WTC Final 2023: ಭಾರತದ ವಿರುದ್ಧ ದಾಖಲೆಯ ಜೊತೆಯಾಟವನ್ನಾಡಿದ ಸ್ಮಿತ್- ಹೆಡ್..!

WTC Final 2023: ರಡನೇ ದಿನದಾಟದ ಆರಂಭದಲ್ಲೇ ಶತಕ ಪೂರೈಸಿರುವ ಸ್ಟೀವ್ ಸ್ಮಿತ್ ಕೂಡ ತಮ್ಮ ಟೆಸ್ಟ್ ವೃತ್ತಿಜೀವನದ 31ನೇ ಟೆಸ್ಟ್ ಶತಕ ಸಿಡಿಸಿ ಮಿಂಚಿದ್ದಾರೆ.

|

Updated on:Jun 08, 2023 | 4:07 PM

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಭಾರತಕ್ಕೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಮೊದಲ ದಿನದ ಮೊದಲ ಸೆಷನ್​ನಲ್ಲಿ ಭಾರತ ಮೇಲುಗೈ ಸಾಧಿಸಿದ್ದು ಬಿಟ್ಟರೆ ಉಳಿದಂತೆ ದಿನವಿಡಿ ಆಸೀಸ್ ಬ್ಯಾಟರ್​ಗಳದ್ದೇ ಅಬ್ಬರ ಹೆಚ್ಚಾಗಿತ್ತು. ಮೊದಲ ದಿನದಲ್ಲಿ ಶತಕ ಸಿಡಿಸಿದ ಹೆಡ್ ಡಬ್ಲ್ಯುಟಿಸಿ ಫೈನಲ್​ನಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು.

1 / 6
ಇದೀಗ ಎರಡನೇ ದಿನದಾಟದ ಆರಂಭದಲ್ಲೇ ಶತಕ ಪೂರೈಸಿರುವ ಸ್ಟೀವ್ ಸ್ಮಿತ್ ಕೂಡ ತಮ್ಮ ಟೆಸ್ಟ್ ವೃತ್ತಿಜೀವನದ 31ನೇ ಟೆಸ್ಟ್ ಶತಕ ಸಿಡಿಸಿ ಮಿಂಚಿದ್ದಾರೆ. ಅಲ್ಲದೆ ಭಾರತದ ವಿರುದ್ಧ ಅತಿ ಕಡಿಮೆ ಇನ್ನಿಂಗ್ಸ್​ನಲ್ಲಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನೂ ಬರೆದಿದ್ದಾರೆ.

2 / 6
ಭಾರತದ ವಿರುದ್ಧ 37 ಇನ್ನಿಂಗ್ಸ್‌ಗಳಲ್ಲಿ ಸ್ಮಿತ್ 9 ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಭಾರತದ ವಿರುದ್ಧ ಜೋ ರೂಟ್ 45 ಇನ್ನಿಂಗ್ಸ್‌ಗಳಲ್ಲಿ 9 ಶತಕ, ಗ್ಯಾರಿ ಸೋಬರ್ಸ್ 30 ಇನ್ನಿಂಗ್ಸ್‌ಗಳಲ್ಲಿ 8, ವಿವ್ ರಿಚರ್ಡ್ಸ್ 41 ಇನ್ನಿಂಗ್ಸ್‌ಗಳಲ್ಲಿ 8 ಮತ್ತು ರಿಕಿ ಪಾಂಟಿಂಗ್ 51 ಇನ್ನಿಂಗ್ಸ್‌ಗಳಲ್ಲಿ 8 ಶತಕ ಬಾರಿಸಿದ್ದಾರೆ.

