
ಐಪಿಎಲ್ ಸೀಸನ್ 15 ಮೆಗಾ ಹರಾಜಿನ ಮೊದಲ ದಿನದಲ್ಲಿ ಆರ್ಸಿಬಿ ತಂಡವು ಒಟ್ಟು 8 ಆಟಗಾರರನ್ನು ಖರೀದಿಸಿದೆ. ಮಾರ್ಕ್ಯೂ ಲೀಸ್ಟ್ನಲ್ಲಿ ಸ್ಟಾರ್ ಆಟಗಾರ ಫಾಫ್ ಡುಪ್ಲೆಸಿಸ್ ಅವರನ್ನು ಖರೀದಿಸುವ ಮೂಲಕ ಅಭಿಯಾನ ಆರಂಭಿಸಿದ ಆರ್ಸಿಬಿ ಆ ಬಳಿಕ ಹರ್ಷಲ್ ಪಟೇಲ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇದಾದ ಬಳಿಕ ಶ್ರೀಲಂಕಾದ ವನಿಂದು ಹಸರಂಗಗೆ ದಾಖಲೆ ಮೊತ್ತ ನೀಡುವ ಮೂಲಕ ಅಚ್ಚರಿ ಮೂಡಿಸಿತು.

ಇದೀಗ ಹೊಸ ಆಯ್ಕೆ ಹಾಗೂ ರಿಟೈನ್ ಆಟಗಾರರು ಒಳಗೊಂಡಂತೆ ಆರ್ಸಿಬಿ ತಂಡದಲ್ಲಿ ಒಟ್ಟು 11 ಆಟಗಾರಿದ್ದಾರೆ. ಹಾಗಿದ್ರೆ ಐಪಿಎಲ್ ಸೀಸನ್ 15 ಗಾಗಿ ಮೊದಲ ದಿನದ ಹರಾಜಿನ ಮೂಲಕ ಆರ್ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿರುವ ಆಟಗಾರರು ಯಾರೆಲ್ಲಾ ನೋಡೋಣ.

ಫಾಫ್ ಡು ಪ್ಲೆಸಿಸ್ - 7 ಕೋಟಿ ರೂ

ಹರ್ಷಲ್ ಪಟೇಲ್ - 10.75 ಕೋಟಿ ರೂ.

ವನಿಂದು ಹಸರಂಗ - 10.75 ಕೋಟಿ ರೂ.

ದಿನೇಶ್ ಕಾರ್ತಿಕ್ - 5.50 ಕೋಟಿ ರೂ.

ಜೋಶ್ ಹ್ಯಾಝಲ್ವುಡ್- 7.75 ಕೋಟಿ ರೂ.

ಶಹಬಾಜ್ ಅಹಮದ್- 2. 40 ಕೋಟಿ ರೂ.

ಅನುಜ್ ರಾವತ್- 3.40 ಕೋಟಿ ರೂ.

ಆಕಾಶ್ ದೀಪ್- 20 ಲಕ್ಷ ರೂ.

ವಿರಾಟ್ ಕೊಹ್ಲಿ (ರಿಟೈನ್ ಆಟಗಾರ)

ಮೊಹಮ್ಮದ್ ಸಿರಾಜ್ (ರಿಟೈನ್)

ಗ್ಲೆನ್ ಮ್ಯಾಕ್ಸ್ವೆಲ್ ( ರಿಟೈನ್)