
ಐಪಿಎಲ್ ಸೀಸನ್ 16 ಮಿನಿ ಹರಾಜಿನ ಆಲ್ರೌಂಡರ್ಸ್ ಬಿಡ್ಡಿಂಗ್ನಲ್ಲಿ ಇಂಗ್ಲೆಂಡ್ನ ಯುವ ಆಟಗಾರ ಸ್ಯಾಮ್ ಕರನ್ ಅವರನ್ನು ಬರೋಬ್ಬರಿ 15 ಕೋಟಿ ನೀಡಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿಸಿದೆ.

ಐಪಿಎಲ್ ಸೀಸನ್ 14 ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಸ್ಯಾಮ್ ಕರನ್ ಅವರು ಕಳೆದ ಸೀಸನ್ ಐಪಿಎಲ್ ಆಡಿರಲಿಲ್ಲ. ಇದಾಗ್ಯೂ ಈ ಬಾರಿ ಟಿ20 ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಅದರಂತೆ ಐಪಿಎಲ್ ಹರಾಜಿನಲ್ಲಿ 2 ಕೋಟಿ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸ್ಯಾಮ್ ಕರನ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್, ಎಸ್ಆರ್ಹೆಚ್, ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಭರ್ಜರಿ ಪೈಪೋಟಿ ಕಂಡು ಬಂತು.

ಆದರೆ ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರೂ. ನೀಡುವ ಮೂಲಕ ಸ್ಯಾಮ್ ಕರನ್ ಅವರನ್ನು ತಮ್ಮದಾಗಿಸಿಕೊಂಡಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ದಾಖಲೆ ಸ್ಯಾಮ್ ಕರನ್ ಪಾಲಾಗಿದೆ.

2021 ರ ಹರಾಜಿನಲ್ಲಿ ಕ್ರಿಸ್ ಮೋರಿಸ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡವು 16.25 ಕೋಟಿಗೆ ಖರೀದಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 18.50 ಕೋಟಿಗೆ ಹರಾಜಾಗುವ ಮೂಲಕ ಸ್ಯಾಮ್ ಕರನ್ ಐಪಿಎಲ್ನ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.
Published On - 3:37 pm, Fri, 23 December 22