IPL 2023: ನಮ್ಮದು ಉತ್ತಮ ತಂಡವಾಗಿರಲಿಲ್ಲ: ಫಾಫ್ ಡುಪ್ಲೆಸಿಸ್ ಮನದಾಳದ ಮಾತು

| Updated By: ಝಾಹಿರ್ ಯೂಸುಫ್

Updated on: May 22, 2023 | 11:07 PM

IPL 2023 Kannada: RCB ತಂಡದ ಒಟ್ಟಾರೆ ಪ್ರದರ್ಶನ ನೋಡುವುದಾದರೆ, ಈ ಬಾರಿ ಆರ್​ಸಿಬಿ 14 ಪಂದ್ಯಗಳಲ್ಲಿ ಒಟ್ಟು​ 2502 ರನ್​ಗಳನ್ನು ಕಲೆಹಾಕಿದೆ. ಇದರಲ್ಲಿ ಫಾಫ್ ಡುಪ್ಲೆಸ್ (730), ವಿರಾಟ್ ಕೊಹ್ಲಿ (639) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಕೊಡುಗೆ ಬರೋಬ್ಬರಿ 1,769 ರನ್​ಗಳು.

1 / 8
IPL 2023: 14 ಪಂದ್ಯಗಳು...7 ಸೋಲು...7 ಜಯದೊಂದಿಗೆ ಆರ್​ಸಿಬಿ ತಂಡವು 16ನೇ ಆವೃತ್ತಿಯ ಐಪಿಎಲ್​ ಅಭಿಯಾನವನ್ನು ಅಂತ್ಯಗೊಳಿಸಿದೆ. ಈ ಸೋಲಿನ ಬಗ್ಗೆ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್, ನಮ್ಮ ತಂಡವು ಉತ್ತಮ ತಂಡವಾಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

2 / 8
ಈ ಬಾರಿಯ ಐಪಿಎಲ್​ನಲ್ಲಿ ಕಣದಲ್ಲಿದ್ದ ಅತ್ಯುತ್ತಮ ತಂಡಗಳನ್ನು ನೋಡಿದರೆ ನಮ್ಮ ತಂಡವು ಉತ್ತಮವಾಗಿರಲಿಲ್ಲ. ಹೀಗಾಗಿಯೇ ಪ್ಲೇಆಫ್ಸ್​ ಹಂತಕ್ಕೇರುವ ಅರ್ಹತೆಯನ್ನು ಕೂಡ ಹೊಂದಿರಲಿಲ್ಲ ಎಂದು ಡುಪ್ಲೆಸಿಸ್ ಹೇಳಿದ್ದಾರೆ.

3 / 8
ನಮ್ಮ ತಂಡದ ಹೋರಾಟವು ಲೀಗ್​ ಹಂತದಲ್ಲಿ ಕೊನೆಗೊಂಡಿರುವುದು ನಿಜವಾಗಿಯೂ ನಿರಾಸೆ ಮೂಡಿಸಿದೆ. ಆದರೆ ಒಟ್ಟಾರೆ ಪ್ರದರ್ಶನವನ್ನು ಅವಲೋಕಿಸಿದರೆ, ನಮ್ಮ ತಂಡವು ಉತ್ತಮವಾಗಿರಲಿಲ್ಲ ಎಂಬುದೇ ಸತ್ಯ.

4 / 8
ಇದಾಗ್ಯೂ ಈ ಬಾರಿ ಕೆಲ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವುದು ನಮ್ಮ ಅದೃಷ್ಟ ಎನ್ನಬೇಕು ಅಷ್ಟೇ. ಏಕೆಂದರೆ ಇಲ್ಲಿ ಒಟ್ಟಾರೆ ಪ್ರದರ್ಶನವನ್ನು ಗಮನಿಸಿದರೆ ಯಾವ ಹಂತದಲ್ಲೂ ನಾವು ಪ್ಲೇಆಫ್ಸ್ ಪ್ರವೇಶಿಸುವ ಅರ್ಹತೆಯನ್ನು ಹೊಂದಿರಲಿಲ್ಲ ಎಂದು ಆರ್​ಸಿಬಿ ನಾಯಕ ತಮ್ಮ ಮನದ ಮಾತುಗಳನ್ನಾಡಿದ್ದಾರೆ.

