R Ashwin: ನಂಬರ್ ಒನ್ ಬೌಲರ್ ಆರ್. ಅಶ್ವಿನ್​ಗೆ ಯಾಕೆ ಅವಕಾಶ ನೀಡಿಲ್ಲ ಗೊತ್ತೇ?: ಬಯಲಾಯ್ತು ಸತ್ಯಾಂಶ

|

Updated on: Jun 08, 2023 | 11:25 AM

Ind Vs Aus, WTC Final 2023: ರವಿಚಂದ್ರನ್ ಅಶ್ವಿನ್ ಭಾರತ ತಂಡ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಿದ್ದಾಗ ಅವರನ್ನು ಫೈನಲ್​ನಲ್ಲಿ ಆಡಿಸದ ಬಗ್ಗೆ ಅನೇಕ ಅಭಿಪ್ರಾಯಗಳು ಕೇಳಿಬಂದವು. ಇದೀಗ ಭಾರತದ ಬೌಲಿಂಗ್ ಕೋಚ್ ಅಶ್ವಿನ್​ರನ್ನು ಆಯ್ಕೆ ಮಾಡದೆ ಇರುವುದಕ್ಕೆ ಕಾರಣ ತಿಳಿಸಿದ್ದಾರೆ.

1 / 7
ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಆರಂಭವಾಗಿದೆ. ಮೊದಲ ದಿನ ಆಸ್ಟ್ರೇಲಿಯಾ ಪಾರುಪತ್ಯ ಮೆರೆದಿದ್ದು ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 327 ರನ್ ಗಳಿಸಿದೆ. ಮೊದಲ ದಿನ ಸಾಕಷ್ಟು ಅಚ್ಚರಿಯ ಘಟನೆಗಳಿಗೆ ಡಬ್ಲ್ಯೂಟಿಸಿ ಫೈನಲ್ ಸಾಕ್ಷಿಯಾಯಿತು.

2 / 7
ಮುಖ್ಯವಾಗಿ ಟಾಸ್ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ಲೇಯಿಂಗ್ ಇಲೆವೆನ್ ಪ್ರಕಟಿಸುವಾಗ ಟೆಸ್ಟ್ ಕ್ರಿಕೆಟ್​ನ ನಂಬರ್ ಒನ್ ಬೌಲರ್ ರವಿಚಂದ್ರನ್ ಅಶ್ವಿನ್​ ಹೆಸರು ಇದರಲ್ಲಿ ಇರಲಿಲ್ಲ. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿತು.

3 / 7
ರವಿಚಂದ್ರನ್ ಅಶ್ವಿನ್ ಭಾರತ ತಂಡ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಿದ್ದಾಗ ಅವರನ್ನು ಫೈನಲ್​ನಲ್ಲಿ ಆಡಿಸದ ಬಗ್ಗೆ ಅನೇಕ ಅಭಿಪ್ರಾಯಗಳು ಕೇಳಿಬಂದವು. ಇದೀಗ ಭಾರತದ ಬೌಲಿಂಗ್ ಕೋಚ್ ಅಶ್ವಿನ್​ರನ್ನು ಆಯ್ಕೆ ಮಾಡದೆ ಇರುವುದಕ್ಕೆ ಕಾರಣ ತಿಳಿಸಿದ್ದಾರೆ.

4 / 7
ರವಿಚಂದ್ರನ್ ಅಶ್ವಿನ್ ಒಬ್ಬ ಚಾಂಪಿಯನ್ ಬೌಲರ್. ಅವರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈಬಿಡುವುದು ಯಾವಾಗಲೂ ತುಂಬಾ ಕಷ್ಟಕರವಾದ ನಿರ್ಧಾರ. ಆದರೆ ನಾವು ಬೆಳಗ್ಗೆ ಪರಿಸ್ಥಿತಿಗಳನ್ನು ನೋಡಿದ್ದೇವೆ ಮತ್ತು ಹೆಚ್ಚುವರಿ ವೇಗಿ ಖಂಡಿತವಾಗಿಯೂ ಪ್ರಯೋಜನಕಾರಿ ಎಂದು ಭಾವಿಸಿದ್ದೆವು ಎಂದು ಭಾರತ ತಂಡದ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಹೇಳಿದ್ದಾರೆ.

5 / 7
ಈ ಪ್ರಯೋಗವನ್ನು ನಾವು ಹಿಂದೆಯೂ ಮಾಡಿದ್ದೇವೆ. ಕಳೆದ ಪ್ರವಾಸದಲ್ಲಿ ನಾವು 4 ವೇಗಿಗಳೊಂದಿಗೆ ಆಡಿದ್ದೆವೆ. ಅವರು ತಂಡಕ್ಕೆ ಉತ್ತಮ ಪ್ರದರ್ಶನ ನೀಡಿದರು ಎಂದು ಪಾರಸ್ ಮಾಂಬ್ರೆ ಮೊದಲ ದಿನದಾಟ ನಂತರದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

6 / 7
ಈ ಮೂಲಕ ಪಾರಸ್ ಮಾಂಬ್ರೆ ಅವರು 4 ವೇಗಿಗಳನ್ನು ಆಡಿಸಲು ತಂಡದ ಮ್ಯಾನೇಜ್‌ಮೆಂಟ್‌ನ ನಿರ್ಧಾರವನ್ನು ಬೆಂಬಲಿಸಿದರು ಮತ್ತು ಪರಿಸ್ಥಿತಿಗಳು ಹೇಗೆ ವಿಭಿನ್ನವಾಗಿವೆ ಎಂಬುದರ ಕುರಿತು ವಿವರಿಸಿದ್ದಾರೆ.

7 / 7
ಓವಲ್ ಮೈದಾನವು ಹಸಿರು ಹುಲ್ಲಿನ ಮೇಲ್ಮೈಯನ್ನು ಹೊಂದಿದೆ. ಗ್ರೀನ್ ಪಿಚ್​ ಎಂಬುದು ಬೌಲರ್​ಗಳಿಗೆ ಸಹಕಾರಿಯಾಗಿರುತ್ತದೆ. ಅದರಲ್ಲೂ ವೇಗದ ಬೌಲರ್​ಗಳಿಗೆ ಹಸಿರು ಮೇಲ್ಮೈ ಪಿಚ್ ಒಂದು ರೀತಿಯ ಸ್ವರ್ಗ. ಏಕೆಂದರೆ ಗ್ರೀನ್​ ಪಿಚ್​ನಲ್ಲಿ ವೇಗಿಗಳು ಉತ್ತಮವಾಗಿ ಸ್ವಿಂಗ್ ಮಾಡಬಲ್ಲರು. ಹೀಗಾಗಿ ಅಶ್ವಿನ್​ರನ್ನು ಕೈಬಿಟ್ಟು ವೇಗಿಗೆ ಅವಕಾಶ ನೀಡಲಾಗಿದೆ.