- Kannada News Photo gallery Cricket photos India’s Bowling Coach Paras Mhambrey REVEALS Why Ravi Ashwin not slected In Playing XI For WTC Final
R Ashwin: ನಂಬರ್ ಒನ್ ಬೌಲರ್ ಆರ್. ಅಶ್ವಿನ್ಗೆ ಯಾಕೆ ಅವಕಾಶ ನೀಡಿಲ್ಲ ಗೊತ್ತೇ?: ಬಯಲಾಯ್ತು ಸತ್ಯಾಂಶ
Ind Vs Aus, WTC Final 2023: ರವಿಚಂದ್ರನ್ ಅಶ್ವಿನ್ ಭಾರತ ತಂಡ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಿದ್ದಾಗ ಅವರನ್ನು ಫೈನಲ್ನಲ್ಲಿ ಆಡಿಸದ ಬಗ್ಗೆ ಅನೇಕ ಅಭಿಪ್ರಾಯಗಳು ಕೇಳಿಬಂದವು. ಇದೀಗ ಭಾರತದ ಬೌಲಿಂಗ್ ಕೋಚ್ ಅಶ್ವಿನ್ರನ್ನು ಆಯ್ಕೆ ಮಾಡದೆ ಇರುವುದಕ್ಕೆ ಕಾರಣ ತಿಳಿಸಿದ್ದಾರೆ.
Updated on: Jun 08, 2023 | 11:25 AM

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಬಹುನಿರೀಕ್ಷಿತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆರಂಭವಾಗಿದೆ. ಮೊದಲ ದಿನ ಆಸ್ಟ್ರೇಲಿಯಾ ಪಾರುಪತ್ಯ ಮೆರೆದಿದ್ದು ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 327 ರನ್ ಗಳಿಸಿದೆ. ಮೊದಲ ದಿನ ಸಾಕಷ್ಟು ಅಚ್ಚರಿಯ ಘಟನೆಗಳಿಗೆ ಡಬ್ಲ್ಯೂಟಿಸಿ ಫೈನಲ್ ಸಾಕ್ಷಿಯಾಯಿತು.

ಮುಖ್ಯವಾಗಿ ಟಾಸ್ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ಲೇಯಿಂಗ್ ಇಲೆವೆನ್ ಪ್ರಕಟಿಸುವಾಗ ಟೆಸ್ಟ್ ಕ್ರಿಕೆಟ್ನ ನಂಬರ್ ಒನ್ ಬೌಲರ್ ರವಿಚಂದ್ರನ್ ಅಶ್ವಿನ್ ಹೆಸರು ಇದರಲ್ಲಿ ಇರಲಿಲ್ಲ. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿತು.

ರವಿಚಂದ್ರನ್ ಅಶ್ವಿನ್ ಭಾರತ ತಂಡ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಿದ್ದಾಗ ಅವರನ್ನು ಫೈನಲ್ನಲ್ಲಿ ಆಡಿಸದ ಬಗ್ಗೆ ಅನೇಕ ಅಭಿಪ್ರಾಯಗಳು ಕೇಳಿಬಂದವು. ಇದೀಗ ಭಾರತದ ಬೌಲಿಂಗ್ ಕೋಚ್ ಅಶ್ವಿನ್ರನ್ನು ಆಯ್ಕೆ ಮಾಡದೆ ಇರುವುದಕ್ಕೆ ಕಾರಣ ತಿಳಿಸಿದ್ದಾರೆ.

ರವಿಚಂದ್ರನ್ ಅಶ್ವಿನ್ ಒಬ್ಬ ಚಾಂಪಿಯನ್ ಬೌಲರ್. ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈಬಿಡುವುದು ಯಾವಾಗಲೂ ತುಂಬಾ ಕಷ್ಟಕರವಾದ ನಿರ್ಧಾರ. ಆದರೆ ನಾವು ಬೆಳಗ್ಗೆ ಪರಿಸ್ಥಿತಿಗಳನ್ನು ನೋಡಿದ್ದೇವೆ ಮತ್ತು ಹೆಚ್ಚುವರಿ ವೇಗಿ ಖಂಡಿತವಾಗಿಯೂ ಪ್ರಯೋಜನಕಾರಿ ಎಂದು ಭಾವಿಸಿದ್ದೆವು ಎಂದು ಭಾರತ ತಂಡದ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಹೇಳಿದ್ದಾರೆ.

ಈ ಪ್ರಯೋಗವನ್ನು ನಾವು ಹಿಂದೆಯೂ ಮಾಡಿದ್ದೇವೆ. ಕಳೆದ ಪ್ರವಾಸದಲ್ಲಿ ನಾವು 4 ವೇಗಿಗಳೊಂದಿಗೆ ಆಡಿದ್ದೆವೆ. ಅವರು ತಂಡಕ್ಕೆ ಉತ್ತಮ ಪ್ರದರ್ಶನ ನೀಡಿದರು ಎಂದು ಪಾರಸ್ ಮಾಂಬ್ರೆ ಮೊದಲ ದಿನದಾಟ ನಂತರದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಮೂಲಕ ಪಾರಸ್ ಮಾಂಬ್ರೆ ಅವರು 4 ವೇಗಿಗಳನ್ನು ಆಡಿಸಲು ತಂಡದ ಮ್ಯಾನೇಜ್‌ಮೆಂಟ್‌ನ ನಿರ್ಧಾರವನ್ನು ಬೆಂಬಲಿಸಿದರು ಮತ್ತು ಪರಿಸ್ಥಿತಿಗಳು ಹೇಗೆ ವಿಭಿನ್ನವಾಗಿವೆ ಎಂಬುದರ ಕುರಿತು ವಿವರಿಸಿದ್ದಾರೆ.

ಓವಲ್ ಮೈದಾನವು ಹಸಿರು ಹುಲ್ಲಿನ ಮೇಲ್ಮೈಯನ್ನು ಹೊಂದಿದೆ. ಗ್ರೀನ್ ಪಿಚ್ ಎಂಬುದು ಬೌಲರ್ಗಳಿಗೆ ಸಹಕಾರಿಯಾಗಿರುತ್ತದೆ. ಅದರಲ್ಲೂ ವೇಗದ ಬೌಲರ್ಗಳಿಗೆ ಹಸಿರು ಮೇಲ್ಮೈ ಪಿಚ್ ಒಂದು ರೀತಿಯ ಸ್ವರ್ಗ. ಏಕೆಂದರೆ ಗ್ರೀನ್ ಪಿಚ್ನಲ್ಲಿ ವೇಗಿಗಳು ಉತ್ತಮವಾಗಿ ಸ್ವಿಂಗ್ ಮಾಡಬಲ್ಲರು. ಹೀಗಾಗಿ ಅಶ್ವಿನ್ರನ್ನು ಕೈಬಿಟ್ಟು ವೇಗಿಗೆ ಅವಕಾಶ ನೀಡಲಾಗಿದೆ.