5 / 8
ಆದರೂ ಈಗಲೂ ಕೊನೆಯ ಪಂದ್ಯದಲ್ಲಿನ ಸೋಲು ಕಾಡುತ್ತಿದೆ ಎಂದಿರುವ ಡುಪ್ಲೆಸಿಸ್, ಗೆಲುವಿಗಾಗಿ ನಾವು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೆವು. ಆದರೆ ಅಂತಿಮ ಹಂತದಲ್ಲಿ ಎಡವಿದ್ದೇವೆ. ಇದಾಗ್ಯೂ ಈ ಬಾರಿಯ ಟೂರ್ನಿಯ ಸಕಾರಾತ್ಮಕ ವಿಷಯಗಳೆಂದರೆ, ನನ್ನ, ವಿರಾಟ್ ಕೊಹ್ಲಿಯ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಉತ್ತಮ ಜೊತೆಯಾಟಗಳು. ಇನ್ನು ಬೌಲಿಂಗ್​ನಲ್ಲಿ ಮೊಹಮ್ಮದ್ ಸಿರಾಜ್ ಕೂಡ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದಾರೆ.

6 / 8
ಆದರೆ ಕೆಲವು ವಿಭಾಗಗಳಲ್ಲಿ ನಾವು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದೇವೆ. ಈ ಎಲ್ಲಾ ಕಾರಣಗಳಿಂದಾಗಿ ನಾವು ಪ್ಲೇಆಫ್ಸ್ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ಫಾಫ್ ಡುಪ್ಲೆಸಿಸ್ ಬೇಸರ ವ್ಯಕ್ತಪಡಿಸಿದ್ದಾರೆ.

7 / 8
ಇನ್ನು ಆರ್​ಸಿಬಿ ತಂಡದ ಒಟ್ಟಾರೆ ಪ್ರದರ್ಶನ ನೋಡುವುದಾದರೆ, ಈ ಬಾರಿ ಆರ್​ಸಿಬಿ 14 ಪಂದ್ಯಗಳಲ್ಲಿ ಒಟ್ಟು​ 2502 ರನ್​ಗಳನ್ನು ಕಲೆಹಾಕಿದೆ. ಇದರಲ್ಲಿ ಫಾಫ್ ಡುಪ್ಲೆಸ್ (730), ವಿರಾಟ್ ಕೊಹ್ಲಿ (639) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಕೊಡುಗೆ ಬರೋಬ್ಬರಿ 1,769 ರನ್​ಗಳು. ಅಂದರೆ ಉಳಿದ ಎಲ್ಲಾ ಬ್ಯಾಟರ್​ಗಳು ಸೇರಿ ಪೇರಿಸಿದ್ದು ಕೇವಲ 733 ರನ್​ಗಳು ಮಾತ್ರ.

8 / 8
ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ (19) ಅವರನ್ನು ಹೊರತುಪಡಿಸಿದರೆ ಯಾವುದೇ ಬೌಲರ್ 14 ಕ್ಕಿಂತ ಹೆಚ್ಚಿನ ವಿಕೆಟ್ ಪಡೆದಿಲ್ಲ. ಇದೇ ಕಾರಣದಿಂದಾಗಿ ಫಾಫ್ ಡುಪ್ಲೆಸಿಸ್ ಈ ಬಾರಿ ಆರ್​ಸಿಬಿ ಪ್ಲೇಆಫ್ಸ್​ಗೆ ಅರ್ಹತೆಯುವಷ್ಟು ಉತ್ತಮ ತಂಡವಾಗಿರಲಿಲ್ಲ ಎಂದಿದ್ದಾರೆ.