IPL 2023: ರೋಹಿತ್ ಪಡೆಗೆ ಬಿಗ್ ಶಾಕ್; ಮುಂಬೈ ಇಂಡಿಯನ್ಸ್ ತಂಡಕ್ಕೆ ಕೈಕೊಟ್ಟ ಇಂಗ್ಲೆಂಡ್ ವೇಗಿ..!

|

Updated on: May 09, 2023 | 3:24 PM

IPL 2023: ಆರ್​ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಮುಂಬೈ ಪಾಳಯಕ್ಕೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ವೇಗಿ ಜೋಫ್ರಾ ಆರ್ಚರ್ ಇಂಜುರಿಯಿಂದಾಗಿ ಈ ಆವೃತ್ತಿಯ ಐಪಿಎಲ್​ನಿಂದ ಹೊರಗುಳಿದಿದ್ದಾರೆ.

1 / 8
ಆರ್​ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಮುಂಬೈ ಪಾಳಯಕ್ಕೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ವೇಗಿ ಜೋಫ್ರಾ ಆರ್ಚರ್ ಇಂಜುರಿಯಿಂದಾಗಿ ಈ ಆವೃತ್ತಿಯ ಐಪಿಎಲ್​ನಿಂದ ಹೊರಗುಳಿದಿದ್ದಾರೆ.

2 / 8
ಜೋಫ್ರಾ ಆರ್ಚರ್ ಇಂಜುರಿಯಿಂದ ಬಳಲುತ್ತಿರುವುದು ಇದೇ ಮೊದಲಲ್ಲ. ಕಳೆದ ಆವೃತ್ತಿಯಲ್ಲೇ ಮುಂಬೈ ಸೇರಿಕೊಂಡಿದ್ದ ಆರ್ಚರ್ ಒಂದೇ ಒಂದು ಪಂದ್ಯವನ್ನಾಡಿರಲಿಲ್ಲ. ಆದರೂ ಫ್ರಾಂಚೈಸಿ ಅವರನ್ನು ಉಳಿಸಿಕೊಂಡಿತ್ತು.

3 / 8
ಆದರೆ ಈ ಆವೃತ್ತಿಯಲ್ಲಿ ಮುಂಬೈ ಆಡಿರುವ 10 ಪಂದ್ಯಗಳಲ್ಲಿ ಜೋಫ್ರಾ ಆರ್ಚರ್ ಕೇವಲ 5 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಈ ಐದು ಪಂದ್ಯಗಳಲ್ಲಿ ಕೇವಲ 2 ವಿಕೆಟ್ ಮಾತ್ರ ಪಡೆದಿದ್ದಾರೆ.

4 / 8
ಇದೀಗ ಐಪಿಎಲ್​​ನಿಂದ ಹೊರಬಿದ್ದಿರುವ ಆರ್ಚರ್ ಬದಲಿಯಾಗಿ ಇಂಗ್ಲೆಂಡ್‌ನ ವೇಗದ ಬೌಲರ್ ಕ್ರಿಸ್ ಜೋರ್ಡಾನ್ ಅವರನ್ನು ಮುಂಬೈ ಇಂಡಿಯನ್ಸ್‌ ತಂಡಕ್ಕೆ ಈಗಾಗಲೇ ಸೇರಿಸಿಕೊಳ್ಳಲಾಗಿದೆ. ಜೋರ್ಡಾನ್ ಮುಂಬೈ ಪಾಳಯವನ್ನು ಸೇರಿಕೊಂಡಾಗಿನಿಂದ ಆರ್ಚರ್‌ ಐಪಿಎಲ್ ತೊರೆಯುವ ಬಗ್ಗೆ ಊಹಾಪೋಹಗಳು ಕೇಳಲಾರಂಭಿಸಿದ್ದವು. ಇದೀಗ ಆ ವದಂತಿಗಳಿಗೆ ತೆರೆ ಎಳೆಯಲಾಗಿದೆ.

