IPL 2022: ಐಪಿಎಲ್ 2022 ಮೆಗಾ ಹರಾಜು ಇಷ್ಟೊಂದು ವಿಳಂಬವಾಗಲು ಕಾರಣವೇನು?: ಇಲ್ಲಿದೆ ನೋಡಿ
TV9 Web | Updated By: Vinay Bhat
Updated on:
Dec 21, 2021 | 9:29 AM
IPL 2022 Mega Auction: ಬಿಸಿಸಿಐ ಮೂಲಗಳು ಹೇಳಿರುವ ಪ್ರಕಾರ ಐಪಿಎಲ್ 2022ರ ಮೆಗಾ ಆಕ್ಷನ್ ಫೆಬ್ರವರಿ ಮೊದಲ ವಾರದಲ್ಲಿ ಆಯೋಜಿಸುವ ಬಗ್ಗೆ ಚಿಂತನೆ ನಡೆಸಿದ್ದಾರಂತೆ. ಅಷ್ಟಕ್ಕೂ ಹರಾಜು ಪ್ರಕ್ರಿಯೆ ವಿಳಂಬವಾಗಲು ಕಾರಣವೇನು..?, ಇದಕ್ಕೆ ಉತ್ತರ ಇಲ್ಲಿದೆ ನೋಡಿ.
1 / 6
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಹೊತ್ತಿಗೆ ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಮೆಗಾ ಹರಾಜು ಪ್ರಕ್ರಿಯೆ ಮುಗಿದಿರುತ್ತಿತ್ತು. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಪಿಎಲ್ ಹರಾಜಿಗೆ ಇನ್ನೂ ದಿನಾಂಕವನ್ನೇ ನಿಗದಿ ಮಾಡಿಲ್ಲ. ಆಗೊಮ್ಮೆ, ಈಗಮ್ಮೊ ಮುಂದಿನ ತಿಂಗಳು ನಡೆಯಲಿದೆ, ಹೊಸ ವರ್ಷದ ಆರಂಭದಲ್ಲಿ ನಡೆಯಲಿದೆ ಎಂಬ ಮಾತುಗಳಷ್ಟೆ ಕೇಳಿಬರುತ್ತಿವೆ.
2 / 6
ಈಗ ಇದೇ ಮಾತು ಮತ್ತೆ ಮುಂದುವರೆದಿದೆ. ಬಿಸಿಸಿಐ ಮೂಲಗಳು ಹೇಳಿರುವ ಪ್ರಕಾರ ಐಪಿಎಲ್ 2022ರ ಮೆಗಾ ಆಕ್ಷನ್ ಫೆಬ್ರವರಿ ಮೊದಲ ವಾರದಲ್ಲಿ ಆಯೋಜಿಸುವ ಬಗ್ಗೆ ಚಿಂತನೆ ನಡೆಸಿದ್ದಾರಂತೆ. ಅಷ್ಟಕ್ಕೂ ಹರಾಜು ಪ್ರಕ್ರಿಯೆ ವಿಳಂಬವಾಗಲು ಕಾರಣವೇನು..?
3 / 6
ಈಗಾಗಲೇ ತಿಳಿದಿರುವಂತೆ 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಈಗಿರುವ 8 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಇನ್ನುಳಿದ 2 ಫ್ರಾಂಚೈಸಿಗಳು ಲಕ್ನೋ ಮತ್ತು ಅಹಮದಾಬಾದ್ ತಮಗೆ ಬೇಕಾದ ಆಟಗಾರರನ್ನು ಆಯ್ದುಕೊಳ್ಳಬಹುದಾಗಿದೆ.
4 / 6
ಹೀಗಾಗಿ ಐಪಿಎಲ್ ಆಡಳಿತ ಮಂಡಳಿ 3 ಆಟಗಾರರನ್ನು ಎರಡು ಹೊಸ ತಂಡಗಳಿಗೆ ಡ್ರಾಫ್ಟ್ ಮಾಡಲು ಮತ್ತು ಮೊದಲ ಬಾರಿಗೆ ಮೆಗಾ ಹರಾಜು ಆಯೋಜಿಸಲು ಗಡುವನ್ನು ವಿಸ್ತರಿಸುತ್ತಾ ಬರುತ್ತಿದೆ. ಕ್ರಿಕೆಟ್ ಡಾಟ್ ಕಾಮ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಐಪಿಎಲ್ ಆಡಳಿತ ಮಂಡಳಿಯು ಈಗಾಗಲೇ ಎಲ್ಲಾ ತಂಡಗಳಿಗೆ ಈ ಬಗ್ಗೆ ಮಾಹಿತಿ ನೀಡಿದೆ. ಆದರೆ ಸಿವಿಸಿ ಸ್ಪೋರ್ಟ್ಸ್ ಮಾಲೀಕತ್ವದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಮಂಡಳಿಯಿಂದ ನಿರ್ಧಾರ ತೆಗೆದುಕೊಳ್ಳಲು ವಿಳಂಬವಾಗಿದೆ.
5 / 6
ಅಲ್ಲದೆ ಐಪಿಎಲ್ನ ಹೊಸ ತಂಡಗಳ ಪೈಕಿ ಅಹಮದಾಬಾದ್ ತಂಡವನ್ನು ಖರೀದಿಸಿದ ಲಕ್ಸೆಂಬರ್ಗ್ ಮೂಲಕ ಸಿವಿಸಿ ಕ್ಯಾಪಿಟಲ್ಸ್ ಸಂಸ್ಥೆ, ಬೆಟ್ಟಿಂಗ್ ಕಂಪನಿಗಳ ಜೊತೆ ಹೂಡಿಕೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಈ ಬಗ್ಗೆ ತನಿಖೆಗೆ ಸ್ವತಂತ್ರ ಸಮಿತಿಯನ್ನು ರಚಿಸಿದ್ದು, ಸಮಿತಿಯು ಇನ್ನಷ್ಟೇ ಈ ಬಗ್ಗೆ ವರದಿ ಸಲ್ಲಿಸಬೇಕಿದೆ. ಹೀಗಾಗಿ ಹರಾಜು ತಡವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ ಎನ್ನಲಾಗಿದೆ.
6 / 6
IPL 2022 Mega Auction
Published On - 9:28 am, Tue, 21 December 21