
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ 10 ತಂಡಗಳ ಘೋಷಣೆಯಾದರೂ, ಫ್ರಾಂಚೈಸಿಗಳ ಕಣ್ಣು ಹೊಸ ಲೀಗ್ನತ್ತ ನೆಟ್ಟಿದೆ. ಏಕೆಂದರೆ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಸೌತ್ ಆಫ್ರಿಕಾ ಟಿ20 ಲೀಗ್ (SAT20) ಹಾಗೂ ಯುಎಇ ಟಿ20 ಲೀಗ್ನಲ್ಲಿ (ILT20) ಹೊಸ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಈ ಆಟಗಾರರನ್ನು ಬದಲಿಯಾಗಿ ತೆಕ್ಕೆಗೆ ತೆಗೆದುಕೊಳ್ಳಲು ಐಪಿಎಲ್ ಫ್ರಾಂಚೈಸಿಗಳು ಕೂಡ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆ. ಅಂದರೆ ಮುಂಬರುವ ಐಪಿಎಲ್ನಿಂದ ವಿದೇಶಿ ಆಟಗಾರರು ಹೊರಗುಳಿದರೆ ಸೌತ್ ಆಫ್ರಿಕಾ ಟಿ20 ಲೀಗ್ ಹಾಗೂ ಯುಎಇ ಟಿ20 ಲೀಗ್ಗಳಲ್ಲಿ ಮಿಂಚಿದ ಆಟಗಾರರಿಗೆ ಚಾನ್ಸ್ ಸಿಗುವುದು ಖಚಿತ. ಇದಾಗ್ಯೂ ಕೆಲ ಪ್ರಸ್ತುತ 10 ತಂಡಗಳಲ್ಲಿ ಕೆಲ ಟೀಮ್ನಲ್ಲಿ 7 ವಿದೇಶಿ ಆಟಗಾರರು ಮಾತ್ರ ಇದ್ದಾರೆ.

ಹೀಗಾಗಿ ಓರ್ವ ವಿದೇಶಿ ಆಟಗಾರನನ್ನು ಖರೀದಿಸುವ ಅವಕಾಶ ಕೂಡ ಆ ತಂಡಗಳಿಗಿವೆ. ಅಂದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ 8 ವಿದೇಶಿ ಆಟಗಾರರನ್ನು ಹೊಂದಬಹುದು. ಆದರೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಒಟ್ಟು 7 ವಿದೇಶಿ ಆಟಗಾರರನ್ನು ಮಾತ್ರ ಇದ್ದಾರೆ. ಹೀಗಾಗಿ ಓರ್ವ ವಿದೇಶಿ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡುವ ಅವಕಾಶ ಪಂಜಾಬ್ ಫ್ರಾಂಚೈಸಿ ಮುಂದಿದೆ. ಹಾಗಿದ್ರೆ 10 ತಂಡಗಳಲ್ಲಿರುವ ವಿದೇಶಿ ಆಟಗಾರರು ಯಾರೆಲ್ಲಾ ಎಂದು ನೋಡೋಣ...

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತ ಎದುರಾಗಿದೆ. ಈ ಬಾರಿ ಬಲಿಷ್ಠ ಪಡೆಯೊಂದಿಗೆ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದ ರೋಹಿತ್ ಶರ್ಮಾ ಪಡೆಯ ಇಬ್ಬರು ಆಟಗಾರರು ಟೂರ್ನಿ ಆರಂಭಕ್ಕೂ ಮೊದಲೇ ತಂಡದಿಂದ ಹೊರಗುಳಿದಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್: ನಿಕೋಲಸ್ ಪೂರನ್, ಕ್ವಿಂಟನ್ ಡಿ ಕಾಕ್, ಡೇನಿಯಲ್ ಸ್ಯಾಮ್ಸ್, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ರೊಮಾರಿಯೋ ಶೆಫರ್ಡ್, ಮಾರ್ಕ್ ವುಡ್, ನವೀನ್ ಉಲ್-ಹಕ್.

ಗುಜರಾತ್ ಟೈಟಾನ್ಸ್: ಡೇವಿಡ್ ಮಿಲ್ಲರ್, ಕೇನ್ ವಿಲಿಯಮ್ಸನ್, ಮ್ಯಾಥ್ಯೂ ವೇಡ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಜೋಶುವಾ ಲಿಟಲ್, ನೂರ್ ಅಹ್ಮದ್, ರಶೀದ್ ಖಾನ್.

