ಒಂದೇ ವರ್ಷ ಟೀಮ್ ಇಂಡಿಯಾದ 11 ಆಟಗಾರರು ನಿವೃತ್ತಿ..!

|

Updated on: Dec 21, 2024 | 10:55 AM

Team India: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಡುವೆಯೇ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಭಾರತೀಯರ ಸಂಖ್ಯೆಯು 11ಕ್ಕೆ ಏರಿದೆ. ಅಂದರೆ ಅಶ್ವಿನ್​ಗೂ ಮುನ್ನ ಟೀಮ್ ಇಂಡಿಯಾದ 10 ಆಟಗಾರರು ಈ ವರ್ಷ ನಿವೃತ್ತಿ ಘೋಷಿಸಿದ್ದಾರೆ.

1 / 13
ಟೀಮ್ ಇಂಡಿಯಾದ 11 ಆಟಗಾರರು ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ದಿನೇಶ್ ಕಾರ್ತಿಕ್ ಅವರಿಂದ ಪ್ರಾರಂಭವಾದ ನಿವೃತ್ತಿಯ ಪರ್ವವು ಕೊನೆಗೊಂಡಿರುವುದು ರವಿಚಂದ್ರನ್ ಅಶ್ವಿನ್ ಅವರ ವಿದಾಯದೊಂದಿಗೆ ಎಂಬುದು ವಿಶೇಷ. ಹಾಗಿದ್ರೆ ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಭಾರತೀಯ ಆಟಗಾರರು ಯಾರೆಲ್ಲಾ ಎಂದು ನೋಡೋಣ...

2 / 13
ದಿನೇಶ್ ಕಾರ್ತಿಕ್: ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. 2004 ರಿಂದ 2022 ರವರೆಗೆ ಟೀಮ್ ಇಂಡಿಯಾ ಪರ 179 ಪಂದ್ಯಗಳನ್ನಾಡಿರುವ ಡಿಕೆ ಒಟ್ಟು 3463 ರನ್ ಕಲೆಹಾಕಿದ್ದಾರೆ.

3 / 13
ಶಿಖರ್ ಧವನ್: ಟೀಮ್ ಇಂಡಿಯಾದ ಎಡಗೈ ದಾಂಡಿಗ ಶಿಖರ್ ಧವನ್ ಈ ವರ್ಷದ ಮಧ್ಯ ಭಾಗದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. 2010 ರಿಂದ 2022ರವರೆಗೆ ಟೀಮ್ ಇಂಡಿಯಾ ಪರ 269 ಪಂದ್ಯಗಳನ್ನಾಡಿರುವ ಧವನ್ ಒಟ್ಟು 10867 ರನ್ ಕಲೆಹಾಕಿದ್ದಾರೆ.

4 / 13
ವೃದ್ಧಿಮಾನ್ ಸಾಹ: ಭಾರತ ತಂಡದ ಮತ್ತೋರ್ವ ವಿಕೆಟ್ ಕೀಪರ್ ಬ್ಯಾಟರ್ ವೃದ್ಧಿಮಾನ್ ಸಾಹ ಕೂಡ ಇದೇ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ. 2010 ರಿಂದ 2021ರ ನಡುವೆ ಭಾರತದ ಪರ 49 ಪಂದ್ಯಗಳನ್ನಾಡಿರುವ ಸಾಹ ಒಟ್ಟು 1394 ರನ್​ಗಳಿಸಿದ್ದಾರೆ.

5 / 13
ಮನೋಜ್ ತಿವಾರಿ: ಟೀಮ್ ಇಂಡಿಯಾ ಆಟಗಾರ ಮನೋಜ್ ತಿವಾರಿ ಕೂಡ ಇದೇ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಭಾರತದ ಪರ 15 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ತಿವಾರಿ 302 ರನ್​​ಗಳಿಸಿದ್ದಾರೆ.

