ಕೊಹ್ಲಿ ಜೊತೆಗೆ ವಿಶ್ವಕಪ್ ಗೆದ್ದಿದ್ದ ಭಾರತದ ಸ್ಟಾರ್ ಬ್ಯಾಟರ್​ ಕ್ರಿಕೆಟ್​ಗೆ ವಿದಾಯ

Updated on: Feb 12, 2024 | 7:50 PM

Saurabh Tiwary: ಸೌರಭ್ ತಿವಾರಿ 2006 ರಲ್ಲಿ ತಮ್ಮ ಮೊದಲ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದರು. ಇಲ್ಲಿಯವರೆಗೆ ಅವರು 115 ಪಂದ್ಯಗಳಲ್ಲಿ 22 ಶತಕಗಳನ್ನು ಒಳಗೊಂಡಂತೆ 8030 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು 116 ಲಿಸ್ಟ್-ಎ ಪಂದ್ಯಗಳಲ್ಲಿ 46.55 ಸರಾಸರಿಯಲ್ಲಿ 6 ಶತಕಗಳನ್ನು ಒಳಗೊಂಡಂತೆ 4050 ರನ್ ಗಳಿಸಿದ್ದಾರೆ.

1 / 7
2008 ರಲ್ಲಿ ನಡೆದ ಅಂಡರ್ 19 ವಿಶ್ವಕಪ್​ನಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ್ದ ತಂಡದ ಸ್ಟಾರ್ ಆಟಗಾರನೊಬ್ಬ ಇದೀಗ ವೃತ್ತಿಪರ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ ಸೌರಭ್ ತಿವಾರಿ ಕ್ರಿಕೆಟ್​ ಜೀವನಕ್ಕೆ ಇದೀಗ ನಿವೃತ್ತಿ ಘೋಷಿಸಿದ್ದಾರೆ.

2008 ರಲ್ಲಿ ನಡೆದ ಅಂಡರ್ 19 ವಿಶ್ವಕಪ್​ನಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ್ದ ತಂಡದ ಸ್ಟಾರ್ ಆಟಗಾರನೊಬ್ಬ ಇದೀಗ ವೃತ್ತಿಪರ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ ಸೌರಭ್ ತಿವಾರಿ ಕ್ರಿಕೆಟ್​ ಜೀವನಕ್ಕೆ ಇದೀಗ ನಿವೃತ್ತಿ ಘೋಷಿಸಿದ್ದಾರೆ.

2 / 7

ಪ್ರಸ್ತುತ ರಣಜಿ ಟ್ರೋಫಿ ಆಡುತ್ತಿರುವ 34 ವರ್ಷದ ಸೌರಭ್ ತಮ್ಮ ಕೊನೆಯ ಪಂದ್ಯವನ್ನು ಜಾರ್ಖಂಡ್ ಪರ ಆಡಲಿದ್ದು ಆ ನಂತರ ನಿವೃತ್ತಿ ಹೊಂದಲಿದ್ದಾರೆ. ತಮ್ಮ 11 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ಸೌರಭ್ ಅವರು 2006-07 ರ ರಣಜಿ ಟ್ರೋಫಿ ಸೀಸನ್​ನಲ್ಲಿ ಪ್ರಥಮ ದರ್ಜೆ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರು.

3 / 7

ಅಂದಿನಿಂದ ಸೌರಭ್ ಜಾರ್ಖಂಡ್ ತಂಡದ ಪರ ರಣಜಿ ಟ್ರೋಫಿ ಆಡುತ್ತಿದ್ದರು. ಆದರೆ ಪ್ರಸ್ತಕ ಸೀಸನ್​ನಲ್ಲಿ ಜಾರ್ಖಂಡ್ ತಂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಈ ತಂಡ ಇದುವರೆಗೆ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಈ ಕಾರಣದಿಂದ ತಂಡ ಕ್ವಾರ್ಟರ್ ಫೈನಲ್‌ ರೇಸ್‌ನಿಂದ ಹೊರಗುಳಿದಿದೆ.

