- Kannada News Photo gallery Cricket photos india women win first test on same date when india mens team won first test against australia
ಮೊದಲ ಗೆಲುವು; 64 ವರ್ಷಗಳ ನಂತರ ಭಾರತ ಕ್ರಿಕೆಟ್‌ನಲ್ಲಿ ಹೀಗೊಂದು ಕಾಕತಾಳೀಯ..!
IND vs AUS: ಈ ಅದ್ಭುತ ಗೆಲುವಿನ ಜೊತೆಗೆ 64 ವರ್ಷಗಳ ನಂತರ ಭಾರತ ಕ್ರಿಕೆಟ್‌ನಲ್ಲಿ ಹೀಗೊಂದು ಕಾಕತಾಳೀಯ ಕಂಡುಬಂದಿದೆ. ಅಷ್ಟಕ್ಕೂ ಈ ಕಾಕತಾಳೀಯವೆನೆಂದರೆ ಡಿಸೆಂಬರ್ 24 ರಂದೇ ಭಾರತದ ಮಹಿಳಾ ಹಾಗೂ ಪುರುಷ ಎರಡೂ ತಂಡಗಳೂ ಆಸೀಸ್ ವಿರುದ್ಧ ಮೊದಲ ಗೆಲುವು ದಾಖಲಿಸಿವೆ.
Updated on: Dec 24, 2023 | 6:43 PM

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡ 8 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಇದು ಟೆಸ್ಟ್ ಮಾದರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಮೊದಲ ಜಯವಾಗಿದೆ.

ಈ ಅದ್ಭುತ ಗೆಲುವಿನ ಜೊತೆಗೆ 64 ವರ್ಷಗಳ ನಂತರ ಭಾರತ ಕ್ರಿಕೆಟ್‌ನಲ್ಲಿ ಹೀಗೊಂದು ಕಾಕತಾಳೀಯ ಕಂಡುಬಂದಿದೆ. ಅಷ್ಟಕ್ಕೂ ಈ ಕಾಕತಾಳೀಯವೆನೆಂದರೆ ಡಿಸೆಂಬರ್ 24 ರಂದೇ ಭಾರತದ ಮಹಿಳಾ ಹಾಗೂ ಪುರುಷ ಎರಡೂ ತಂಡಗಳೂ ಆಸೀಸ್ ವಿರುದ್ಧ ಮೊದಲ ಗೆಲುವು ದಾಖಲಿಸಿವೆ.

ಭಾರತ ಪುರುಷರ ಕ್ರಿಕೆಟ್ ತಂಡವು ಡಿಸೆಂಬರ್ 24 ರಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಗುಲಾಬ್ರೈ ರಾಮ್‌ಚಂದ್ ನಾಯಕತ್ವದಲ್ಲಿ ಭಾರತ ಪುರುಷ ತಂಡ 1959 ರಲ್ಲಿ ಟೆಸ್ಟ್ ಮಾದರಿಯಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು 119 ರನ್‌ಗಳಿಂದ ಸೋಲಿಸಿತ್ತು.

ಆಸ್ಟ್ರೇಲಿಯಾವನ್ನು ಟೆಸ್ಟ್ ಸ್ವರೂಪದಲ್ಲಿ ಮೊದಲ ಬಾರಿಗೆ ಸೋಲಿಸಿದ್ದ ಟೀಂ ಇಂಡಿಯಾಕ್ಕೆ ಅದು ಐತಿಹಾಸಿಕ ಕ್ಷಣವಾಗಿತ್ತು. ಆ ಪಂದ್ಯದಲ್ಲಿ ಜಸುಭಾಯ್ ಪಟೇಲ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆ ಪಂದ್ಯದಲ್ಲಿ ಅವರು ಒಟ್ಟು 14 ವಿಕೆಟ್‌ಗಳನ್ನು ಕಬಳಿಸಿದರು.

ಇವರ ಹೊರತಾಗಿ, ಬ್ಯಾಟಿಂಗ್ನಲ್ಲಿ ಮಿಂಚಿದ್ದ ನಾರಿ ಕಂಟ್ರಾಕ್ಟರ್ ತಂಡದ ಎರಡನೇ ಇನ್ನಿಂಗ್ಸ್‌ನಲ್ಲಿ 74 ರನ್ ಕಲೆಹಾಕಿದ್ದರು. ಈ ಇನ್ನಿಂಗ್ಸ್ನ ಆಧಾರದ ಮೇಲೆ ಭಾರತ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾಕ್ಕೆ 225 ರನ್‌ಗಳ ಗೆಲುವಿನ ಗುರಿಯನ್ನು ನೀಡಿತ್ತು. ಈ ಗುರಿ ಬೆನ್ನಟ್ಟಿದ ಕಾಂಗರೂ ತಂಡ ಕೇವಲ 105 ರನ್ಗಳಿಗೆ ಆಲೌಟ್ ಆಗಿತ್ತು.

ಇದೀಗ ಡಿಸೆಂಬರ್ 24 ರಂದು ಭಾರತ ಮಹಿಳಾ ತಂಡ, ಆಸ್ಟ್ರೇಲಿಯಾ ತಂಡವನ್ನು ಟೆಸ್ಟ್ ಮಾದರಿಯಲ್ಲಿ ಮೊದಲ ಬಾರಿಗೆ ಮಣಿಸಿ ಇತಿಹಾಸ ಬರೆದಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ತಂಡದ ಮೊದಲ ಗೆಲುವಿನಲ್ಲಿ ಬೌಲಿಂಗ್ನಲ್ಲಿ 7 ವಿಕೆಟ್ ಉರುಳಿಸಿದ ಸ್ನೇಹ್ ರಾಣಾ ಪ್ರಮುಖ ಪಾತ್ರ ವಹಿಸಿದರು

ಇವರಲ್ಲದೆ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಮೃತಿ ಮಂಧಾನ, ರಿಚಾ ಘೋಷ್, ಜೆಮಿಮಾ ರೋಡ್ರಿಗಸ್ ಮತ್ತು ದೀಪ್ತಿ ಶರ್ಮಾ ತಲಾ ಅರ್ಧಶತಕ ಸಿಡಿಸಿದರು. ಈ ನಾಲ್ವರ ಅರ್ಧಶತಕದ ಆಧಾರದ ಮೇಲೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 406 ರನ್ ಕಲೆಹಾಕಿತು. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಸ್ನೇಹ್ ರಾಣಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ನೀಡಲಾಯಿತು.



















