ಮೊದಲ ಗೆಲುವು; 64 ವರ್ಷಗಳ ನಂತರ ಭಾರತ ಕ್ರಿಕೆಟ್​ನಲ್ಲಿ ಹೀಗೊಂದು ಕಾಕತಾಳೀಯ..!

|

Updated on: Dec 24, 2023 | 6:43 PM

IND vs AUS: ಈ ಅದ್ಭುತ ಗೆಲುವಿನ ಜೊತೆಗೆ 64 ವರ್ಷಗಳ ನಂತರ ಭಾರತ ಕ್ರಿಕೆಟ್​ನಲ್ಲಿ ಹೀಗೊಂದು ಕಾಕತಾಳೀಯ ಕಂಡುಬಂದಿದೆ. ಅಷ್ಟಕ್ಕೂ ಈ ಕಾಕತಾಳೀಯವೆನೆಂದರೆ ಡಿಸೆಂಬರ್ 24 ರಂದೇ ಭಾರತದ ಮಹಿಳಾ ಹಾಗೂ ಪುರುಷ ಎರಡೂ ತಂಡಗಳೂ ಆಸೀಸ್ ವಿರುದ್ಧ ಮೊದಲ ಗೆಲುವು ದಾಖಲಿಸಿವೆ.

1 / 7
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಹರ್ಮನ್​ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡ 8 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಇದು ಟೆಸ್ಟ್ ಮಾದರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಮೊದಲ ಜಯವಾಗಿದೆ.

2 / 7
ಈ ಅದ್ಭುತ ಗೆಲುವಿನ ಜೊತೆಗೆ 64 ವರ್ಷಗಳ ನಂತರ ಭಾರತ ಕ್ರಿಕೆಟ್​ನಲ್ಲಿ ಹೀಗೊಂದು ಕಾಕತಾಳೀಯ ಕಂಡುಬಂದಿದೆ. ಅಷ್ಟಕ್ಕೂ ಈ ಕಾಕತಾಳೀಯವೆನೆಂದರೆ ಡಿಸೆಂಬರ್ 24 ರಂದೇ ಭಾರತದ ಮಹಿಳಾ ಹಾಗೂ ಪುರುಷ ಎರಡೂ ತಂಡಗಳೂ ಆಸೀಸ್ ವಿರುದ್ಧ ಮೊದಲ ಗೆಲುವು ದಾಖಲಿಸಿವೆ.

3 / 7
ಭಾರತ ಪುರುಷರ ಕ್ರಿಕೆಟ್ ತಂಡವು ಡಿಸೆಂಬರ್ 24 ರಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಗುಲಾಬ್ರೈ ರಾಮ್‌ಚಂದ್ ನಾಯಕತ್ವದಲ್ಲಿ ಭಾರತ ಪುರುಷ ತಂಡ 1959 ರಲ್ಲಿ ಟೆಸ್ಟ್ ಮಾದರಿಯಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು 119 ರನ್‌ಗಳಿಂದ ಸೋಲಿಸಿತ್ತು.

4 / 7
ಆಸ್ಟ್ರೇಲಿಯಾವನ್ನು ಟೆಸ್ಟ್ ಸ್ವರೂಪದಲ್ಲಿ ಮೊದಲ ಬಾರಿಗೆ ಸೋಲಿಸಿದ್ದ ಟೀಂ ಇಂಡಿಯಾಕ್ಕೆ ಅದು ಐತಿಹಾಸಿಕ ಕ್ಷಣವಾಗಿತ್ತು. ಆ ಪಂದ್ಯದಲ್ಲಿ ಜಸುಭಾಯ್ ಪಟೇಲ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆ ಪಂದ್ಯದಲ್ಲಿ ಅವರು ಒಟ್ಟು 14 ವಿಕೆಟ್‌ಗಳನ್ನು ಕಬಳಿಸಿದರು.

5 / 7
ಇವರ ಹೊರತಾಗಿ, ಬ್ಯಾಟಿಂಗ್​ನಲ್ಲಿ ಮಿಂಚಿದ್ದ ನಾರಿ ಕಂಟ್ರಾಕ್ಟರ್ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ 74 ರನ್ ಕಲೆಹಾಕಿದ್ದರು. ಈ ಇನ್ನಿಂಗ್ಸ್​ನ ಆಧಾರದ ಮೇಲೆ ಭಾರತ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾಕ್ಕೆ 225 ರನ್‌ಗಳ ಗೆಲುವಿನ ಗುರಿಯನ್ನು ನೀಡಿತ್ತು. ಈ ಗುರಿ ಬೆನ್ನಟ್ಟಿದ ಕಾಂಗರೂ ತಂಡ ಕೇವಲ 105 ರನ್​ಗಳಿಗೆ ಆಲೌಟ್ ಆಗಿತ್ತು.

6 / 7
ಇದೀಗ ಡಿಸೆಂಬರ್ 24 ರಂದು ಭಾರತ ಮಹಿಳಾ ತಂಡ, ಆಸ್ಟ್ರೇಲಿಯಾ ತಂಡವನ್ನು ಟೆಸ್ಟ್ ಮಾದರಿಯಲ್ಲಿ ಮೊದಲ ಬಾರಿಗೆ ಮಣಿಸಿ ಇತಿಹಾಸ ಬರೆದಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ತಂಡದ ಮೊದಲ ಗೆಲುವಿನಲ್ಲಿ ಬೌಲಿಂಗ್​ನಲ್ಲಿ 7 ವಿಕೆಟ್ ಉರುಳಿಸಿದ ಸ್ನೇಹ್ ರಾಣಾ ಪ್ರಮುಖ ಪಾತ್ರ ವಹಿಸಿದರು

7 / 7
ಇವರಲ್ಲದೆ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಮೃತಿ ಮಂಧಾನ, ರಿಚಾ ಘೋಷ್, ಜೆಮಿಮಾ ರೋಡ್ರಿಗಸ್ ಮತ್ತು ದೀಪ್ತಿ ಶರ್ಮಾ ತಲಾ ಅರ್ಧಶತಕ ಸಿಡಿಸಿದರು. ಈ ನಾಲ್ವರ ಅರ್ಧಶತಕದ ಆಧಾರದ ಮೇಲೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 406 ರನ್ ಕಲೆಹಾಕಿತು. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಸ್ನೇಹ್ ರಾಣಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ನೀಡಲಾಯಿತು.