ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ, 2 ತಂಡಗಳ ಫ್ರಾಂಚೈಸಿಗಾಗಿ ಒಟ್ಟು 6 ನಗರಗಳನ್ನು ಆಯ್ಕೆ ಮಾಡಲಾಗಿದೆ. ಈ ನಗರಗಳ ಸ್ಟೇಡಿಯಂಗಳನ್ನು ಕೇಂದ್ರೀಕರಿಸಿ ತಂಡಗಳ ಬಿಡ್ಡಿಂಗ್ ನಡೆಯಲಿದೆ. ಅದರಂತೆ ಹೊಸ 2 ತಂಡಗಳ ಕೇಂದ್ರಗಳಾಗಿ ಲಕ್ನೋ, ಅಹಮದಾಬಾದ್, ರಾಂಚಿ, ಕಟಕ್, ಗೌವಾಟಿ ಮತ್ತು ಧರ್ಮಶಾಲಾ ನಗರಗಳ ಸ್ಟೇಡಿಯಂಗಳನ್ನು ಆಯ್ಕೆ ಮಾಡಲಾಗಿದೆ.