IPL 2022: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಲಕ್ನೋ ತಂಡದ 3 ಮಾಸ್ಟರ್ ಸ್ಟ್ರೋಕ್
TV9 Web | Updated By: ಝಾಹಿರ್ ಯೂಸುಫ್
Updated on:
Dec 21, 2021 | 7:32 PM
IPL 2022 Mega Auction: ಲಕ್ನೋ ಫ್ರಾಂಚೈಸಿ ಗೌತಮ್ ಗಂಭೀರ್ ಅವರನ್ನು ಮಾರ್ಗದರ್ಶಕರಾಗಿ ಆಯ್ಕೆ ಮಾಡಿಕೊಂಡಿದೆ. ಇದು ಗೌತಮ್ ಗಂಭೀರ್ ಅವರಿಗೆ ಹೊಸ ಹುದ್ದೆಯಾದರೂ, ಅವರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಲಿದ್ದಾರೆ.
1 / 5
ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ಲಕ್ನೋ ತಂಡವು ಈಗಾಗಲೇ ತನ್ನ ತಂಡದ ಕೋಚ್ ಅನ್ನು ಘೋಷಿಸಿದೆ. ಅದರಂತೆ ಮುಂದಿನ ಸೀಸನ್ನಲ್ಲಿ ಲಕ್ನೋ ತಂಡದ ಕೋಚ್ ಆಗಿ ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಆ್ಯಂಡಿ ಫ್ಲವರ್ ಕಾಣಿಸಿಕೊಳ್ಳಲಿದ್ದಾರೆ.
2 / 5
ಕೋಚ್ ಆ್ಯಂಡಿ ಫ್ಲವರ್: ಆ್ಯಂಡಿ ಫ್ಲವರ್ ಟಿ20 ಕ್ರಿಕೆಟ್ನ ಅತ್ಯುತ್ತಮ ಕೋಚ್ ಎಂದು ಗುರುತಿಸಿಕೊಂಡಿದ್ದಾರೆ. ಏಕೆಂದರೆ ಫ್ಲವರ್ ಅವರ ಸಾರಥ್ಯದಲ್ಲಿ ಇಂಗ್ಲೆಂಡ್ ತಂಡವು ಮೊದಲ ಬಾರಿಗೆ 2010 ರಲ್ಲಿ ಟಿ20 ವಿಶ್ವಕಪ್ ಗೆದ್ದಿತ್ತು. ಅಷ್ಟೇ ಅಲ್ಲದೆ 2021 ರ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಆ್ಯಂಡಿ ಫ್ಲವರ್ ನೇತೃತ್ವದ ಮುಲ್ತಾನ್ ಸುಲ್ತಾನ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು. ಇನ್ನು ಸಿಪಿಎಲ್ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡವು ಎರಡು ಬಾರಿ ಫೈನಲ್ ಪ್ರವೇಶಿಸುವಲ್ಲಿ ಆ್ಯಂಡಿ ಫ್ಲವರ್ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಲಕ್ನೋ ಫ್ರಾಂಚೈಸಿಯ ಕೋಚ್ ಆಯ್ಕೆ ಅತ್ಯುತ್ತಮ ನಿರ್ಧಾರ ಎಂದು ವಿಶ್ಲೇಷಿಸಲಾಗುತ್ತಿದೆ.
3 / 5
ಗೌತಮ್ ಗಂಭೀರ್ ಮೆಂಟರ್: ಲಕ್ನೋ ಫ್ರಾಂಚೈಸಿ ಗೌತಮ್ ಗಂಭೀರ್ ಅವರನ್ನು ಮಾರ್ಗದರ್ಶಕರಾಗಿ ಆಯ್ಕೆ ಮಾಡಿಕೊಂಡಿದೆ. ಇದು ಗೌತಮ್ ಗಂಭೀರ್ ಅವರಿಗೆ ಹೊಸ ಹುದ್ದೆಯಾದರೂ, ಅವರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಲಿದ್ದಾರೆ. ಏಕೆಂದರೆ ಐಪಿಎಲ್ನ ಅತ್ಯಂತ ಕಳಪೆ ತಂಡ ಎನಿಸಿಕೊಂಡಿದ್ದ ಕೆಕೆಆರ್ ತಂಡವನ್ನು ಬಲಿಷ್ಠವಾಗಿ ರೂಪಿಸಿದ್ದು ಗೌತಮ್ ಗಂಭೀರ್. ಅಷ್ಟೇ ಅಲ್ಲದೆ 2012 ಮತ್ತು 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು. ಹೀಗಾಗಿ ಮೆಂಟರ್ ಆಗಿ ಗೌತಮ್ ಗಂಭೀರ್ ಕೂಡ ಯಶಸ್ವಿಯಾಗಲಿದ್ದಾರೆ ವಿಶ್ಲೇಷಿಸಲಾಗುತ್ತಿದೆ.
4 / 5
ಕೆಎಲ್ ರಾಹುಲ್: ಲಕ್ನೋ ಪರ ನಾಯಕನಾಗಿ ಕೆಎಲ್ ರಾಹುಲ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಅಂದರೆ ಇಲ್ಲಿ ಕೆಎಲ್ ರಾಹುಲ್ ಅವರ ಆಯ್ಕೆ ಮೂಲಕ ಲಕ್ನೋ ನಾಯಕ, ವಿಕೆಟ್ ಕೀಪರ್ ಹಾಗೂ ಓಪನರ್ ಸಮಸ್ಯೆಯನ್ನು ನೀಗಿಸಿಕೊಂಡಿದೆ.
5 / 5
ಇನ್ನು ಅತ್ತ ಕೋಚ್ ಆಗಿ ಆ್ಯಂಡಿ ಫ್ಲವರ್ ಕೂಡ ಇದ್ದಾರೆ. ಈ ಹಿಂದೆ ಆ್ಯಂಡಿ ಫ್ಲವರ್ ಪಂಜಾಬ್ ಕಿಂಗ್ಸ್ ತಂಡ ಸಹಾಯಕ ಕೋಚ್ ಆಗಿದ್ದರು. ಅಂದರೆ ಕೆಎಲ್ ರಾಹುಲ್ ಹಾಗೂ ಆ್ಯಂಡಿ ಫ್ಲವರ್ ಈಗ ಲಕ್ನೋ ಮೂಲಕ ಮತ್ತೆ ಒಂದಾಗುತ್ತಿರುವುದು ತಂಡದ ಹೊಂದಾಣಿಕೆಗೆ ಉತ್ತಮ. ಹೀಗಾಗಿ ಲಕ್ನೋ ಫ್ರಾಂಚೈಸಿ ಮೆಗಾ ಹರಾಜಿನ ಮುನ್ನ ತೆಗೆದುಕೊಂಡಿರುವ ಈ ಮೂರು ನಿರ್ಧಾರಗಳು ಮಾಸ್ಟರ್ ಸ್ಟ್ರೋಕ್ ಎಂದು ವಿಶ್ಲೇಷಿಸಲಾಗುತ್ತಿದೆ.