IPL 2022: ಶ್ರೇಯಸ್ ಅಯ್ಯರ್ ಖರೀದಿಗಾಗಿ ಕಣ್ಣಿಟ್ಟಿದೆ 3 ಫ್ರಾಂಚೈಸಿಗಳು..!

Edited By:

Updated on: Dec 06, 2021 | 8:47 PM

IPL 2022 Mega Auction: ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಂದಿರುವ ಶ್ರೇಯಸ್ ಅಯ್ಯರ್ ಮೆಗಾ ಹರಾಜಿನ ಹಾಟ್ ಫೇವರೇಟ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಏಕೆಂದರೆ ಈ ಬಾರಿ ಕೆಕೆಆರ್, ಪಂಜಾಬ್ ಕಿಂಗ್ಸ್​, ಆರ್​ಸಿಬಿ ಹಾಗೂ ಹೊಸ ಎರಡು ತಂಡಗಳು ನಾಯಕನ ಹುಡುಕಾಟದಲ್ಲಿದೆ.

1 / 7
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗಾಗಿ ಎಲ್ಲಾ ತಂಡಗಳು ಸಿದ್ದವಾಗಿದೆ. ಈಗಾಗಲೇ ಹಳೆಯ 8 ತಂಡಗಳು ತಮಗೆ ಬೇಕಾದ 27 ಆಟಗಾರರನ್ನು ಉಳಿಸಿಕೊಂಡಿದೆ. ಇದಾಗ್ಯೂ ಕೆಲ ತಂಡಗಳಿಂದ ಸ್ಟಾರ್ ಆಟಗಾರರು ರಿಲೀಸ್ ಆಗಿರುವುದು ವಿಶೇಷ. ಈ ಪಟ್ಟಿಯಲ್ಲಿ ಮಾಜಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಇರುವುದು ವಿಶೇಷ.

ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗಾಗಿ ಎಲ್ಲಾ ತಂಡಗಳು ಸಿದ್ದವಾಗಿದೆ. ಈಗಾಗಲೇ ಹಳೆಯ 8 ತಂಡಗಳು ತಮಗೆ ಬೇಕಾದ 27 ಆಟಗಾರರನ್ನು ಉಳಿಸಿಕೊಂಡಿದೆ. ಇದಾಗ್ಯೂ ಕೆಲ ತಂಡಗಳಿಂದ ಸ್ಟಾರ್ ಆಟಗಾರರು ರಿಲೀಸ್ ಆಗಿರುವುದು ವಿಶೇಷ. ಈ ಪಟ್ಟಿಯಲ್ಲಿ ಮಾಜಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಇರುವುದು ವಿಶೇಷ.

2 / 7

ಏಕೆಂದರೆ ಶ್ರೇಯಸ್ ಅಯ್ಯರ್ ಐಪಿಎಲ್​ನ ಅತ್ಯುತ್ತಮ ನಾಯಕರಲ್ಲಿ ಒಬ್ಬರು. ಈ ಹಿಂದೆ 2019 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದ ಅಯ್ಯರ್ ತಂಡವನ್ನು ಪ್ಲೇ ಆಫ್​ಗೆ ಕೊಂಡೊಯ್ದಿದ್ದರು. ಅಷ್ಟೇ ಅಲ್ಲದೆ 2020 ರಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಡೆಲ್ಲಿ ಫೈನಲ್​ ಪ್ರವೇಶಿಸಿತ್ತು. ಆದರೆ 2021 ರಲ್ಲಿ ಗಾಯದ ಕಾರಣ ಅಯ್ಯರ್ ಐಪಿಎಲ್​ನಿಂದ ಹೊರಗುಳಿದಿದ್ದರು.

3 / 7

ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಂದಿರುವ ಶ್ರೇಯಸ್ ಅಯ್ಯರ್ ಮೆಗಾ ಹರಾಜಿನ ಹಾಟ್ ಫೇವರೇಟ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಏಕೆಂದರೆ ಈ ಬಾರಿ ಕೆಕೆಆರ್, ಪಂಜಾಬ್ ಕಿಂಗ್ಸ್​, ಆರ್​ಸಿಬಿ ಹಾಗೂ ಹೊಸ ಎರಡು ತಂಡಗಳು ನಾಯಕನ ಹುಡುಕಾಟದಲ್ಲಿದೆ. ಅತ್ತ ಅಯ್ಯರ್ ಮಧ್ಯಮ ಕ್ರಮಾಂಕದ ಅತ್ಯುತ್ತಮ ಬ್ಯಾಟರ್ ಕೂಡ ಆಗಿದ್ದು, ಹೀಗಾಗಿ ಎಲ್ಲಾ ತಂಡಗಳಿಗೂ ಅಯ್ಯರ್ ಅವಶ್ಯಕತೆಯಿದೆ.

