IPL 2022: ಐಪಿಎಲ್ ಮೆಗಾ ಹರಾಜು ಯಾವಾಗ? ಮತ್ತೊಂದು ಅಪ್ಡೇಟ್ ನೀಡಿದ ಬಿಸಿಸಿಐ
TV9 Web | Updated By: ಝಾಹಿರ್ ಯೂಸುಫ್
Updated on:
Dec 20, 2021 | 3:02 PM
IPL 2022 Mega Auction Date: ಅಹಮದಾಬಾದ್ ತಂಡವನ್ನು ಖರೀದಿಸಿರುವ CVC ಕ್ಯಾಪಿಟಲ್ ಪಾರ್ಟ್ನರ್ಸ್ ಖಾಸಗಿ ಇಕ್ವಿಟಿ ಮತ್ತು ಹೂಡಿಕೆ ಸಲಹಾ ಸಂಸ್ಥೆಯಾಗಿದ್ದು, ಯುರೋಪಿಯನ್ ಮತ್ತು ಏಷ್ಯಾದ ಅನೇಕ ಬೆಟ್ಟಿಂಗ್ ಹಾಗೂ ಜೂಜಾಟ ಕಂಪೆನಿಗಳು ಹೂಡಿಕೆಯನ್ನು ಮಾಡಿದೆ.
1 / 6
ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗೆ ಮೆಗಾ ಹರಾಜು ಯಾವಾಗ? ಎಂಬ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಸದ್ಯಕ್ಕಂತು ಇಲ್ಲ. ಅಂದರೆ ಈ ಹಿಂದೆ ಮೆಗಾ ಹರಾಜು ಜನವರಿ ಮೊದಲ ವಾರದಲ್ಲಿ ನಡೆಯಲಿದೆ ಎನ್ನಲಾಗಿತ್ತು. ಇದಾದ ಬಳಿಕ ಜನವರಿ 2ನೇ ವಾರಕ್ಕೆ ಮುಂದೂಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿತ್ತು.
2 / 6
ಆದರೀಗ ಜನವರಿ ಮೂರನೇ ವಾರದೊಳಗೆ ಮೆಗಾ ಹರಾಜು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ ಬಿಸಿಸಿಐ ಅಧಿಕಾರಿ. ಅಹಮದಾಬಾದ್ ಫ್ರಾಂಚೈಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಂತಿಮಗೊಳಿಸುವಲ್ಲಿ ವಿಳಂಬವಾಗಿರುವುದರಿಂದ, ಮೆಗಾ ಹರಾಜನ್ನು ಜನವರಿ 3ನೇ ವಾರದೊಳಗೆ ನಡೆಸಲು ಆಗುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಮೆಗಾ ಹರಾಜು ಜನವರಿ ನಾಲ್ಕನೇ ವಾರ ಅಥವಾ ಫೆಬ್ರವರಿ ತಿಂಗಳಿಗೆ ಮುಂದೂಡುವ ಸಾಧ್ಯತೆ ಇದೆ.
3 / 6
ಬಿಸಿಸಿಐ ಅಹಮದಾಬಾದ್ ತಂಡದ ಮಾಲೀಕರಾದ CVC ಕಂಪೆನಿಯ ಮಾಲೀಕತ್ವದ ಕುರಿತಾಗಿ ವಿಶೇಷವಾಗಿ ನೇಮಕವಾಗಿರುವ ಸಮಿತಿಯ ಅಂತಿಮ ವರದಿ ಸಲ್ಲಿಸುವುದನ್ನು ನಾವು ಕಾಯುತ್ತಿದ್ದೇವೆ. ಹೀಗಾಗಿ ಈ ವರದಿಯ ಪರಿಶೀಲನೆಗೂ ಮುನ್ನ ಹರಾಜು ದಿನಾಂಕಗಳನ್ನು ಅಂತಿಮಗೊಳಿಸಲಾಗುವುದಿಲ್ಲ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
4 / 6
ಇತ್ತ ಸಿವಿಸಿ ಮಾಲೀಕತ್ವದಲ್ಲಿ ಅಹಮದಾಬಾದ್ ಫ್ರಾಂಚೈಸಿಯ ಪಾಲ್ಗೊಳ್ಳುವಿಕೆ ಕುರಿತು ಬಿಸಿಸಿಐ ನಿರ್ಧಾರ ವಿಳಂಬವಾಗುತ್ತಿರುವ ಕಾರಣ, ಮೆಗಾ ಹರಾಜು ಕೂಡ ತಡೆವಾಗಲಿದೆ. ಏಕೆಂದರೆ ಹರಾಜಿನ ಮೊದಲು 3 ಆಟಗಾರರನ್ನು ಆಯ್ಕೆ ಮಾಡಲು ಲಕ್ನೋ ಮತ್ತು ಅಹಮದಾಬಾದ್ ತಂಡಗಳಿಗೆ ಸರಿಯಾದ ವಿಂಡೋವನ್ನು ನೀಡಬೇಕಾಗಿದೆ. ಹೀಗಾಗಿ ಜನವರಿ ಮೂರನೇ ಅಥವಾ ನಾಲ್ಕನೇ ವಾರದ ಮೊದಲು ಹರಾಜು ನಡೆಯುತ್ತದೆ ಎಂದು ನಾವು ಭಾವಿಸುವುದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
5 / 6
ಅಹಮದಾಬಾದ್ ತಂಡವನ್ನು ಖರೀದಿಸಿರುವ CVC ಕ್ಯಾಪಿಟಲ್ ಪಾರ್ಟ್ನರ್ಸ್ ಖಾಸಗಿ ಇಕ್ವಿಟಿ ಮತ್ತು ಹೂಡಿಕೆ ಸಲಹಾ ಸಂಸ್ಥೆಯಾಗಿದ್ದು, ಯುರೋಪಿಯನ್ ಮತ್ತು ಏಷ್ಯಾದ ಅನೇಕ ಬೆಟ್ಟಿಂಗ್ ಹಾಗೂ ಜೂಜಾಟ ಕಂಪೆನಿಗಳು ಹೂಡಿಕೆಯನ್ನು ಮಾಡಿದೆ.
6 / 6
ಇದೀಗ ಕಂಪೆನಿಯ ಬೆಟ್ಟಿಂಗ್ ವ್ಯವಹಾರ ವಿಚಾರ ಬಿಸಿಸಿಐಗೆ ಹೊಸ ತಲೆನೋವುಂಟು ಮಾಡಿದೆ. ಹೀಗಾಗಿ ಸಿವಿಸಿ ಕಂಪೆನಿಯ ಮಾಲೀಕತ್ವವನ್ನು ಮುಂದುವರೆಸಬೇಕಾ ಅಥವಾ ರದ್ದು ಮಾಡಬೇಕಾ ಎಂಬುದನ್ನು ನಿರ್ಧರಿಸಲು ಬಿಸಿಸಿಐ ವಿಶೇಷ ಸಮಿತಿಯನ್ನು ರಚಿಸಿದ್ದು, ಈ ಸಮಿತಿ ಸಂಪೂರ್ಣ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ ಬಳಿಕವಷ್ಟೇ ಮೆಗಾ ಹರಾಜು ದಿನಾಂಕ ಘೋಷಣೆಯಾಗಲಿದೆ.