Updated on: May 14, 2022 | 3:37 PM
ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 1 ರನ್ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ 1 ರನ್ಗಳಿಸುವುದರೊಂದಿಗೆ ಐಪಿಎಲ್ನಲ್ಲಿ 6500 ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಕಿಂಗ್ ಕೊಹ್ಲಿ ತಮ್ಮದಾಗಿಸಿಕೊಂಡರು.
ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ 20 ರನ್ ಪೂರೈಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ 10500 ರನ್ ಪೂರೈಸಿದ ದಾಖಲೆ ಬರೆದರು. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ 10500 ರನ್ ಪೂರೈಸಿದ ಭಾರತ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಕೂಡ ಕೊಹ್ಲಿ ನಿರ್ಮಿಸಿದರು.
ಇದಾಗ್ಯೂ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 14 ಎಸೆತಗಳಲ್ಲಿ ಕೇವಲ 20 ರನ್ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಪ್ರಸ್ತಕ್ತ ಸೀಸನ್ನಲ್ಲಿ ಕೆಟ್ಟ ಫಾರ್ಮ್ನಲ್ಲಿರುವ ಕೊಹ್ಲಿ 13 ಪಂದ್ಯಗಳಿಂದ ಕೇವಲ 234 ರನ್ ಕಲೆಹಾಕಿದ್ದಾರೆ. ಇದು ಕಳೆದ 12 ಸೀಸನ್ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಗಳಿಸುತ್ತಿರುವ ಕಡಿಮೆ ರನ್ ಎಂಬುದು ವಿಶೇಷ.
ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಉತ್ತಮ ಆರಂಭ ಪಡೆದಿದ್ದ ವಿರಾಟ್ ಕೊಹ್ಲಿ ದೊಡ್ಡ ಮೊತ್ತ ಪೇರಿಸುವ ಸೂಚನೆ ನೀಡಿದ್ದರು. ಬಿರುಸಿನ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದಂತೆ ರಬಾಡ ಎಸೆತದಲ್ಲಿ ಚೆಂಡು ಗ್ಲೌಸ್ಗೆ ತಾಗಿ ಕ್ಯಾಚ್ ನೀಡಿ ಔಟಾದರು. ಇನ್ನು ಈ ಪಂದ್ಯದಲ್ಲಿ ಆರ್ಸಿಬಿ ತಂಡವು 54 ರನ್ಗಳಿಂದ ಸೋಲನುಭವಿಸಿದೆ.
ಮುಂದಿನ ಪಂದ್ಯದಲ್ಲಿ ಆರ್ಸಿಬಿ ಗುಜರಾತ್ ಟೈಟನ್ಸ್ ವಿರುದ್ದ ಆಡಲಿದ್ದು, ಈ ಪಂದ್ಯದಲ್ಲಿ ಅತ್ಯುತ್ತಮ ನೆಟ್ ರನ್ ರೇಟ್ ಮೂಲಕ ಗೆದ್ದರೆ ಪ್ಲೇಆಫ್ಗೇರುವ ಅವಕಾಶ ಇರಲಿದೆ. ಹೀಗಾಗಿ ಕೊನೆಯ ಪಂದ್ಯದ ಫಲಿತಾಂಶ ಆರ್ಸಿಬಿ ತಂಡದ ಪ್ಲೇಆಫ್ ಎಂಟ್ರಿ ನಿರ್ಧರಿಸಲಿದೆ.
Published On - 3:37 pm, Sat, 14 May 22