IPL 2023 Final CSK vs GT: ಮಳೆ ಬಂದರೆ ಸೂಪರ್ ಓವರ್​ ಮೂಲಕ ಫಲಿತಾಂಶ ನಿರ್ಧಾರ

Edited By:

Updated on: May 29, 2023 | 3:41 PM

IPL 2023 Final CSK vs GT: ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್​ಗಳನ್ನು ಆಡಿರಬೇಕು ಎಂಬ ನಿಯಮ ರೂಪಿಸಲಾಗಿದೆ.

1 / 10
IPL 2023 Final CSK vs GT: ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಐಪಿಎಲ್​​ನ ಫೈನಲ್ ಪಂದ್ಯವು ಇಂದು (ಮೆ 29) ಜರುಗಲಿದೆ. ಮಳೆಯ ಕಾರಣ ಮೀಸಲು ದಿನಕ್ಕೆ ಮುಂದೂಡಲ್ಪಟ್ಟ ಪಂದ್ಯಕ್ಕೆ ಮತ್ತೆ ವರುಣನ ಭೀತಿ ಎದುರಾಗಿದೆ.

IPL 2023 Final CSK vs GT: ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಐಪಿಎಲ್​​ನ ಫೈನಲ್ ಪಂದ್ಯವು ಇಂದು (ಮೆ 29) ಜರುಗಲಿದೆ. ಮಳೆಯ ಕಾರಣ ಮೀಸಲು ದಿನಕ್ಕೆ ಮುಂದೂಡಲ್ಪಟ್ಟ ಪಂದ್ಯಕ್ಕೆ ಮತ್ತೆ ವರುಣನ ಭೀತಿ ಎದುರಾಗಿದೆ.

2 / 10

ಏಕೆಂದರೆ ಹವಮಾನ ವರದಿ ಪ್ರಕಾರ ಸೋಮವಾರ ಕೂಡ ಅಹಮದಾಬಾದ್​ನ ಸುತ್ತ ಮುತ್ತ ಮೋಡ ಕವಿದ ವಾತವರಣವಿದ್ದು, ಹೀಗಾಗಿ ಮಳೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಇಂದು ಕೂಡ ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕಾಗಿ ಬಿಸಿಸಿಐ ಕೆಲ ನಿಯಮಗಳನ್ನು ರೂಪಿಸಿದೆ.

3 / 10

ಈ ನಿಯಮಗಳಲ್ಲಿ ಸೂಪರ್ ಓವರ್ ಕೂಡ ಇರುವುದು ವಿಶೇಷ. ಅಂದರೆ ನಿಗದಿತ ಸಮಯದೊಳಗೆ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ ಸೂಪರ್ ಓವರ್ ಪಂದ್ಯ ನಡೆಯುವುದು ಖಚಿತ. ಆದರೆ ಅದಕ್ಕೂ ಮುನ್ನ ಇತರೆ ಆಯ್ಕೆಗಳನ್ನು ಪರಿಶೀಲಿಸಲಿದೆ. ಈ ಆಯ್ಕೆಗಳೆಂದರೆ...

4 / 10

ಪಂದ್ಯ ಆರಂಭಕ್ಕೂ ಮುನ್ನ ಮಳೆ ಬಂದರೆ ಅಥವಾ ಆರಂಭದ ಬಳಿಕ ಮಳೆ ಬಂದು ವಿಳಂಬವಾದರೆ ಸಂಪೂರ್ಣ ಓವರ್​ಗಳ ಪಂದ್ಯಗಳನ್ನು ನಡೆಸಲಾಗುತ್ತದೆ. ಇಲ್ಲಿ ಓವರ್​ಗಳ ಕಡಿತಕ್ಕೆ ಕಟ್​ ಆಫ್ ಟೈಮ್ ರಾತ್ರಿ 9.40. ಅಂದರೆ ರಾತ್ರಿ 9.40 ರೊಳಗೆ ಶುರುವಾದರೆ ಯಾವುದೇ ಓವರ್​ ಕಡಿತ ಇರುವುದಿಲ್ಲ. 2 ತಂಡಗಳು 20 ಓವರ್​ಗಳನ್ನು ಆಡಲಿದೆ.

