IPL 2022 Mega auction: RCB ಕಣ್ಣಿಟ್ಟಿರುವ 5 ಆರಂಭಿಕ ಆಟಗಾರರು ಇವರೇ
TV9 Web | Updated By: ಝಾಹಿರ್ ಯೂಸುಫ್
Updated on:
Feb 10, 2022 | 4:05 PM
IPL 2022 RCB Target Players: ಮೆಗಾ ಹರಾಜಿನ ಮೂಲಕ ಆರ್ಸಿಬಿ ತಂಡವು ಆರಂಭಿಕ ಹಾಗೂ ಬೌಲರುಗಳ ಖರೀದಿಗೆ ಹೆಚ್ಚಿನ ಒತ್ತು ನೀಡಲಿದೆ. ಏಕೆಂದರೆ ತಂಡದ ಮಧ್ಯಮ ಕ್ರಮಾಂಕದಲ್ಲಿ ಬಲಿಷ್ಠರಾಗಿ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ವಿರಾಟ್ ಕೊಹ್ಲಿ ಇದ್ದಾರೆ. ಅದರಂತೆ ಆರ್ಸಿಬಿ ಹಿಟ್ ಲೀಸ್ಟ್ನಲ್ಲಿರುವ ಟಾಸ್ ಓಪನರ್ಸ್ ಯಾರೆಲ್ಲಾ ಎಂದು ನೋಡುವುದಾದರೆ...
1 / 7
ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿಗಾಗಿ ಆರ್ಸಿಬಿ ತಂಡವು ಭರ್ಜರಿ ಸಿದ್ಧತೆಯಲ್ಲಿದೆ. ಈ ಬಾರಿ ಆರ್ಸಿಬಿ ತಂಡವು ಕೇವಲ ಮೂವರು ಆಟಗಾರರನ್ನು ಮಾತ್ರ ರಿಟೈನ್ ಮಾಡಿಕೊಂಡಿತು. ಅದರಂತೆ ತಂಡದಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಇದ್ದಾರೆ.
2 / 7
ಇತ್ತ ಮೆಗಾ ಹರಾಜಿನ ಮೂಲಕ ಆರ್ಸಿಬಿ ತಂಡವು ಆರಂಭಿಕ ಹಾಗೂ ಬೌಲರುಗಳ ಖರೀದಿಗೆ ಹೆಚ್ಚಿನ ಒತ್ತು ನೀಡಲಿದೆ. ಏಕೆಂದರೆ ತಂಡದ ಮಧ್ಯಮ ಕ್ರಮಾಂಕದಲ್ಲಿ ಬಲಿಷ್ಠರಾಗಿ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ವಿರಾಟ್ ಕೊಹ್ಲಿ ಇದ್ದಾರೆ. ಅದರಂತೆ ಆರ್ಸಿಬಿ ಹಿಟ್ ಲೀಸ್ಟ್ನಲ್ಲಿರುವ ಟಾಸ್ ಓಪನರ್ಸ್ ಯಾರೆಲ್ಲಾ ಎಂದು ನೋಡುವುದಾದರೆ...
3 / 7
ಡೇವಿಡ್ ವಾರ್ನರ್: ಕಳೆದ ಸೀಸನ್ನಲ್ಲಿ ಎಸ್ಆರ್ಹೆಚ್ ಪರ ಆಡಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಐಪಿಎಲ್ ಮೆಗಾ ಹರಾಜಿನಲ್ಲಿದ್ದಾರೆ. ಓಪನರ್ ಆಗಿ ಅತ್ಯುತ್ತಮ ಪ್ರದರ್ಶನ ನೀಡಿರುವ ವಾರ್ನರ್ ಅವರ ಖರೀದಿಗೆ ಬಹುತೇಕ ಫ್ರಾಂಚೈಸಿಗಳು ಮುಂದಾಗಲಿದೆ. ಅದರಲ್ಲೂ ಆರ್ಸಿಬಿ ವಾರ್ನರ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುವುದಂತು ಪಕ್ಕಾ ಎಂದೇ ಹೇಳಬಹುದು.
4 / 7
ದೇವದತ್ ಪಡಿಕ್ಕಲ್: ಕಳೆದ ಸೀಸನ್ನಲ್ಲಿ ಆರ್ಸಿಬಿ ತಂಡದ ಆರಂಭಿಕನಾಗಿದ್ದ ದೇವದತ್ ಪಡಿಕ್ಕಲ್ ಕೂಡ ಈ ಬಾರಿ ಹರಾಜಿನಲ್ಲಿದ್ದಾರೆ. ಆರ್ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡಿರುವ ಕಾರಣ ಮತ್ತೊಮ್ಮೆ ಪಡಿಕ್ಕಲ್ ಅವರ ಖರೀದಿಗೂ ಆರ್ಸಿಬಿ ಫ್ರಾಂಚೈಸಿ ಮುಂದಾಗಲಿದೆ.
5 / 7
ಎವಿನ್ ಲೂಯಿಸ್: ವೆಸ್ಟ್ ಇಂಡೀಸ್ನ ಸ್ಪೋಟಕ ಬ್ಯಾಟ್ಸ್ಮನ್ ಎವಿನ್ ಲೂಯಿಸ್ ಕಳೆದ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬಿರುಸಿನ ಆರಂಭ ಒದಗಿಸಿದ್ದರು. ಈ ಬಾರಿ ಕೂಡ ಮೆಗಾ ಹರಾಜಿನಲ್ಲಿ ಹಾಟ್ ಫೇವರೇಟ್ ಆಗಿರುವ ಎಡಗೈ ದಾಂಡಿಗ ಲೂಯಿಸ್ ಖರೀದಿಗೆ ಆರ್ಸಿಬಿ ಮುಂದಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.
6 / 7
ಶಿಖರ್ ಧವನ್: ಟೀಮ್ ಇಂಡಿಯಾದ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಕಳೆದ ಸೀಸನ್ಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದ್ದರು. ಹೀಗಾಗಿ ಈ ಬಾರಿ ಧವನ್ ಅವರ ಖರೀದಿಗೆ ಬಹುತೇಕ ಫ್ರಾಂಚೈಸಿಗಳು ಒಲವು ತೋರಲಿದೆ. ಈ ಪೈಪೋಟಿಯಲ್ಲಿ ಆರ್ಸಿಬಿ ಕೂಡ ಇರಲಿದೆ.
7 / 7
ಜೇಸನ್ ರಾಯ್: ಇಂಗ್ಲೆಂಡ್ ತಂಡದ ಸ್ಪೋಟಕ ಆರಂಭಿಕ ಆಟಗಾರ ಜೇಸನ್ ರಾಯ್ ಕಳೆದ ಸೀಸನ್ನಲ್ಲಿ ಎಸ್ಆರ್ಹೆಚ್ ಪರ ಆಡಿದ್ದರು. ಇದೀಗ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಆಡುತ್ತಿರುವ ರಾಯ್ ಸ್ಪೋಟಕ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಹೀಗಾಗಿ ಅದ್ಭುತ ಫಾರ್ಮ್ನಲ್ಲಿರುವ ಜೇಸನ್ ರಾಯ್ ಕೂಡ ಆರ್ಸಿಬಿ ಹಿಟ್ ಲೀಸ್ಟ್ನಲ್ಲಿ ಸ್ಥಾನ ಪಡೆದಿದ್ದಾರೆ.