IPL 2023 Mini Auction: ಮಿನಿ ಹರಾಜಿನಲ್ಲಿ 10 ಕೋಟಿಗೂ ಅಧಿಕ ಬೆಲೆ ಪಡೆಯುವ 10 ಆಟಗಾರರಿವರು..!

| Updated By: ಪೃಥ್ವಿಶಂಕರ

Updated on: Dec 22, 2022 | 5:35 PM

IPL 2023 Mini Auction: ಈ ಬಾರಿ ಮಿನಿ ಹರಾಜಾದರೂ.. ಹಲವು ಆಟಗಾರರು ರೂ. 10 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಹಣ ಪಡೆಯುವ ಸಾಧ್ಯತೆ ಇದೆ. ಅಂತಹ 10 ಆಟಗಾರರ ಪಟ್ಟಿ ಇಲ್ಲಿದೆ.

1 / 11
ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಪ್ರತಿ ಹರಾಜಿನಲ್ಲೂ ಕೆಲವು ಆಟಗಾರರ ಮೇಲೆ ಹಣದ ಮಳೆ ಸುರಿಯುತ್ತದೆ. ಈ ಬಾರಿಯ ಮಿನಿ ಹರಾಜಿನಲ್ಲೂ ಕೋಟಿ ಕೋಟಿ ಹಣ ಪಡೆಯಬಹುದಾದಂತಹ ಕೆಲವು ಆಟಗಾರರಿದ್ದಾರೆ. ಈ ಬಾರಿ ಮಿನಿ ಹರಾಜಾದರೂ.. ಹಲವು ಆಟಗಾರರು ರೂ. 10 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಹಣ ಪಡೆಯುವ ಸಾಧ್ಯತೆ ಇದೆ. ಅಂತಹ 10 ಆಟಗಾರರ ಪಟ್ಟಿ ಇಲ್ಲಿದೆ.

2 / 11
ಹ್ಯಾರಿ ಬ್ರೂಕ್:  ಇಂಗ್ಲೆಂಡ್‌ನ ಯುವ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಅದ್ಭುತವಾಗಿ ಆರಂಭ ಮಾಡಿದ್ದಾರೆ. ಟೆಸ್ಟ್​ನಲ್ಲಿಯೂ​ ಟಿ20 ರೀತಿ ಬ್ಯಾಟಿಂಗ್ ಮಾಡುತ್ತಿರುವ ಬ್ರೂಕ್, ಟಿ20ಯಲ್ಲೂ ಉತ್ತಮ ಹೊಡೆತಗಳನ್ನು ಬಾರಿಸುವ ಶಕ್ತಿ ಹೊಂದಿದ್ದಾರೆ. ಹೀಗಾಗಿ ಮುಂಬರುವ ಹರಾಜಿನಲ್ಲಿ ಅವರು ಉತ್ತಮ ಬಿಡ್ ಪಡೆಯುವ ಸಾಧ್ಯತೆಗಳಿವೆ.

3 / 11
ಮಯಾಂಕ್ ಅಗರ್ವಾಲ್: ಕಳೆದ ಸೀಸನ್​ನಲ್ಲಿ ರೂ. 10 ಕೋಟಿಗೂ ಹೆಚ್ಚು ಸಂಭಾವನೆ ಪಡೆದ ಆಟಗಾರರ ಪಟ್ಟಿಯಲ್ಲಿರುವ ಭಾರತೀಯ ಆಟಗಾರನೆಂದರೆ ಮಯಾಂಕ್ ಅಗರ್ವಾಲ್. ಪಂಜಾಬ್ ತನ್ನ ತಂಡದಿಂದ ಮಯಾಂಕ್ ಅವರನ್ನು ಬಿಡುಗಡೆ ಮಾಡಿದರೂ, ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್‌ಗೆ ಹೆಚ್ಚಿನ ಬೇಡಿಕೆ ಇದೆ. ಅದರಿಂದಾಗಿ ಅವರು ಕೂಡ ಅಧಿಕ ಬೆಲೆ ಪಡೆಯಬಹುದು.

4 / 11
ಬೆನ್ ಸ್ಟೋಕ್ಸ್: ಬೆನ್ ಸ್ಟೋಕ್ಸ್ ಈಗಾಗಲೇ ಲೀಗ್‌ನಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ ಅವರ ದಾಖಲೆಯನ್ನು ಪ್ಯಾಟ್ ಕಮ್ಮಿನ್ಸ್ ಮತ್ತು ಕ್ರಿಸ್ ಮಾರಿಸ್ ಮುರಿದಿದ್ದರು. ಆದರೆ ಈ ಬಾರಿ ಅವರಿಗೆ ಹಿಂದಿಗಿಂತಲೂ ಹೆಚ್ಚಿನ ಹಣ ಸಿಗಲಿದೆ.

