IPL 2022: ಡೆತ್ ಓವರ್‌ಗಳಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಅಪಾಯಕಾರಿ ಬ್ಯಾಟರ್ಗಳು ಇವರೇ..!
IPL 2022: ದಿನೇಶ್ ಕಾರ್ತಿಕ್‌ಗೆ ಈ ಸೀಸನ್ ಅದ್ಭುತವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಡೆತ್ ಓವರ್‌ಗಳಲ್ಲಿ ಅವರ 18 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ದಿನೇಶ್ ಕಾರ್ತಿಕ್ ಈ ಋತುವಿನಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ 21 ಸಿಕ್ಸರ್ ಬಾರಿಸಿದ್ದಾರೆ.
1 / 5
ಡೆತ್ ಓವರ್ ಎಂದರೆ 16 ರಿಂದ 20 ಓವರ್ಗಳು ಟಿ20 ಕ್ರಿಕೆಟ್ನಲ್ಲಿ ಬಹಳ ಮುಖ್ಯ. ಈ ಓವರ್‌ಗಳಲ್ಲಿ ಆಟಗಾರರಿಗೆ ಆಟದ ದಿಕ್ಕನ್ನೆ ಬದಲಿಸುವ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ಬ್ಯಾಟ್ ಅಬ್ಬರಿಸಿದರೆ, ಕೆಲವೊಮ್ಮೆ ಚೆಂಡು ಮೇಲುಗೈ ಸಾಧಿಸುತ್ತದೆ. ಆದರೆ, ನಾವು ಇಲ್ಲಿ ಐಪಿಎಲ್ 2022 ಬ್ಯಾಟ್ಸ್‌ಮನ್‌ಗಳ ಬಗ್ಗೆ ಮಾತನಾಡುವುದಾದರೆ, ಡೆತ್ ಓವರ್‌ಗಳಲ್ಲಿ ಬೌಲರ್ಗಳು ಪ್ರಾಬಲ್ಯ ಸಾಧಿಸಲು ಅವರು ಬಿಡುವುದಿಲ್ಲ. ಐಪಿಎಲ್ 15ನೇ ಸೀಸನ್‌ನ ಡೆತ್ ಓವರ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರು ಯಾರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
2 / 5
ಶಿಮ್ರಾನ್ ಹೆಟ್ಮೆಯರ್ - ಐಪಿಎಲ್ 2022 ರಲ್ಲಿ ಇದುವರೆಗೆ 11 ಪಂದ್ಯಗಳಲ್ಲಿ 21 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಅವರು ಡೆತ್ ಓವರ್‌ಗಳಲ್ಲಿ 19 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುವುದೇ ಇದಕ್ಕೆ ಪ್ರಮುಖ ಕಾರಣ.
3 / 5
ದಿನೇಶ್ ಕಾರ್ತಿಕ್- IPL 2022 ದಿನೇಶ್ ಕಾರ್ತಿಕ್‌ಗೆ ಅದ್ಭುತವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಡೆತ್ ಓವರ್‌ಗಳಲ್ಲಿ ಅವರ 18 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ದಿನೇಶ್ ಕಾರ್ತಿಕ್ ಈ ಋತುವಿನಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ 21 ಸಿಕ್ಸರ್ ಬಾರಿಸಿದ್ದಾರೆ. ಅದರಲ್ಲಿ ಅವರು ಡೆತ್ ಓವರ್‌ಗಳಲ್ಲಿ 18 ಸಿಕ್ಸರ್‌ಗಳನ್ನು ಬಾರಿಸಿರುವುದು ತಂಡಕ್ಕೆ ಬಹುಮುಖ್ಯ ಕೊಡುಗೆಯಾಗಿದೆ.
4 / 5
ರಾಹುಲ್ ತೆವಾಟಿಯಾ - ಗುಜರಾತ್ ಟೈಟಾನ್ಸ್‌ನ ರಾಹುಲ್ ತೆವಾಟಿಯಾ ಅವರು ಐಪಿಎಲ್ 2022 ರಲ್ಲಿ ತಮ್ಮ ತಂಡದ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಜೊತೆಗೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ರಾಹುಲ್ ತೆವಾಟಿಯಾ ಈ ಋತುವಿನಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ ಒಟ್ಟು 9 ಸಿಕ್ಸರ್ ಬಾರಿಸಿದ್ದಾರೆ. ಅದರಲ್ಲಿ ಅವರು ಡೆತ್ ಓವರ್‌ಗಳಲ್ಲಿ 8 ಸಿಕ್ಸರ್ ಬಾರಿಸಿರುವುದು ವಿಶೇಷ.
5 / 5
ಎಂಎಸ್ ಧೋನಿ - ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ 12 ಪಂದ್ಯಗಳಲ್ಲಿ 9 ಸಿಕ್ಸರ್ ಬಾರಿಸಿದ್ದಾರೆ. ಆದಾಗ್ಯೂ, ಅವರು ಈ 9 ಸಿಕ್ಸರ್‌ಗಳಲ್ಲಿ ಡೆತ್ ಓವರ್‌ಗಳಲ್ಲಿ 7 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಋತುವಿನಲ್ಲಿ ಚೆನ್ನೈ ಪ್ರಶಸ್ತಿ ರೇಸ್‌ನಿಂದ ನಿರ್ಗಮಿಸಿದರೂ, ಧೋನಿ ಬ್ಯಾಟಿಂಗ್ ಸುದ್ದಿಯಲ್ಲಿದೆ.
Published On - 3:42 pm, Sat, 14 May 22