5 / 10

ಇನ್ನು ರಾತ್ರಿ 9.40 ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್​ಗಳನ್ನು ಕಡಿತ ಮಾಡಲಾಗುತ್ತದೆ. ಇನ್ನು ಉಭಯ ತಂಡಗಳ ಇನಿಂಗ್ಸ್​​ ನಡುವೆ ಮಳೆ ಬಂದು ನಿಂತರೆ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರದ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಇಲ್ಲಿ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್​ಗಳನ್ನು ಆಡಿರಬೇಕು ಎಂಬ ನಿಯಮ ರೂಪಿಸಲಾಗಿದೆ.

6 / 10

ಇನ್ನು 7.30 ರಿಂದ 11.56 ರೊಳಗೆ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್​ಗಳ ಪಂದ್ಯವನ್ನು ಆಯೋಜಿಸಲು ಮುಂದಾಗಲಿದೆ. ಈ 5 ಓವರ್​ಗಳ ಪಂದ್ಯವು ರಾತ್ರಿ 12.06 ರಿಂದ ಶುರುವಾಗಲಿದೆ.

7 / 10

ಒಂದು ವೇಳೆ ರಾತ್ರಿ 12.06 ರಿಂದ 12.50 ರೊಳಗೆ 5 ಓವರ್​ಗಳ ಪಂದ್ಯ ಆಯೋಜಿಸಲು ಕೂಡ ಸಾಧ್ಯವಾಗದಿದ್ದರೆ ಸೂಪರ್ ಓವರ್ ಮೊರೆ ಹೋಗಲಾಗುತ್ತದೆ. ಇಲ್ಲಿ ಸೂಪರ್ ಓವರ್ ನಡೆಸಲು ಪಿಚ್ ಸಿದ್ಧವಿದೆಯಾ ಎಂಬುದನ್ನು ಮುಖ್ಯವಾಗಿ ಪರಿಗಣನೆ ತೆಗೆದುಕೊಳ್ಳಲಾಗುತ್ತದೆ.

8 / 10

ಈ ಬಗ್ಗೆ ಉಭಯ ತಂಡಗಳ ನಾಯಕರುಗಳೊಂದಿಗೆ ಚರ್ಚಿಸಿದ ಬಳಿಕ ಅಂಪೈರ್ ಸೂಪರ್ ಓವರ್​ ನಡೆಸಲು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ಸೂಪರ್ ಓವರ್ ನಡೆಸಲು ಕೂಡ ಸಾಧ್ಯವಾಗದಿದ್ದರೆ ಗುಜರಾತ್ ಟೈಟಾನ್ಸ್ ತಂಡ ಚಾಂಪಿಯನ್ ಆಗಲಿದೆ.

9 / 10

ಏಕೆಂದರೆ ಮೀಸಲು ದಿನದಂದು ಕನಿಷ್ಠ ಸೂಪರ್ ಓವರ್ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಲೀಗ್ ಹಂತದ 70 ಪಂದ್ಯಗಳ ಬಳಿಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.

10 / 10

ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ಅಗ್ರಸ್ಥಾನ ಅಲಂಕರಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ದ್ವಿತೀಯ ಸ್ಥಾನ ಅಲಂಕರಿಸಿತ್ತು. ಹೀಗಾಗಿ ಇಂದು ಕೂಡ ಪಂದ್ಯ ನಡೆದಿದ್ದರೆ ಹಾರ್ದಿಕ್ ಪಾಂಡ್ಯ ಪಡೆಯನ್ನು ಚಾಂಪಿಯನ್ಸ್ ಎಂದು ಪರಿಗಣಿಸಲಾಗುತ್ತದೆ.

Published On - 3:30 pm, Mon, 29 May 23

Loading...
Unable to load recommendations.
Follow Us