್ಗೆ ಬಂದಾಗಿನಿಂದ ಸ್ಫೋಟಕ ಆಟವಾಡಿದ ಇವರು ಕೇವಲ 35 ಎಸೆತಗಳಲ್ಲಿ 3 ಫೋರ್ ಹಾಗೂ ಬರೋಬ್ಬರಿ 5 ಸಿಕ್ಸರ್ ಸಿಡಿಸಿ ಅಜೇಯ 64 ರನ್ ಚಚ್ಚಿದರು.
3 / 6
100 ರನ್ ಗೂ ಮೊದಲೇ 3 ವಿಕೆಟ್ ಕಳೆದುಕೊಂಡಾಗ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ಸಂಜು ಸ್ಯಾಮ್ಸನ್ ಎಚ್ಚರಿಕೆಯ ಆಟವಾಡಿ ತಂಡಕ್ಕೆ ಆಸರೆಯಾದರು. ವಿಕೆಟ್ ಕಳೆದುಕೊಳ್ಳದಂತೆ ರನ್ ಕಲೆಹಾಕುತ್ತಾ ಸಾಗಿದ ಈ ಜೋಡಿ 99 ರನ್ ಗಳ ಕಾಣಿಕೆ ನೀಡಿದರು. ಇಬ್ಬರೂ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.
4 / 6
71 ಎಸೆತಗಳಲ್ಲಿ 4 ಫೋರ್, 1 ಸಿಕ್ಸರ್ ನೊಂದಿಗೆ ಅಯ್ಯರ್ 63 ರನ್ ಗೆ ಔಟಾದರೆ, ಸಂಜು 51 ಎಸೆತಗಳಲ್ಲಿ ತಲಾ 3 ಫೋರ್ ಸಿಕ್ಸರ್ ಬಾರಿಸಿ 54 ರನ್ ಗಳಿಸಿದರು.
5 / 6
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಶಾಯ್ ಹೋಪ್ 115 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. 74 ರನ್ ಗಳಿಸಿದ ನಾಯಕ ನಿಕೊಲಸ್ ಪೂರನ್ ತಂಡದ ಉತ್ತಮ ಮೊತ್ತಕ್ಕೆ ಅಡಿಪಾಯ ಹಾಕಿದರು.
6 / 6
ಆಲ್ರೌಂಡರ್ ಅಕ್ಷರ್ ಪಟೇಲ್ ಅವರ ಸ್ಫೋಟಕ ಆಟ ಒಂದು ಕಡೆಯಾದರೆ, ಶ್ರೇಯಸ್ ಅಯ್ಯರ್ ಹಾಗೂ ಸಂಜು ಸ್ಯಾಮ್ಸನ್ ಅರ್ಧಶತಕ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿತು. ಟಾರ್ಗೆಟ್ 300ರ ಗಡಿ ದಾಟಿದ್ದರೂ ಭಾರತ ಇನ್ನೆರಡು ಎಸೆತ ಬಾಕಿ ಇರುವಂತೆ ಗೆದ್ದು ಬೀಗಿದೆ.