6 / 13
ವರುಣ್ ಆರೋನ್: ಭಾರತದ ಪರ 9 ಟೆಸ್ಟ್ ಹಾಗೂ 9 ಏಕದಿನ ಪಂದ್ಯಗಳನ್ನಾಡಿರುವ ವರುಣ್ ಆರೋನ್ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ. ಟೀಮ್ ಇಂಡಿಯಾ ಪರ 18 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ವರುಣ್ ಒಟ್ಟು 29 ವಿಕೆಟ್ ಕಬಳಿಸಿದ್ದಾರೆ.

7 / 13
ಸೌರಭ್ ತಿವಾರಿ: ಟೀಮ್ ಇಂಡಿಯಾ ಪರ ಮೂರು ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಸೌರವ್ ತಿವಾರಿ ಕೂಡ ಇದೇ ವರ್ಷ ಮೂರು ಮಾದರಿಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ. ಭಾರತದ ಪರ 2 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ತಿವಾರಿ 49 ರನ್ ಕಲೆಹಾಕಿದ್ದಾರೆ.

8 / 13
ಕೇದಾರ್ ಜಾಧವ್: ಟೀಮ್ ಇಂಡಿಯಾ ಪರ ಆಲ್​ರೌಂಡರ್ ಆಗಿ 82 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಕೇದಾರ್ ಜಾಧವ್ ಕೂಡ ಇದೇ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಕೊನೆಗೊಳಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 58 ಇನಿಂಗ್ಸ್ ಆಡಿರುವ ಅವರು ಒಟ್ಟು 1511 ರನ್​ ಕಲೆಹಾಕಿದ್ದಾರೆ.

9 / 13
ಬರೀಂದರ್ ಸ್ರಾನ್: ಭಾರತದ ಪರ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಎಡಗೈ ವೇಗಿ ಬರೀಂದರ್ ಸ್ರಾನ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಟೀಮ್ ಇಂಡಿಯಾ ಪರ ಆಡಿದ ಎಂಟು ಪಂದ್ಯಗಳಿಂದ ಸ್ರಾನ್ ಒಟ್ಟು 13 ವಿಕೆಟ್ ಕಬಳಿಸಿದ್ದಾರೆ.

10 / 13
ಸಿದ್ಧಾರ್ಥ್ ಕೌಲ್: ಭಾರತ ತಂಡದಲ್ಲಿದ್ದ ಬಲಗೈ ವೇಗಿ ಸಿದ್ಧಾರ್ಥ್ ಕೌಲ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಟೀಮ್ ಇಂಡಿಯಾ ಪರ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಸಿದ್ಧಾರ್ಥ್ ಒಟ್ಟು 4 ವಿಕೆಟ್ ಕಬಳಿಸಿದ್ದಾರೆ.

11 / 13
ಧವಳ್ ಕುಲ್ಕರ್ಣಿ: ಟೀಮ್ ಇಂಡಿಯಾ ವೇಗಿ ಧವಳ್ ಕುಲ್ಕರ್ಣಿ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದಾರೆ. ಟೀಮ್ ಇಂಡಿಯಾ ಪರ 14 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಧವಳ್ ಒಟ್ಟು 22 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

12 / 13
ರವಿಚಂದ್ರನ್ ಅಶ್ವಿನ್: ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. 2010 ರಿಂದ 2024 ರವರೆಗೆ ಭಾರತದ ಪರ 379 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅಶ್ವಿನ್ ಒಟ್ಟು 765 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ 2ನೇ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.

13 / 13
ಇನ್ನು ಈ ವರ್ಷ ನಡೆದ ಟಿ20 ವಿಶ್ವಕಪ್​ ಮುಕ್ತಾಯದ ಬೆನ್ನಲ್ಲೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಇದಾಗ್ಯೂ ಈ ಮೂವರು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್​ನಲ್ಲಿ ಮುಂದುವರೆದಿದ್ದಾರೆ.

Published On - 10:53 am, Sat, 21 December 24