ಸಚಿನ್ ತೆಂಡೂಲ್ಕರ್: ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಸಿಡಿಸಿದ ವಿಶ್ವ ದಾಖಲೆ ಇರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ. ಒಟ್ಟು 51 ಸೆಂಚುರಿಗಳನ್ನು ಸಿಡಿಸಿ ಈ ವಿಶ್ವ ದಾಖಲೆ ಬರೆದಿಟ್ಟಿದ್ದಾರೆ. ಕ್ರಿಕೆಟ್ ದೇವರು ಈ 51 ಶತಕಗಳನ್ನು ಬಾರಿಸಿರುವುದು 3ನೇ ಮತ್ತು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಎಂಬುದು ವಿಶೇಷ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ನಾನ್ ಓಪನರ್ ಎಂಬ ದಾಖಲೆಯನ್ನು ಸಚಿನ್ ತಮ್ಮದಾಗಿಸಿಕೊಂಡಿದ್ದಾರೆ.