
ಚೆನ್ನೈ ಸೂಪರ್ ಕಿಂಗ್ಸ್ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 27 ರನ್ಗಳಿಂದ ಗೆಲುವು ಪಡೆಯಿತು. ಆ ಮೂಲಕ ನಾಲ್ಕನೇ ಬಾರಿ ಎಂಎಸ್ ಧೋನಿ ನಾಯಕತ್ವ ಸಿಎಸ್ಕೆ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿತು.

ಕಳೆದ ಬಾರಿಯ ಐಪಿಎಲ್ನಲ್ಲಿ ಹೀನಾಯ ಪ್ರದರ್ಶನ ತೋರಿ ಮೊದಲ ತಂಡವಾಗಿ ಹೊರಬಿದ್ದಾಗ ಧೋನಿ ಮುಂದಿನ ಸೀಸನ್ನಲ್ಲಿ ಕಮ್ಬ್ಯಾಕ್ ಮಾಡುತ್ತೇವೆ ಎಂಬ ಮಾತನ್ನಾಡಿದ್ದರು. ಅದರಂತೆ ಧೋನಿ ಈಗ ಹೇಳಿದ ಮಾತನ್ನು ಮಾಡಿ ತೋರಿಸಿದ್ದಾರೆ.

ಈ ಬಾರಿಯ ಸಿಎಸ್ಕೆ ತಂಡಕ್ಕೆ ಋತುರಾಜ್ ಗಾಯಕ್ವಾಡ್ (27 ಎಸೆತಗಳಲ್ಲಿ 32 ರನ್) ಮತ್ತು ಫಾಫ್ ಭರ್ಜರಿ ಆರಂಭ ಒದಗಿಸಿದರು.

ಫಾಫ್ ಡುಪ್ಲೆಸಿಸ್( 86 ರನ್) ಬ್ಯಾಟಿಂಗ್ ಅಬ್ಬರದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಪಾಲಿನ 20 ಓವರ್ಗಳಿಗೆ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು.

ಟ್ರೋಫಿ ಜೊತೆಗೆ ಸಿಎಸ್ಕೆ ನಾಯಕ ಎಂ. ಎಸ್ ಧೋನಿ.

ಎಮರ್ಜಿಂಗ್ ಪ್ಲೇಯರ್ ಅವಾರ್ಡ್ ಅನ್ನು ಸ್ವೀಕರಿಸುತ್ತಿರುವ ರುತುರಾಜ್ ಗಾಯಕ್ವಾಡ್.

ಪಂದ್ಯ ಆರಂಭಕ್ಕೂ ಮುನ್ನಟ್ರೋಫಿ ಜೊತೆ ಫೋಟೋಕ್ಕೆ ಪೋಸ್ ಕೊಟ್ಟ ಉಭಯ ತಂಡದ ನಾಯಕರು.
Published On - 9:09 am, Sat, 16 October 21