5 / 11
ಜೇಸನ್ ಹೋಲ್ಡರ್: ಕೆರಿಬಿಯನ್ ಆಲ್ ರೌಂಡರ್ ಜೇಸನ್ ಹೋಲ್ಡರ್​​ಗೆ ಐಪಿಎಲ್​​ನಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲ. ಆದರೆ ಸಾಕಷ್ಟು ಅವಕಾಶಗಳು ಸಿಕ್ಕಾಗಲೆಲ್ಲ ತನ್ನನ್ನು ತಾನು ಸಾಬೀತು ಪಡಿಸಿದ್ದಾರೆ. ಉತ್ತಮ ಬೌಲಿಂಗ್ ಮತ್ತು ಫೈನಲ್‌ನಲ್ಲಿ ಕೆಲವು ದೊಡ್ಡ ಹಿಟ್‌ಗಳನ್ನು ಹೊಡೆಯುವ ಕೌಶಲ್ಯ ಹೊಂದಿರುವ ಹೋಲ್ಡರ್ ಕೂಡ ಭಾರಿ ಬಿಡ್ ಪಡೆಯುವ ನಿರೀಕ್ಷೆಯಿದೆ.

6 / 11
ನಿಕೋಲಸ್ ಪೂರನ್: ನಿಕೋಲಸ್ ಪೂರನ್ ಕಳೆದ ಸೀಸನ್​ಲ್ಲಿ 10 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ದರು. ಆದರೆ ಈ ಬಾರಿ ಮತ್ತೆ ಹರಾಜಿನಲ್ಲಿ ಪಾಲ್ಗೊಳ್ಳಬೇಕಿದೆ. ಪೂರನ್ ಉತ್ತಮ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್. ಹಾಗಾಗಿ ಎಲ್ಲಾ ತಂಡಗಳು ಇವರ ಮೇಲೆ ಭಾರೀ ಬೆಟ್ಟಿಂಗ್ ನಡೆಸುವ ಸಾಧ್ಯತೆ ಇದೆ.

7 / 11
ಸ್ಯಾಮ್ ಕರನ್: ಸ್ಯಾಮ್ ಕರನ್ ಇದುವರೆಗೆ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಗಾಯದ ಕಾರಣ ಕಳೆದ ಸೀಸನ್​ನಲ್ಲಿ ಕರನ್ ಆಡಿರಲಿಲ್ಲ. ಆದರೆ ಈ ಬಾರಿ ಕರನ್​ ಅಖಾಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಅಲ್ಲದೆ ಟಿ20 ವಿಶ್ವಕಪ್​ನಲ್ಲಿ ಟೂರ್ನಿಯ ಆಟಗಾರನಾಗಿ ಹೊರಹೊಮ್ಮಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕರನ್ ಮೇಲೂ ಹಣದ ಸುರಿಮಳೆಯಾಗಲಿದೆ.

8 / 11
ಆಡಮ್ ಝಂಪಾ: ಆಡಮ್ ಝಂಪಾ ಆಸ್ಟ್ರೇಲಿಯಾ ಪರ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಾರೆ. ಅದರಲ್ಲೂ ಟಿ20 ಕ್ರಿಕೆಟ್‌ನಲ್ಲಿ ಅವರ ಪ್ರಭಾವ ತುಂಬಾ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ಲೆಗ್ ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸುತ್ತಿದ್ದು, ಝಂಪಾ ಕೂಡ ಉತ್ತಮ ಆದಾಯ ಗಳಿಸುವ ನಿರೀಕ್ಷೆಯಿದೆ.

9 / 11
ಕ್ಯಾಮರೂನ್ ಗ್ರೀನ್: ಮತ್ತೊಬ್ಬ ಆಸೀಸ್ ಕ್ರಿಕೆಟಿಗ ಕ್ಯಾಮೆರಾನ್ ಗ್ರೀನ್ ಈ ಮಿನಿ ಹರಾಜಿನಲ್ಲಿ ಭಾರಿ ಮೊತ್ತವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಗ್ರೀನ್ ಆಲ್ ರೌಂಡರ್‌ ಆಗಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ.

10 / 11
ಟ್ರಾವಿಸ್ ಹೆಡ್: ಆಸೀಸ್ ಕ್ರಿಕೆಟಿಗ ಟ್ರಾವಿಸ್ ಹೆಡ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹೆಡ್ ವಿಶೇಷವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅಸಾಧಾರಣವಾದ ಸಾಧನೆ ಮಾಡಿದ್ದಾರೆ. ಆದರೆ ಇದರಲ್ಲೂ ಅವರ ಸ್ಟ್ರೈಕ್ ರೇಟ್ ಅದ್ಭುತವಾಗಿದೆ.

11 / 11
ರಿಲೇ ರೋಸೋ: ದಕ್ಷಿಣ ಆಫ್ರಿಕಾದ ರಿಲೆ ರೋಸೋ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗಷ್ಟೇ ಟಿ20ಯಲ್ಲಿ ಸತತ ಎರಡು ಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಹಾಗಾಗಿ ಈ ಆಟಗಾರನಿಗೆ ಐಪಿಎಲ್​ನಲ್ಲಿ ಬಾರಿ ಬೇಡಿಕೆ ಹೆಚ್ಚಿದೆ.

Published On - 5:27 pm, Thu, 22 December 22