ಸನ್ರೈಸರ್ಸ್ ಹೈದರಾಬಾದ್: ಐಡೆನ್ ಮಾರ್ಕ್ರಾಮ್, ಹ್ಯಾರಿ ಬ್ರೂಕ್, ಹೆನ್ರಿಚ್ ಕ್ಲಾಸೆನ್, ಗ್ಲೆನ್ ಫಿಲಿಪ್ಸ್ , ಮಾರ್ಕೊ ಯಾನ್ಸೆನ್, ಆದಿಲ್ ರಶೀದ್, ಅಕೇಲ್ ಹೋಸೇನ್, ಫಜಲ್ಹಕ್ ಫಾರೂಕಿ.

ಕೊಲ್ಕತ್ತಾ ನೈಟ್ ರೈಡರ್ಸ್: ಲಿಟ್ಟನ್ ದಾಸ್, ರಹಮಾನುಲ್ಲಾ ಗುರ್ಬಾಜ್, ಆಂಡ್ರೆ ರಸೆಲ್, ಡೇವಿಡ್ ವಿಝ, ಶಕಿಬ್ ಅಲ್ ಹಸನ್, ಸುನಿಲ್ ನರೈನ್, ಲಾಕಿ ಫರ್ಗುಸನ್, ಟಿಮ್ ಸೌಥಿ

ಚೆನ್ನೈ ಸೂಪರ್ ಕಿಂಗ್ಸ್: ಡೆವೊನ್ ಕಾನ್ವೆ, ಬೆನ್ ಸ್ಟೋಕ್ಸ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಮೊಯಿನ್ ಅಲಿ, ಕೈಲ್ ಜೇಮಿಸನ್, ಮಹೇಶ್ ತೀಕ್ಷಣ, ಮಥೀಶ ಪತಿರಾನ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀಗಿದೆ: ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಪಾಲ್ ಪಟೇಲ್, ರೋವ್‌ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅನ್ರಿಕ್ ನೋಕಿಯಾ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಖಲೀಲ್ ಅಹ್ಮದ್, ಲುಂಗಿ ಎನ್‌ಗಿಡಿ, ಮುಸ್ತಫಿಜುರ್ ರೆಹಮಾನ್, ಅಮನ್ ಖಾನ್, ಕುಲದೀಪ್ ಯಾದವ್, ಕುಲದೀಪ್ ಯಾದವ್, ವಿಕಿ ಓಸ್ಟ್ವಾಲ್, ರಿಲೀ ರೊಸೊ, ಮನೀಶ್ ಪಾಂಡೆ, ಮುಖೇಶ್ ಕುಮಾರ್, ಇಶಾಂತ್ ಶರ್ಮಾ , ಫಿಲ್ ಸಾಲ್ಟ್ .

ರಾಜಸ್ಥಾನ್ ರಾಯಲ್ಸ್ ತಂಡ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಆ್ಯಡಂ ಝಂಪಾ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಜೋ ರೂಟ್, ಜೋ ರೂಟ್ , ಮುರುಗನ್ ಅಶ್ವಿನ್, ನವದೀಪ್ ಸೈನಿ, ಆಕಾಶ್ ವಸಿಷ್ಟ್, ಕೆಸಿ ಕಾರ್ಯಪ್ಪ, ಓಬೇಡ್ ಮೆಕಾಯ್, ರಿಯಾನ್ ಪರಾಗ್, ಕೆಎಂ ಆಸಿಫ್, ಕುಲದೀಪ್ ಸೇನ್, ಡೊನಾವನ್ ಫೆರೇರಾ, ಅಬ್ದುಲ್ ಬಸಿತ್, ಕುನಾಲ್ ಸಿಂಗ್ ರಾಥೋಡ್.

ಪಂಜಾಬ್ ಕಿಂಗ್ಸ್: ಭಾನುಕಾ ರಾಜಪಕ್ಸೆ, ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಸಿಕಂದರ್ ರಾಝ, ಕಗಿಸೊ ರಬಾಡ, ನಾಥನ್ ಎಲ್ಲಿಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್, ವಿಲ್ ಜ್ಯಾಕ್ಸ್, ಫಿನ್ ಅಲೆನ್, ಡೇವಿಡ್ ವಿಲ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಜೋಶ್ ಹ್ಯಾಝಲ್‌ವುಡ್, ರೀಸ್ ಟೋಪ್ಲಿ.