WTC Final 2023: ಭಾರತಕ್ಕೆ ಟೆನ್ಷನ್ ಶುರು; ಈತ ಶತಕ ಸಿಡಿಸಿದ ಅಷ್ಟೂ ಪಂದ್ಯಗಳಲ್ಲಿ ಆಸೀಸ್ ಗೆದ್ದಿದೆ..!

WTC Final 2023: ಲಂಡನ್‌ನ ಓವಲ್‌ ಮೈದಾನದಲ್ಲಿ ನಿನ್ನೆಯಿಂದ ಅಂದರೆ ಜೂನ್ 7 ರಿಂದ ಆರಂಭವಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ.

ಪೃಥ್ವಿಶಂಕರ
|

Updated on: Jun 08, 2023 | 2:52 PM

ಲಂಡನ್‌ನ ಓವಲ್‌ ಮೈದಾನದಲ್ಲಿ ನಿನ್ನೆಯಿಂದ ಅಂದರೆ ಜೂನ್ 7 ರಿಂದ ಆರಂಭವಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಆರಂಭದಲ್ಲಿ ಮೇಲುಗೈ ಸಾಧಿಸಿದ ಭಾರತಕ್ಕೆ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ.

1 / 5
ಓವಲ್‌ನಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ಎರಡನೇ ಸೆಷನ್ ಆರಂಭದ ವೇಳೆಗೆ 3 ವಿಕೆಟ್ ಕಳೆದುಕೊಂಡು ಕೇವಲ 76 ರನ್ ಬಾರಿಸಿತ್ತು. ಇದಾದ ಬಳಿಕ ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಅಚ್ಚರಿಯ ಜೊತೆಯಾಟ ನಡೆಸಿದರು. ಇವರಿಬ್ಬರು 251 ರನ್ ಸೇರಿಸಿ ತಂಡವನ್ನು 327 ರನ್​ಗಳಿಗೆ ಕೊಂಡೊಯ್ದರು. ಹಾಗೆಯೇ ಇಬ್ಬರೂ ಬ್ಯಾಟ್ಸ್‌ಮನ್‌ಗಳು ದಿನದಾಟದಂತ್ಯಕ್ಕೆ ಅಜೇಯರಾಗಿ ಉಳಿದಿದ್ದಾರೆ.

2 / 5
ಅದರಲ್ಲೂ ಟೀಂ ಇಂಡಿಯಾವನ್ನು ಇನ್ನಿಲ್ಲದಂತೆ ಕಾಡಿದ ಟ್ರಾವಿಸ್ ಹೆಡ್ ಟಿ20 ಕ್ರಿಕೆಟ್ ಮಾದರಿಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಟೆಸ್ಟ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಹೆಡ್ ಅದೇ ಟ್ರೆಂಡ್ ಮುಂದುವರಿಸಿದ್ದಾರೆ. ಎರಡು ತಿಂಗಳ ಹಿಂದಷ್ಟೆ ಭಾರತ ಪ್ರವಾಸದಲ್ಲಿ ಶತಕ ವಂಚಿತರಾಗಿದ್ದ ಹೆಡ್ ಓವಲ್‌ನಲ್ಲಿ ಅದನ್ನು ಸರಿದೂಗಿಸಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದ ಆರನೇ ಶತಕವನ್ನು ಕೇವಲ 106 ಎಸೆತಗಳಲ್ಲಿ ಪೂರ್ಣಗೊಳಿಸಿದ ಹೆಡ್ ದ್ವಿಶತಕದತ್ತ ದಾಪುಗಾಲಿಟ್ಟಿದ್ದಾರೆ.

3 / 5
ಟ್ರಾವಿಸ್ ಹೆಡ್ ಅವರ ಈ ಶತಕ ಆಸ್ಟ್ರೇಲಿಯಾವನ್ನು ಭದ್ರ ಸ್ಥಿತಿಯಲ್ಲಿರಿಸಿರುವುದಲ್ಲದೆ, ಆಸ್ಟ್ರೇಲಿಯಾದ ಗೆಲುವನ್ನೂ ಸಹ ಭದ್ರಪಡಿಸಿದಂತಿದೆ. ನಾವು ಹೀಗೆ ಹೇಳುತ್ತಿರುವುದಕ್ಕೆ ಕಾರಣವೂ ಇದ್ದು, ಈ ಕಾರಣ ನಿಜವಾದರೆ ಭಾರತಕ್ಕೆ ಸೋಲು ಖಚಿತವೆಂದು ತೋರುತ್ತಿದೆ.

4 / 5
ವಾಸ್ತವವಾಗಿ ಹೆಡ್, ಓವಲ್ ಮೈದಾನದಲ್ಲಿ ಶತಕ ಸಿಡಿಸುವುದಕ್ಕೂ ಮೊದಲು, ಟೆಸ್ಟ್ ಮತ್ತು ಏಕದಿನ ಸೇರಿದಂತೆ ಒಟ್ಟು 8 ಶತಕಗಳನ್ನು ಬಾರಿಸಿದ್ದಾರೆ. ಅಚ್ಚರಿ ಎಂಬಂತೆ ಈ ಎಲ್ಲಾ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆದ್ದಿದೆ. ಈ ಅಂಕಿ ಅಂಶ ಭಾರತಕ್ಕೀಗ ತಲೆನೋವು ತಂದಿದೆ.

5 / 5
Follow us
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್

ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ

ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?

ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್