IPL 2022: ಐಪಿಎಲ್ನ ಬಿಗ್ಗೆಸ್ಟ್ ಸಿಕ್ಸ್ ಸಿಡಿಸಿದ ಲಿಯಾಮ್ ಲಿವಿಂಗ್ಸ್ಟೋನ್
TV9 Web | Updated By: ಝಾಹಿರ್ ಯೂಸುಫ್
Updated on:
Apr 04, 2022 | 3:04 PM
Liam Livingstone: ಮೊದಲ ಎರಡು ಪಂದ್ಯಗಳಲ್ಲಿ ಅಬ್ಬರಿಸಿದರೂ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಿರಲಿಲ್ಲ. ಆದರೆ ಸಿಎಸ್ಕೆ ವಿರುದ್ದ 5 ಭರ್ಜರಿ ಸಿಕ್ಸರ್ನೊಂದಿಗೆ 60 ರನ್ ಬಾರಿಸಿ ಲಿಯಾಮ್ ಲಿವಿಂಗ್ಸ್ಟೋನ್ ಅಬ್ಬರಿಸಿದ್ದಾರೆ.
1 / 4
ಐಪಿಎಲ್ ಸೀಸನ್ 15 ಮೂಲಕ ಪಂಜಾಬ್ ಕಿಂಗ್ಸ್ನ ಸ್ಪೋಟಕ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ ಚೊಚ್ಚಲ ಅರ್ಧಶತಕ ಬಾರಿಸಿದರು. ವಿಶೇಷ ಎಂದರೆ ಈ ಸ್ಪೋಟಕ ಅರ್ಧಶತಕದಲ್ಲಿ ಸಿಕ್ಸ್ಗಳ ಸುರಿಮಳೆಯಾಗಿತ್ತು. 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಲಿವಿಂಗ್ಸ್ಟೋನ್ ಕೇವಲ 32 ಎಸೆತಗಳಲ್ಲಿ 60 ರನ್ ಚಚ್ಚಿದ್ದರು.
2 / 4
ಅದರಲ್ಲೂ ಯುವ ವೇಗಿ ಮುಖೇಶ್ ಚೌಧರಿ ಓವರ್‌ನಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿಗಳೊಂದಿಗೆ 26 ರನ್ ಬಾರಿಸಿದ್ದರು. ಈ ವೇಳೆ ಡೀಪ್ ಮಿಡ್ ವಿಕೆಟ್ನತ್ತ ಸಿಡಿಸಿದ ಸಿಕ್ಸ್ ಎಲ್ಲರ ಆಕರ್ಷಣೆಗೆ ಕಾರಣವಾಗಿತ್ತು. ಭರ್ಜರಿ ಹೊಡೆತಕ್ಕೆ ಆಕಾಶದತ್ತ ಚಿಮ್ಮಿದ ಚೆಂಡು ಗ್ಯಾಲರಿಯಲ್ಲಿ ಹೋಗಿ ಬಿದ್ದಿತ್ತು.
3 / 4
ಇದರೊಂದಿಗೆ ಈ ಬಾರಿಯ ಐಪಿಎಲ್ನಲ್ಲಿ ಅತ್ಯಂತ ದೂರ ಸಿಕ್ಸ್ ಸಿಡಿಸಿದ ದಾಖಲೆ ಲಿಯಾಮ್ ಲಿವಿಂಗ್ಸ್ಟೋನ್ ಪಾಲಾಗಿದೆ. ಮುಖೇಶ್ ಚೌಧರಿ ಎಸೆತಕ್ಕೆ ಲಿವಿಂಗ್ಸ್ಟೋನ್ ಸಿಡಿಸಿದ ಅಮೋಘ ಸಿಕ್ಸರ್ 108 ಮೀ ದೂರವನ್ನು ಕ್ರಮಿಸಿದೆ. ಇದು ಈ ಬಾರಿಯ ಐಪಿಎಲ್ನಲ್ಲಿ ಮೂಡಿಬಂದ ಅತೀ ದೂರದ ಸಿಕ್ಸ್.
4 / 4
ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ಬರೋಬ್ಬರಿ 11.5 ಕೋಟಿ ನೀಡಿ ವಿಶ್ವ ಕ್ರಿಕೆಟ್‌ನ ಅತ್ಯಂತ ಜನಪ್ರಿಯ ಪವರ್-ಹಿಟ್ಟಿಂಗ್ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ಖರೀದಿಸಿತು. ಮೊದಲ ಎರಡು ಪಂದ್ಯಗಳಲ್ಲಿ ಅಬ್ಬರಿಸಿದರೂ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಿರಲಿಲ್ಲ. ಆದರೆ ಸಿಎಸ್ಕೆ ವಿರುದ್ದ 5 ಭರ್ಜರಿ ಸಿಕ್ಸರ್ನೊಂದಿಗೆ 60 ರನ್ ಬಾರಿಸಿ ಲಿಯಾಮ್ ಲಿವಿಂಗ್ಸ್ಟೋನ್ ಅಬ್ಬರಿಸಿದ್ದಾರೆ.