- Kannada News Photo gallery Cricket photos Here is the list of Team India Players Who made it into the international arena under Suesh Raina
Suresh Raina: ಸುರೇಶ್ ರೈನಾ ನಾಯಕತ್ವದಡಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಕ್ರಿಕೆಟಿಗರು ಯಾರು ಗೊತ್ತೇ?
Virat Kohli: ಶುರೇಶ್ ರೈನಾ ಭಾರತ ತಂಡದ ಪರ ನಾಯಕನಾಗಿ 12 ಏಕದಿನ, ಮೂರು ಟಿ20 ಪಂದ್ಯಗಳನ್ನು ಮುನ್ನಡೆಸಿದ್ದಾರೆ. ಇವರ ನಾಯಕತ್ವದಡಿಯಲ್ಲಿ ಕೆಲ ಖ್ಯಾತ ಕ್ರಿಕೆಟಿಗರು ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಕೂಡ ಮಾಡಿದ್ದಾರೆ. ಅವರು ಯಾರು ಎಂಬುದನ್ನು ನೋಡೋಣ.
Updated on: Jul 26, 2022 | 10:43 AM

ಭಾರತ ಕ್ರಿಕೆಟ್ ತಂಡ ಇಂದಿನ ವರೆಗೆ ಅನೇಕ ಶ್ರೇಷ್ಠ ನಾಯಕರನ್ನು ಕಂಡಿದೆ. ಕಪಿಲ್ ದೇವ್, ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಸಾಕಷ್ಟು ಯಶಸ್ವಿ ಕಂಡಿದ್ದಾರೆ. ಮುಖ್ಯ ನಾಯಕರ ಅನುಪಸ್ಥಿತಿಯಲ್ಲಿ ತಂಡದ ಇತರೆ ಅನುಭವಿ ಆಟಗಾರರು ಕೂಡ ತಾತ್ಕಾಲಿಕ ನಾಯಕನ ಪಟ್ಟ ಅಲಂಕರಿಸುವುದು ವಾಡಿಕೆ. ಇದರಲ್ಲೂ ಯಶಸ್ಸು ಕಂಡವರು ಸುರೇಶ್ ರೈನಾ.

ಹೌದು, ರೈನಾ ಭಾರತ ತಂಡದ ಪರ ನಾಯಕನಾಗಿ 12 ಏಕದಿನ, ಮೂರು ಟಿ20 ಪಂದ್ಯಗಳನ್ನು ಮುನ್ನಡೆಸಿದ್ದಾರೆ. ಇದರಲ್ಲಿ ಮೂರೂ ಟಿ20 ಪಂದ್ಯದಲ್ಲಿ ಭಾರತ ಗೆದ್ದರೆ 6 ಏಕದಿನ ಪಂದ್ಯದಲ್ಲಿ ಜಯ ಕಂಡಿದೆ. ಇವರ ನಾಯಕತ್ವದಡಿಯಲ್ಲಿ ಕೆಲ ಖ್ಯಾತ ಕ್ರಿಕೆಟಿಗರು ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಕೂಡ ಮಾಡಿದ್ದಾರೆ. ಅವರು ಯಾರು ಎಂಬುದನ್ನು ನೋಡೋಣ.

ವಿರಾಟ್ ಕೊಹ್ಲಿ: ಈ ವಿಚಾರ ಅನೇಕರಿಗೆ ತಿಳಿದಿರಲು ಸಾಧ್ಯವಿಲ್ಲ. ಕಿಂಗ್ ಕೊಹ್ಲಿ 2010 ರಲ್ಲಿ ಜಿಂಬಾಬ್ವೆ ವಿರುದ್ಧ ಸುರೇಶ್ ರೈನಾ ನಾಯಕತ್ವದಡಿಯಲ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ ಕೊಹ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಜೇಯ 26 ರನ್ ಬಾರಿಸಿದ್ದರು.

ರವಿಚಂದ್ರನ್ ಅಶ್ವಿನ್: ಆರ್. ಅಶ್ವಿನ್ ಕೂಡ ಕೊಹ್ಲಿ ಜೊತೆಗೆನೇ ರೈನಾ ನಾಯಕತ್ವದಲ್ಲಿ ಜಿಂಬಾಬ್ವೆ ವಿರುದ್ಧ ಟಿ20 ಕ್ರಿಕೆಟ್ ಗೆ ಪ್ರವೇಶ ಪಡೆದರು. ಈ ಪಂದ್ಯದಲ್ಲಿ ಅವರು 4 ಓವರ್ ಬೌಲಿಂಗ್ ಮಾಡಿ 22 ರನ್ ನೀಡಿ 2 ವಿಕೆಟ್ ಪಡೆದುಕೊಂಡಿದ್ದರು.

ಅಕ್ಷರ್ ಪಟೇಲ್: ಸದ್ಯ ಟೀಮ್ ಇಂಡಿಯಾದಲ್ಲಿ ಮಿಂಚುತ್ತಿರುವ ಅಕ್ಷರ್ ಪಟೇಲ್ 2014 ರಲ್ಲೇ ಸುರೇಶ್ ರೈನಾ ನಾಯಕತ್ವದಲ್ಲಿ ಭಾರತ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಐಪಿಎಲ್ 2014 ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಪರಿಣಾಮ ಇವರು ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು.

ಅಮಿತ್ ಮಿಶ್ರಾ: ಟಿ20 ಕ್ರಿಕೆಟ್ ನ ಮತ್ತೊಬ್ಬ ಶ್ರೇಷ್ಠ ಸ್ಪಿನ್ನರ್ ಅಮಿತ್ ಮಿಶ್ರಾ ಕೂಡ 2010 ರಲ್ಲಿ ಜಿಂಬಾಬ್ವೆ ವಿರುದ್ಧ ಸುರೇಶ್ ರೈನಾ ನಾಯಕತ್ವದಲ್ಲಿ ಟಿ20 ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 21 ರನ್ ನೀಡಿ 1 ವಿಕೆಟ್ ಪಡೆದಿದ್ದರು.

ಉಮೇಶ್ ಯಾದವ್: ಟೀಮ್ ಇಂಡಿಯಾ ಮಾರಕ ವೇಗಿ ಉಮೇಶ್ ಯಾದವ್ ಅವರು 2010 ರಲ್ಲಿ ಸುರೇಶ್ ರೈನಾ ನಾಯಕನಾಗಿದ್ದಾಗ ಏಕದಿನ ಕ್ರಿಕೆಟ್ ಗೆ ಕಾಲಿಟ್ಟರು. ಅದು ಜಿಂಬಾಬ್ವೆ ವಿರುದ್ಧವೇ. ಈ ಪಂದ್ಯದಲ್ಲಿ ಉಮೇಶ್ ಯಾವುದೇ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ. ಜೊತೆಗೆ ಭಾರತ ಕೂಡ ಸೋಲು ಕಂಡಿತ್ತು.
