IPL 2021: 8 ತಂಡಗಳು, 8 ಸವಾಲುಗಳು; ಸಮಸ್ಯೆಗಳನ್ನು ಮೆಟ್ಟಿನಿಂತವರಿಗೆ ಒಲಿಯಲಿದೆ ಚಾಂಪಿಯನ್ ಪಟ್ಟ
TV9 Web | Updated By: ಪೃಥ್ವಿಶಂಕರ
Updated on:
Sep 18, 2021 | 4:17 PM
IPL 2021: ಎರಡನೇ ಹಂತದಲ್ಲಿ, ತಂಡಗಳು ಅನೇಕ ಬದಲಾವಣೆಗಳು ಮತ್ತು ಸವಾಲುಗಳೊಂದಿಗೆ ಬರಲಿವೆ. ಇಂತಹ ಪರಿಸ್ಥಿತಿಯಲ್ಲಿ, ಎರಡನೇ ಹಂತದಲ್ಲಿ ಮಾರ್ಕ್ ಟೇಬಲ್ ಸ್ಥಾನವು ಕೂಡ ವ್ಯತ್ಯಾಸವನ್ನು ತರಲಿದೆ.
1 / 9
ಐಪಿಎಲ್ 2021
2 / 9
ಹಾಗೆಯೇ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ಪ್ಲೇ ಆಫ್ ಪ್ರವೇಶಿಸಲಿದೆ. ಆರ್ಸಿಬಿ ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಹೀಗಾಗಿ ದ್ವಿತಿಯಾರ್ಧದಲ್ಲೂ ಗೆಲುವಿನ ನಾಗಾಲೋಟ ಮುಂದುವರೆಸಲಿದೆ. ಹಾಗಾಗಿ ಆರ್ಸಿಬಿ ಕೂಡ ಪ್ಲೇ ಆಫ್ ಆಡಲಿದೆ ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
3 / 9
ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀಗಿದೆ: ಮಹೇಂದ್ರ ಸಿಂಗ್ ಧೋನಿ (ನಾಯಕ), ಸುರೇಶ್ ರೈನಾ, ಅಂಬಟಿ ರಾಯುಡು, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ದೀಪಕ್ ಚಹರ್, ಡ್ವೇನ್ ಬ್ರಾವೋ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಎನ್ ಜಗದೀಸನ್, ಕರ್ಣ್ ಶರ್ಮಾ, ಲುಂಗಿ ಎನ್‌ಗಿಡಿ, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಸ್ಯಾಮ್ ಕರನ್, ಆರ್ ಸಾಯಿ ಕಿಶೋರ್, ಮೊಯೀನ್ ಅಲಿ, ಕೆ ಗೌತಮ್, ಚೇತೇಶ್ವರ ಪೂಜಾರ, ಹರಿಶಂಕರ್ ರೆಡ್ಡಿ, ಭಗತ್ ವರ್ಮ, ಸಿ ಹರಿ ನಿಶಾಂತ್, ಜೋಶ್ ಹ್ಯಾಝಲ್‌ವುಡ್.
4 / 9
ಡೆಲ್ಲಿ ಕ್ಯಾಪಿಟಲ್ಸ್
5 / 9
ಕೋಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ತಂಡದ ಬ್ಯಾಟ್ಸ್ಮನ್ಗಳು ಮೊದಲಾರ್ಧದಲ್ಲಿ ಎಡವಿದ್ದರು. ತಂಡದ ಪರ ನಿತೀಶ್ ರಾಣಾ ಅತ್ಯಧಿಕ 201 ರನ್ ಗಳಿಸಿರುವುದು ಹೆಚ್ಚು. ಇದಾಗ್ಯೂ ಸ್ಟಾರ್ ಆಟಗಾರರಾದ ನಾಯಕ ಇಯಾನ್ ಮೊರ್ಗನ್ 93 ರನ್ ಮತ್ತು ದಿನೇಶ್ ಕಾರ್ತಿಕ್ 123 ರನ್ ಮಾತ್ರ ಕಲೆಹಾಕಿದ್ದಾರೆ. ಇನ್ನು ಆಂಡ್ರೆ ರಸೆಲ್ ಕಡೆಯಿಂದಲೂ ಈ ಹಿಂದಿನ ಆಟ ಮೂಡಿ ಬಂದಿಲ್ಲ. ಹೀಗಾಗಿ ದ್ವಿತಿಯಾರ್ಧದಲ್ಲೂ ಬ್ಯಾಟ್ಸ್ಮನ್ಗಳು ಮತ್ತೆ ಕೈಕೊಡಲಿದ್ದಾರಾ ಎಂಬ ಚಿಂತೆ ಕೆಕೆಆರ್ಗೆ ಇದೆ.