4 / 7

ಅದರಲ್ಲೂ ಶ್ರೇಯಸ್ ಅಯ್ಯರ್ ಖರೀದಿಗೆ ಮೂರು ಫ್ರಾಂಚೈಸಿಗಳು ತುದಿಗಾಲಲ್ಲಿ ನಿಂತಿದೆ ಎಂದು ತಿಳಿದು ಬಂದಿದೆ. ಏಕೆಂದರೆ ಈ ತಂಡಗಳಿಗೆ ಮಧ್ಯಮ ಕ್ರಮಾಂಕದಲ್ಲಿ ಬಲಿಷ್ಠ ಬ್ಯಾಟರ್​ ಅಗತ್ಯವಿದ್ದು, ಜೊತೆಗೆ ಕೆಲ ತಂಡಕ್ಕೆ ಉತ್ತಮ ನಾಯಕ ಅವಶ್ಯಕತೆಯಿದೆ. ಹೀಗಾಗಿ ಈ ಮೂರು ತಂಡಗಳು ಅಯ್ಯರ್​ಗಾಗಿ ಬಿಡ್ ಮಾಡುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು. ಹಾಗಿದ್ರೆ ಯಾವ ತಂಡ ಅಯ್ಯರ್ ಮೇಲೆ ಕಣ್ಣಿಟ್ಟಿದೆ ನೋಡೋಣ...

5 / 7

ಚೆನ್ನೈ ಸೂಪರ್ ಕಿಂಗ್ಸ್​: ಸಿಎಸ್​ಕೆ ತಂಡವು ಈ ಬಾರಿ ಸುರೇಶ್ ರೈನಾ ಅವರನ್ನು ಕೈಬಿಟ್ಟಿದೆ. ಅಂದರೆ ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ಮಧ್ಯಮ ಕ್ರಮಾಂಕಕ್ಕೆ ಬಲಿಷ್ಠ ಬ್ಯಾಟರ್ ಅಗತ್ಯವಿದೆ. ಜೊತೆಗೆ ಮಹೇಂದ್ರ ಸಿಂಗ್ ಧೋನಿ ಉತ್ತರಾಧಿಕಾರಿಯನ್ನು ಕೂಡ ಸಿಎಸ್​ಕೆ ಹುಡುಕುತ್ತಿದೆ. ಪ್ರಸ್ತುತ ತಂಡದ ಮಧ್ಯಮ ಕ್ರಮಾಂಕವನ್ನು ಬಲಪಡಿಸಲು ಹಾಗೂ ಭವಿಷ್ಯದ ದೃಷ್ಟಿಯಲ್ಲಿ ಶ್ರೇಯಸ್ ಅಯ್ಯರ್ ಅವರಂತಹ ಆಟಗಾರ ಸಿಎಸ್​ಕೆ ಅವಶ್ಯಕತೆಯಿದೆ. ಹೀಗಾಗಿ ಮೆಗಾ ಹರಾಜಿನಲ್ಲಿ ಅಯ್ಯರ್ ಖರೀದಿಗಾಗಿ ಸಿಎಸ್​ಕೆ ಪೈಪೋಟಿ ನಡೆಸಲಿದೆ.

6 / 7

ಪಂಜಾಬ್ ಕಿಂಗ್ಸ್​: ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡದಿಂದ ಹೊರನಡೆದಿದ್ದಾರೆ. ಇದೀಗ ಪಂಜಾಬ್​ಗೆ ಉತ್ತಮ ನಾಯಕ ಅವಶ್ಯಕತೆಯಿದೆ. ಜೊತೆಗೆ ಪಂಜಾಬ್ ಕಿಂಗ್ಸ್​ಗೆ ಮಧ್ಯಮ ಕ್ರಮಾಂಕದ ಬ್ಯಾಟರ್​ನ ಅವಶ್ಯಕತೆಯಿದೆ. ಅತ್ತ ಸ್ಟಾರ್​ ಆಟಗಾರರು ತಂಡದಿಂದ ಹೊರನಡೆದಿರುವ ಕಾರಣ ಪಂಜಾಬ್ ಕಿಂಗ್ಸ್​ ಈ ಬಾರಿ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಗಾಗಿ ಟಾರ್ಗೆಟ್ ಮಾಡುವುದಲ್ಲಿ ಅನುಮಾನವೇ ಇಲ್ಲ.

7 / 7

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್​ಸಿಬಿ ತಂಡವು ನಾಯಕನ ಹುಡುಕಾಟದಲ್ಲಿರುವುದು ಗೊತ್ತಿರುವ ವಿಚಾರ. ಆದರೆ ಅತ್ತ ತಂಡದಿಂದ ಎಬಿ ಡಿವಿಲಿಯರ್ಸ್ ಕೂಡ ಹೊರ ಹೋಗಿದ್ದಾರೆ. ಹೀಗಾಗಿ ಆರ್​ಸಿಬಿ ಒಂದೇ ಖರೀದಿಯಲ್ಲಿ ಎರಡು ಆಯ್ಕೆಯನ್ನು ಸರಿದೂಗಿಸುವ ಯೋಜನೆಯಲ್ಲಿದೆ. ಅದರಂತೆ ಎಬಿಡಿಯ ಜಾಗಕ್ಕೆ ಮತ್ತು ನಾಯಕನಾಗಿ ಶ್ರೇಯಸ್ ಅಯ್ಯರ್ ಅವರೊಬ್ಬರೇ ಉತ್ತಮ ಆಯ್ಕೆ. ಹೀಗಾಗಿ ಈ ಬಾರಿ ಆರ್​ಸಿಬಿ ಕೂಡ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಲು ಇನ್ನಿಲ್ಲದ ಪ್ರಯತ್ನ ಮಾಡಲಿದೆ ಎಂದೇ ಹೇಳಬಹುದು.

Published On - 8:45 pm, Mon, 6 December 21

Loading...
Unable to load recommendations.
Follow Us