IPL 2023: ಮೊದಲ ಪಂದ್ಯದ ಮೊದಲ ವಿಕೆಟ್…ಹೊಸ ಮೈಲುಗಲ್ಲು ದಾಟಿದ ಮೊಹಮ್ಮದ್ ಶಮಿ
TV9 Web | Updated By: ಝಾಹಿರ್ ಯೂಸುಫ್
Updated on:
Mar 31, 2023 | 9:33 PM
IPL 2023 GT vs CSK: ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡರು. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು.
1 / 6
IPL 2023: ಐಪಿಎಲ್ನ ಮೊದಲ ಪಂದ್ಯದ ಮೊದಲ ವಿಕೆಟ್ ಕಬಳಿಸುವ ಮೂಲಕ ಗುಜರಾತ್ ಟೈಟಾನ್ಸ್ ತಂಡದ ವೇಗಿ ಮೊಹಮ್ಮದ್ ಶಮಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅಹಮದಾಬಾದ್ನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದಲ್ಲಿ ಶಮಿ ಈ ಸಾಧನೆ ಮಾಡಿದರು.
2 / 6
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ಪರ ಡೆವೊನ್ ಕಾನ್ವೆ ಹಾಗೂ ರುತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಶಮಿ ಎಸೆದ ಮೂರನೇ ಓವರ್ನ 2ನೇ ಎಸೆತವು ಕಾನ್ವೆ ಅವರನ್ನು ವಂಚಿಸಿ ವಿಕೆಟ್ ಅನ್ನು ಉರುಳಿಸಿತು.
3 / 6
ಈ ವಿಕೆಟ್ನೊಂದಿಗೆ ಮೊಹಮ್ಮದ್ ಶಮಿ ಐಪಿಎಲ್ನಲ್ಲಿ 100 ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದರು. ಅಲ್ಲದೆ ಈ ಸಾಧನೆ ಮಾಡಿದ 19ನೇ ಬೌಲರ್ ಎನಿಸಿಕೊಂಡರು. ಶಮಿ 94ನೇ ಇನಿಂಗ್ಸ್ ಮೂಲಕ ಈ ಸಾಧನೆ ಮಾಡಿದ್ದಾರೆ.
4 / 6
ಇನ್ನು ಐಪಿಎಲ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ದಾಖಲೆ ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೊ ಹೆಸರಿನಲ್ಲಿದೆ. ಐಪಿಎಲ್ನಲ್ಲಿ 158 ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡಿರುವ ಬ್ರಾವೊ ಒಟ್ಟು 183 ವಿಕೆಟ್ ಕಬಳಿಸಿ ಈ ದಾಖಲೆ ನಿರ್ಮಿಸಿದ್ದಾರೆ.
5 / 6
ಹಾಗೆಯೇ 2ನೇ ಸ್ಥಾನದಲ್ಲಿ ಮಾಜಿ ಮುಂಬೈ ಇಂಡಿಯನ್ಸ್ ವೇಗಿ ಲಸಿತ್ ಮಾಲಿಂಗ ಇದ್ದಾರೆ. 122 ಐಪಿಎಲ್ ಪಂದ್ಯಗಳನ್ನಾಡಿರುವ ಮಾಲಿಂಗ ಒಟ್ಟು 170 ವಿಕೆಟ್ ಕಬಳಿಸಿದ್ದಾರೆ.
6 / 6
ಇನ್ನು ಮೂರನೇ ಸ್ಥಾನದಲ್ಲಿ ಯುಜ್ವೇಂದ್ರ ಚಹಾಲ್ ಇದ್ದು, 130 ಪಂದ್ಯಗಳಿಂದ 166 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಚಹಾಲ್ಗೆ ಈ ಬಾರಿ ಮಾಲಿಂಗ ಹಾಗೂ ಬ್ರಾವೊ ಅವರ ದಾಖಲೆಯನ್ನು ಮುರಿಯುವ ಉತ್ತಮ ಅವಕಾಶವಿದೆ.