6 / 9
ಪಂಜಾಬ್ ಕಿಂಗ್ಸ್: ಪಂಜಾಬ್ ತಂಡವು ನಾಯಕ ಕೆಎಲ್ ರಾಹುಲ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಕ್ರಿಸ್ ಗೇಲ್ ಹಾಗೂ ನಿಕೋಲಸ್ ಪೂರನ್ ಅವರಿಂದ ನಿರೀಕ್ಷಿತ ಆಟ ಮೂಡಿ ಬಂದಿಲ್ಲ. ಅದರಲ್ಲೂ ಮೊದಲಾರ್ಧದಲ್ಲಿ ಮಧ್ಯಮ ಕ್ರಮಾಂಕ ಕೈಕೊಟ್ಟಿರುವುದು ಪಂಜಾಬ್ ತಂಡದ ಚಿಂತೇಗೆ ಕಾರಣವಾಗಿದೆ.
7 / 9
ಎರಡನೇ ಹಂತದಲ್ಲಿ, ಮೂರು ಹೊಸ ವಿದೇಶಿ ಆಟಗಾರರು ರಾಜಸ್ಥಾನ ತಂಡವನ್ನು ಸೇರಿಕೊಂಡಿದ್ದಾರೆ. ಆದಾಗ್ಯೂ, ತಂಡವು ನಿಯಮಿತವಾಗಿ ಪ್ರದರ್ಶನ ನೀಡುವುದು ರಾಜಸ್ಥಾನಕ್ಕೆ ಅಗತ್ಯವಾಗಿದೆ. ಜೋಸ್ ಬಟ್ಲರ್ ಅನುಪಸ್ಥಿತಿಯು ತಂಡಕ್ಕೆ ದೊಡ್ಡ ಸವಾಲಾಗಿದೆ, ಪ್ಲೇಆಫ್ ರೇಸ್‌ನಲ್ಲಿ ತನ್ನನ್ನು ತಾನು ಉಳಿಸಿಕೊಳ್ಳಲು ಹೊಸ ಸಂಯೋಜನೆಯನ್ನು ಶೀಘ್ರದಲ್ಲೇ ಹೊಂದಿಸುವುದು ಮುಖ್ಯವಾಗಿದೆ.
8 / 9
ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಸಮಸ್ಯೆಯಾಗುತ್ತಿದ್ದಾರೆ. ಪಾಂಡ್ಯ ಮೊದಲ ಹಂತದಲ್ಲಿ ಬ್ಯಾಟಿಂಗ್‌ನಲ್ಲಿ ಅದ್ಭುತವಾದ ಆಟ ತೋರಿಸಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ, ಇದುವರೆಗಿನ ಎಲ್ಲ ಏಳು ಪಂದ್ಯಗಳಲ್ಲಿ ಅವರು ಒಂದೇ ಓವರ್ ಬೌಲ್ ಮಾಡಿಲ್ಲ. ಪಾಂಡ್ಯ ಫಾರ್ಮ್‌ನಲ್ಲಿಲ್ಲದಿರುವುದು ಮುಂಬೈನ ಮಧ್ಯಮ ಕ್ರಮಾಂಕದಲ್ಲಿ ವ್ಯತ್ಯಾಸವನ್ನು ಕಾಣಲಿದೆ, ಇದು ಮುಂಬೈಗೆ ಕಷ್ಟವಾಗಬಹುದು.
9 / 9
ಸನ್ ರೈಸರ್ಸ್ ಹೈದರಾಬಾದ್: ಎಸ್ಆರ್ಹೆಚ್ ತಂಡದಲ್ಲಿ ಮನೀಶ್ ಪಾಂಡೆ ಹೊರತುಪಡಿಸಿ, ಯಾವುದೇ ಭಾರತೀಯ ಬ್ಯಾಟ್ಸ್ಮನ್ ಮೊದಲ ಪಂದ್ಯದಲ್ಲಿ 60ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ. ಶಂಕರ್ 58, ಕೇದಾರ್ ಜಾಧವ್ 40 ಮತ್ತು ಸಮದ್ ಕೇವಲ 36 ರನ್ ಕಲೆಹಾಕಿದ್ದಾರೆ. ಇದೀಗ ಜಾನಿ ಬೈರ್ ಸ್ಟೋ ಕೂಡ ಕೈಕೊಟ್ಟಿದ್ದಾರೆ. ಹೀಗಾಗಿ ಹೊಸ ಆರಂಭಿಕನನ್ನು ಕಂಡುಕೊಳ್ಳುವ ಅನಿವಾರ್ಯತೆ ಎಸ್ಆರ್ಹೆಚ್ ತಂಡಕ್ಕಿದೆ. ಒಂದೆಡೆ ಭಾರತೀಯ ಆಟಗಾರರ ವೈಫಲ್ಯ ಎಸ್ಆರ್ಹೆಚ್ ತಂಡದ ಚಿಂತೆಯನ್ನು ಹೆಚ್ಚಿಸಿದೆ.
Published On - 4:11 pm, Sat, 18 September 21