IPL 2022: ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಪಡೆದು ಐಪಿಎಲ್​ನಲ್ಲಿ ವಿಶಿಷ್ಟ ದಾಖಲೆ ಬರೆದ ಅಶ್ವಿನ್..!

|

Updated on: Apr 27, 2022 | 5:04 PM

IPL 2022: ಆರ್‌ಸಿಬಿ ವಿರುದ್ಧ ಅಶ್ವಿನ್ 4 ಓವರ್‌ಗಳ ಬೌಲಿಂಗ್‌ನಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದರು. ಇದರಲ್ಲಿ ಅವರು ರಜತ್ ಪಾಟಿದಾರ್ ಅವರ ಮೊದಲ ವಿಕೆಟ್ ಪಡೆದರು. ಇದರೊಂದಿಗೆ ಐಪಿಎಲ್‌ನಲ್ಲಿ ತಮ್ಮ 150 ವಿಕೆಟ್‌ಗಳನ್ನು ಪೂರೈಸಿದರು.

1 / 4
ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಅಶ್ವಿನ್ ಬೆಲೆ 5 ಕೋಟಿ ಆಗಿತ್ತು. ಆದರೆ ಅವರ ಆಟ ನೋಡಿದರೆ ಈ ಮೊತ್ತ ಕಡಿಮೆಯೇನೋ ಎನಿಸುತ್ತಿದೆ. ಏಕೆಂದರೆ, 5 ಕೋಟಿ ತಕ್ಕಂತ ಆಟವನ್ನು ಅಶ್ವಿನ್ ಆಡಿದ್ದಾರೆ.  ಏಪ್ರಿಲ್ 26 ರ ಸಂಜೆ RCB ವಿರುದ್ಧ ನಡೆದ ಪಂದ್ಯದಲ್ಲಿ, ಅಶ್ವಿನ್ ವಿಶಿಷ್ಟ ದಾಖಲೆ ಬರೆದರು.

2 / 4
RCB ವಿರುದ್ಧದ ಪಂದ್ಯದಲ್ಲಿ ತಮ್ಮ 150 IPL ವಿಕೆಟ್‌ಗಳನ್ನು ಪೂರೈಸುವ ಮೊದಲು, ಅಶ್ವಿನ್ ಕೂಡ 188 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದರು. ಅವರ ಸ್ಟ್ರೈಕ್ ರೇಟ್ ಪಂದ್ಯದಲ್ಲಿ ಯಾವುದೇ ಬ್ಯಾಟ್ಸ್‌ಮನ್‌ಗಳಿಗಿಂತ ಹೆಚ್ಚಿತ್ತು. ಅಷ್ಟೇ ಅಲ್ಲ, ಪಂದ್ಯದಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಬೌಲರ್ ಕೂಡ ಎನಿಸಿಕೊಂಡರು. ಅವರ ಎಕಾನಮಿ ಪಂದ್ಯದಲ್ಲಿ ಇತರ ಎಲ್ಲ ಬೌಲರ್‌ಗಳಿಗಿಂತ ಉತ್ತಮವಾಗಿತ್ತು. ಅವರು ತಮ್ಮ ಕೋಟಾದ 4 ಓವರ್‌ಗಳಲ್ಲಿ ಕೇವಲ ಒಂದು ಬೌಂಡರಿಯನ್ನು ಮಾತ್ರ ನೀಡಿ 11 ಡಾಟ್ ಎಸೆದರು.

3 / 4
ಆರ್‌ಸಿಬಿ ವಿರುದ್ಧ ಅಶ್ವಿನ್ 4 ಓವರ್‌ಗಳ ಬೌಲಿಂಗ್‌ನಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದರು. ಇದರಲ್ಲಿ ಅವರು ರಜತ್ ಪಾಟಿದಾರ್ ಅವರ ಮೊದಲ ವಿಕೆಟ್ ಪಡೆದರು. ಇದರೊಂದಿಗೆ ಐಪಿಎಲ್‌ನಲ್ಲಿ ತಮ್ಮ 150 ವಿಕೆಟ್‌ಗಳನ್ನು ಪೂರೈಸಿದರು. ಈ ಸಾಧನೆ ಮಾಡಿದ 8ನೇ ಬೌಲರ್ ಎನಿಸಿಕೊಂಡರು. ಆದಾಗ್ಯೂ, ಮುಂದಿನ 2 ವಿಕೆಟ್‌ಗಳನ್ನು ಪಡೆಯುವ ಮೂಲಕ, ಅವರು ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಆರನೇ ಸ್ಥಾನವನ್ನು ತಲುಪಿದ್ದಾರೆ.

4 / 4
ಅಶ್ವಿನ್ 150 ಐಪಿಎಲ್ ವಿಕೆಟ್ ಪಡೆದ 8ನೇ ಬೌಲರ್ ಎನಿಸಿಕೊಂಡರು. ಆದರೆ ಅವರು ಮಾಡಿದ ಈ ದಾಖಲೆಯು ಉಳಿದ ಏಳು ಬೌಲರ್‌ಗಳಿಗಿಂತ ಸ್ವಲ್ಪ ಭಿನ್ನವಾಗಿದೆ - ಡ್ವೇನ್ ಬ್ರಾವೋ, ಲಸಿತ್ ಮಾಲಿಂಗ, ಅಮಿತ್ ಮಿಶ್ರಾ, ಯುಜ್ವೇಂದ್ರ ಚಹಾಲ್, ಪಿಯೂಷ್ ಚಾವ್ಲಾ, ಭುವನೇಶ್ವರ್ ಕುಮಾರ್ ಮತ್ತು ಹರ್ಭಜನ್ ಸಿಂಗ್. ವಾಸ್ತವವಾಗಿ, ಈ ಎಲ್ಲರಗಿಂತಲೂ ಅಶ್ವಿನ್ ಐಪಿಎಲ್‌ನಲ್ಲಿ ಅತ್ಯಂತ ಕಡಿಮೆ ಎಕಾನಮಿಯೊಂದಿಗೆ 150 ವಿಕೆಟ್ ಪಡೆದಿದ್ದಾರೆ.

Published On - 4:55 pm, Wed, 27 April 22