4 / 7

EPSNcricinfo ವರದಿಯ ಪ್ರಕಾರ, ತಮ್ಮ ನಿವೃತ್ತಿಯ ಬಗ್ಗೆ ಮನದಾಳ ಹಂಚಿಕೊಂಡಿರುವ ಸೌರಭ್ ತಿವಾರಿ, ಈ ಪ್ರಯಾಣಕ್ಕೆ ವಿದಾಯ ಹೇಳುವುದು ಸ್ವಲ್ಪ ಕಷ್ಟ. ಆದರೆ ಇದಕ್ಕೆ ಇದು ಸರಿಯಾದ ಸಮಯ ಎಂದು ನನಗೆ ಖಾತ್ರಿಯಿದೆ. ಪ್ರಸ್ತುತ ನಾನು ರಾಷ್ಟ್ರೀಯ ತಂಡ ಮತ್ತು ಐಪಿಎಲ್‌ನಲ್ಲಿ ಆಡುತ್ತಿಲ್ಲ. ಹೀಗಾಗಿ ರಾಜ್ಯ ಯುವ ಆಟಗಾರನಿಗೆ ಅವಕಾಶ ನೀಡುವ ಸಲುವಾಗಿ ಕ್ರಿಕೆಟ್​ನಿಂದ ದೂರ ಸರಿಯುತ್ತಿದ್ದೇನೆ ಎಂದಿದ್ದಾರೆ.

5 / 7

ಸೌರಭ್ ತಿವಾರಿ 2006 ರಲ್ಲಿ ತಮ್ಮ ಮೊದಲ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದರು. ಇಲ್ಲಿಯವರೆಗೆ ಅವರು 115 ಪಂದ್ಯಗಳಲ್ಲಿ 22 ಶತಕಗಳನ್ನು ಒಳಗೊಂಡಂತೆ 8030 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು 116 ಲಿಸ್ಟ್-ಎ ಪಂದ್ಯಗಳಲ್ಲಿ 46.55 ಸರಾಸರಿಯಲ್ಲಿ 6 ಶತಕಗಳನ್ನು ಒಳಗೊಂಡಂತೆ 4050 ರನ್ ಗಳಿಸಿದ್ದಾರೆ.

6 / 7

ಇದಲ್ಲದೆ ಟೀಂ ಇಂಡಿಯಾದಲ್ಲು ಕಾಣಿಸಿಕೊಂಡಿರುವ ಸೌರಭ್, ರಾಷ್ಟ್ರೀಯ ತಂಡದ ಪರ ಮೂರು ಏಕದಿನ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಕೇವಲ 49 ರನ್ ಕಲೆಹಾಕಿದ್ದರು.

7 / 7

ಸೌರಭ್ ತಿವಾರಿ ಐಪಿಎಲ್​ನಲ್ಲೂ ತಮ್ಮ ಅದೃಷ್ಟ ಪರೀಕ್ಷಿಸಿದ್ದು, ಅವರು ಮುಂಬೈ ಇಂಡಿಯನ್ಸ್, ಆರ್‌ಸಿಬಿ, ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್‌ ತಂಡದ ಪರ ಐಪಿಎಲ್‌ನಲ್ಲಿ ಆಡಿದ್ದಾರೆ. ಒಟ್ಟು 93 ಐಪಿಎಲ್ ಪಂದ್ಯಗಳನ್ನಾಡಿರುವ ತಿವಾರಿ 28.73 ಸರಾಸರಿಯಲ್ಲಿ 8 ಅರ್ಧಶತಕಗಳನ್ನು ಒಳಗೊಂಡಂತೆ 1494 ರನ್ ಕಲೆಹಾಕಿದ್ದಾರೆ.

Loading...
Unable to load recommendations.
Follow Us