3 / 6
ಸ್ಮಿತ್ ದಾಖಲೆಯ ಶತಕ ಸಿಡಿಸಿದಲ್ಲದೆ ಟ್ರಾವಿಸ್ ಹೆಡ್ ಜೊತೆ ದಾಖಲೆಯ ಜೊತೆಯಾಟವನ್ನು ನಡೆಸಿದರು. 76 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸೀಸ್ ಇನ್ನಿಂಗ್ಸ್ ಜವಬ್ದಾರಿ ತೆಗೆದುಕೊಂಡ ಸ್ಮಿತ್ ಹಾಗೂ ಹೆಡ್ ಬರೋಬ್ಬರಿ 285ರನ್​ಗಳ ಜೊತೆಯಾಟ ನಡೆಸಿದರು.

4 / 6
ಈ ಜೊತೆಯಾಟದ ಮೂಲಕ ಭಾರತ ವಿರುದ್ಧದ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಪರ ನಾಲ್ಕನೇ ವಿಕೆಟ್​ಗೆ ನಡೆದ ಅತಿ ದೊಡ್ಡ ಜೊತೆಯಾಟ ಇದಾಗಿದೆ. ಇದಲ್ಲದೆ ಸ್ಮಿತ್ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್​ನಲ್ಲಿ 2000 ರನ್ ಪೂರೈಸಿದ ದಾಖಲೆ ಕೂಡ ಬರೆದಿದ್ದಾರೆ.

5 / 6
ಅಂತಿಮವಾಗಿ ಈ ಜೊತೆಯಾಟವನ್ನು ಸಿರಾಜ್ ಮುರಿಯುವಲ್ಲಿ ಯಶಸ್ವಿಯಾದರು. ತಮ್ಮ ಇನ್ನಿಂಗ್ಸ್​ನಲ್ಲಿ 174 ಎಸೆತಗಳನ್ನು ಎದುರಿಸಿದ ಹೆಡ್ 25 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 163 ರನ್ ಸಿಡಿಸಿ ಕೀಪರ್​ ಕೈಗೆ ಕ್ಯಾಚಿತ್ತು ಔಟಾದರು.

6 / 6

Published On - 4:07 pm, Thu, 8 June 23

Follow us
ಮಂತ್ರಿಗಳು ವರ್ಗಾವಣೆಯನ್ನು ದಂಧೆ ಮಾಡಿಕೊಂಡಿರುವಂತಿದೆ: ಪ್ರಲ್ಹಾದ್ ಜೋಶಿ

ನಿಖಿಲ್ ವಿರುದ್ಧ ಯಾಕೆ ಎಫ್ಐಆರ್ ಅಂತ ಇನ್ನೂ ಅರ್ಥವಾಗಿಲ್ಲ: ಕುಮಾರಸ್ವಾಮಿ

ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕೋಲಾರದಲ್ಲಿ ಅಭಿಮಾನಿಗಳಿಂದ ಸಂಭ್ರಮ

ಅಭಿಮಾನಿ ಮತ್ತು ಕಾರ್ಯಕರ್ತರು ತಂದ ಕೇಕನ್ನು ಕಟ್ ಮಾಡಿದ ಬಿವೈ ವಿಜಯೇಂದ್ರ

ಪ್ರಬಲ ಸುದ್ದಿಸಂಸ್ಥೆಯಾಗಿರುವ ಟಿವಿ9 ನೀಡುವ ಪ್ರಚಾರವೇ ನನಗೆ ಸಾಕು: ದೇವೇಗೌಡ

ಎಲ್ಲ ತನಿಖಾ ಸಂಸ್ಥೆಗಳು ಸರ್ಕಾರಗಳ ಅಧೀನದಲ್ಲಿರುತ್ತವೆ: ಸ್ನೇಹಮಯಿ ಕೃಷ್ಣ

ಕಾಂಗ್ರೆಸ್​ಗೆ ಮತನೀಡಿ ಅಧಿಕಾರಕ್ಕೆ ತಂದ ಹಿಂದೂಗಳು ಸೈತಾನರೇ? ಕರಂದ್ಲಾಜೆ

‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ

ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ

Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