
ಐರ್ಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಟೀಮ್ ಇಂಡಿಯಾದ ಆಟಗಾರರು ಡಬ್ಲಿನ್ ತಲುಪಿದ್ದಾರೆ. ಈ ಚಿತ್ರವನ್ನು ದಿನೇಶ್ ಕಾರ್ತಿಕ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. 'ಟಚ್ಡೌನ್ ಡಬ್ಲಿನ್' ಎಂಬ ಶೀರ್ಷಿಕೆ ಬರೆದು ಫೋಟೋ ಶೇರ್ ಮಾಡಿದ್ದಾರೆ.

ಸೂರ್ಯಕುಮಾರ್ ಯಾದವ್ ಕೂಡ ಮಿಷನ್ ಐರ್ಲೆಂಡ್ ಗಾಗಿ ವಿಮಾನದಲ್ಲಿ ಡಬ್ಲಿನ್ ಗೆ ಬಂದಿಳಿದಿದ್ದಾರೆ. ಸೂರ್ಯ ಅವರು ವಿಮಾನದ ಒಳಗಿರುವ ಚಿತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಡಬ್ಲಿನ್ ಗೆ ತೆರಳುವ ಮುನ್ನ ಅವೇಶ್ ಖಾನ್, ರಾಹುಲ್ ತ್ರಿಪಾಠಿ, ಉಮ್ರಾನ್ ಮಲಿಕ್ ಮತ್ತು ವೆಂಕಟೇಶ್ ಅಯ್ಯರ್ ಅವರು ಭಾರತದ ಸ್ಟಾರ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಪೋಸ್ ನೀಡಿದರು.

ಭಾರತದ ಅನುಭವಿ ಆಟಗಾರರ ತಂಡ ಇಂಗ್ಲೆಂಡ್ ಗೆ ತೆರಳಿದರೆ ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ ಭಾರತದ ಯುವ ತಂಡ ನಾಳೆ (ಜೂ. 26) ಮೊದಲ ಟಿ20 ಪಂದ್ಯ ಆಡಲಿದೆ.