5 / 8
ವಾಸ್ತವವಾಗಿ ಮುಂಬೈನ ಆರಂಭಿಕ ಪಂದ್ಯಗಳಿಗೆ ಆರ್ಚರ್ ಲಭ್ಯರಾಗಿರಲಿಲ್ಲ. ಆ ವೇಳೆ ಅವರು ಚಿಕಿತ್ಸೆಗಾಗಿ ಬೆಲ್ಜಿಯಂಗೆ ಹೋಗಿದ್ದರು ಎಂದು ವರದಿಗಳು ಕೇಳಿಬಂದಿದ್ದವು. ಆದರೆ ಆರ್ಚರ್ ಆ ವರದಿಯನ್ನು ನಿರಾಕರಿಸಿದ್ದರು. ಇದೀಗ ಆರ್ಚರ್ ಐಪಿಎಲ್​​ನಿಂದ ಹೊರಬಿದ್ದಿರುವುದು ವದಂತಿಗಳು ನಿಜ ಎಂಬುದನ್ನು ಸಾಭೀತುಪಡಿಸಿವೆ.

6 / 8
ಇತರ ಮೂಲಗಳ ಪ್ರಕಾರ ಹೇಳುವುದಾದರೆ, ಜೋಫ್ರಾ ಆರ್ಚರ್ ಗಾಯದ ಮೇಲೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿರಂತರವಾಗಿ ಕಣ್ಣಿಟ್ಟಿದೆ. ಮುಂಬರುವ ಆಶಸ್‌ನಂತಹ ದೊಡ್ಡ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಆರ್ಚರ್ ಅವರನ್ನು ಐಪಿಎಲ್​​ನಿಂದ ಹಿಂದೆ ಸರಿಯುವಂತೆ ಮಾಡಿದೆ ಎಂಬ ಮಾತು ಕೇಳಿಬರುತ್ತಿದೆ. ಆಶಸ್ ಸರಣಿಗೂ ಮುನ್ನ ಆರ್ಚರ್ ಫಿಟ್ ಆಗಿರವುದು ಇಂಗ್ಲೆಂಡ್ ತಂಡಕ್ಕೆ ಬಹಳ ಮುಖ್ಯವಾಗಿದೆ. ಅದಕ್ಕಾಗಿಯೇ ಆರ್ಚರ್ ಐಪಿಎಲ್ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.

7 / 8
2022ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಜೋಫ್ರಾ ಆರ್ಚರ್ ಅವರನ್ನು ಬರೋಬ್ಬರಿ 8 ಕೋಟಿಗೆ ಖರೀದಿಸಿತು. ಆದರೆ ಗಾಯದ ಕಾರಣ ಕಳೆದ ಸೀಸನ್​​ನಲ್ಲಿ ಅವರು ಸಂಪೂರ್ಣ ಆಡಲು ಸಾಧ್ಯವಾಗಲಿಲ್ಲ. ಇದೀಗ ಈ ಐಪಿಎಲ್​​ನಲ್ಲಿ ಅವರು ಕೇವಲ 5 ಪಂದ್ಯಗಳನ್ನು ಆಡಿ ಲೀಗ್​ಯಿಂದ ಹೊರಬಿದ್ದಿದ್ದಾರೆ.

8 / 8
2016 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಕ್ರಿಸ್ ಜೋರ್ಡಾನ್, ಆರ್ಚರ್ ಸ್ಥಾನಕ್ಕೆ ಬಂದಿದ್ದು, ಇಂಗ್ಲೆಂಡ್ ಪರ 87 ಟಿ20 ಪಂದ್ಯಗಳಲ್ಲಿ 96 ವಿಕೆಟ್ ಪಡೆದಿರುವ ಜೋರ್ಡಾನ್ ಐಪಿಎಲ್​ನಲ್ಲಿ 28 ಪಂದ್ಯಗಳನ್ನು ಆಡಿದ್ದು, 27 ವಿಕೆಟ್ ಪಡೆದಿದ್ದಾರೆ.