IPL Auction 2022: ಐಪಿಎಲ್ 2022 ಮೆಗಾ ಆಕ್ಷನ್ಗೆ ದಿನಾಂಕ ಫಿಕ್ಸ್: ಬೆಂಗಳೂರಿನಲ್ಲಿ ಎರಡು ದಿನ ಹರಾಜು ಪ್ರಕ್ರಿಯೆ
TV9 Web | Updated By: Vinay Bhat
Updated on:
Dec 23, 2021 | 8:06 AM
IPL 2022: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ 2022ರ ಮೆಗಾ ಹರಾಜು ಪ್ರಕ್ರಿಯೆಯು ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಇದೆ. ಫೆಬ್ರುವರಿ 7 ಮತ್ತು 8ರಂದು ಆಯೋಜನೆಗೊಳ್ಳಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
1 / 6
ಎಲ್ಲವೂ ಅಂದುಕೊಂಡಂತೆ ನಡೆದ್ದರೆ ಈ ಹೊತ್ತಿಗೆ ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಮೆಗಾ ಹರಾಜು ಪ್ರಕ್ರಿಯೆ ಮುಗಿದು ಆಟಗಾರರ ಭವಿಷ್ಯ ನಿರ್ಧಾರವಾಗುತ್ತಿತ್ತು. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಪಿಎಲ್ ಹರಾಜನ್ನು ಮುಂದೆ ನೂಕುತ್ತಾ ಬಂದಿತು. ಆದರೀಗ ಬಿಸಿಸಿಐ ಮೂಲಗಳಿಂದ ಖಚಿತ ಮಾಹಿತಿ ಹೊರಬಿದ್ದದ. ಐಪಿಎಲ್ 2022 ಮೆಗಾ ಆಕ್ಷನ್ ಎಲ್ಲಿ? ಮತ್ತು ಯಾವಾಗ? ನಡೆಯಲಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.
2 / 6
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ 2022ರ ಮೆಗಾ ಹರಾಜು ಪ್ರಕ್ರಿಯೆಯು ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಇದೆ. ಫೆಬ್ರುವರಿ 7 ಮತ್ತು 8ರಂದು ಆಯೋಜನೆಗೊಳ್ಳಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
3 / 6
ಕೋವಿಡ್ ಸ್ಥಿತಿ ನಿಯಂತ್ರಣದಲ್ಲಿ ಇದ್ದರೆ ಐಪಿಎಲ್ ಬೃಹತ್ ಹರಾಜನ್ನು ಭಾರತದಲ್ಲೇ ನಡೆಸಲಾಗುವುದು. ಎಂದಿನಂತೆ ಇದು ಎರಡು ದಿನಗಳ ಕಾಲ ನಡೆಯಲಿದೆ. ಫೆ. 7 ಮತ್ತು 8ರಂದು ಈ ಹರಾಜನ್ನು ಬೆಂಗಳೂರಿನಲ್ಲಿ ನಡೆಸುವ ಯೋಜನೆ ನಮ್ಮದು. ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಷರತ್ತಿನನ್ವಯ ಪಿಟಿಐಗೆ ತಿಳಿಸಿದ್ದಾರೆ.
4 / 6
ಈ ವರ್ಷ ಐಪಿಎಲ್ನಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಯಾಗಿವೆ. ಸಂಜೀವ್ ಗೋಯೆಂಕಾ ಒಡೆತನದ ಲಖನೌ ಮತ್ತು ವೆಂಚರ್ ಕ್ಯಾಪಿಟಲ್ಸ್ ಫರ್ಮ್ ಸಿವಿಸಿ ಮಾಲೀಕತ್ವದ ಅಹಮದಾಬಾದ್ ತಂಡಗಳು ಪದಾರ್ಪಣೆ ಮಾಡಲಿವೆ. ಈ ತಂಡಗಳಿಗೂ ಆಟಗಾರರ ಆಯ್ಕೆ ನಡೆಯಲಿದೆ.
5 / 6
ಅಲ್ಲದೆ ಐಪಿಎಲ್ನ ಹೊಸ ತಂಡಗಳ ಪೈಕಿ ಅಹಮದಾಬಾದ್ ತಂಡವನ್ನು ಖರೀದಿಸಿದ ಲಕ್ಸೆಂಬರ್ಗ್ ಮೂಲಕ ಸಿವಿಸಿ ಕ್ಯಾಪಿಟಲ್ಸ್ ಸಂಸ್ಥೆ, ಬೆಟ್ಟಿಂಗ್ ಕಂಪನಿಗಳ ಜೊತೆ ಹೂಡಿಕೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಈ ಬಗ್ಗೆ ತನಿಖೆಗೆ ಸ್ವತಂತ್ರ ಸಮಿತಿಯನ್ನು ರಚಿಸಿದ್ದು, ಸಮಿತಿಯು ಇನ್ನಷ್ಟೇ ಈ ಬಗ್ಗೆ ವರದಿ ಸಲ್ಲಿಸಬೇಕಿದೆ. ಹೀಗಾಗಿ ಹರಾಜು ತಡವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ ಎನ್ನಲಾಗಿದೆ.
6 / 6
ಹೊಸ ಫ್ರಾಂಚೈಸಿಗಳು 33 ಕೋಟಿ ರುಪಾಯಿಗಳಲ್ಲಿ ತಮಗೆ ಬೇಕಾದ ಮೂವರು ಆಟಗಾರರನ್ನು ಖರೀದಿಸಬಹುದಾಗಿದೆ. ಮೊದಲ ಅದ್ಯತೆಯ ಆಟಗಾರನಿಗೆ 15 ಕೋಟಿ, ಎರಡನೇ ಆಟಗಾರನಿಗೆ 11 ಕೋಟಿ ಹಾಗೂ ಮೂರನೇ ಆಟಗಾರನಿಗೆ 7 ಕೋಟಿ ರುಪಾಯಿ ಪಡೆಯಲಿದ್ದಾರೆ. ಮೂರು ಆಟಗಾರರ ಪೈಕಿ ಇಬ್ಬರು ಆಟಗಾರರು ಭಾರತೀಯರಾಗಿರಬೇಕು.