
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಮಿನಿ ಹರಾಜು ಡಿಸೆಂಬರ್ 23 ರಂದು ಕೊಚ್ಚಿನ್ನಲ್ಲಿ ನಡೆಯಲಿದೆ. ಈ ಹರಾಜಿಗಾಗಿ ಒಟ್ಟು 991 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 714 ಭಾರತೀಯ ಆಟಗಾರರಿದ್ದರೆ, 277 ವಿದೇಶಿ ಆಟಗಾರರಿದ್ದಾರೆ.
ವಿದೇಶಿ ಆಟಗಾರರ ಪಟ್ಟಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಆಸ್ಟ್ರೇಲಿಯಾ ಪ್ಲೇಯರ್ಸ್ ಕಾಣಿಸಿಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಸೌತ್ ಆಫ್ರಿಕಾ ಇದೆ. ವಿಶೇಷ ಎಂದರೆ ಈ ಬಾರಿ ಜಿಂಬಾಬ್ವೆ, ಯುಎಇ, ನಬೀಯಾ, ಐರ್ಲೆಂಡ್ ಹಾಗೂ ಸ್ಕಾಟ್ಲೆಂಡ್ ಆಟಗಾರರು ಕೂಡ ಹೆಸರು ನೀಡಿದ್ದಾರೆ. ಹಾಗಿದ್ರೆ ಯಾವ ದೇಶದಿಂದ ಎಷ್ಟು ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ ನೋಡೋಣ...
1- ಆಸ್ಟ್ರೇಲಿಯಾ- 57 ಆಟಗಾರರು
2- ಸೌತ್ ಆಫ್ರಿಕಾ- 52 ಆಟಗಾರರು
3- ವೆಸ್ಟ್ ಇಂಡೀಸ್- 33 ಆಟಗಾರರು
4- ಇಂಗ್ಲೆಂಡ್- 31 ಆಟಗಾರರು
5- ನ್ಯೂಜಿಲೆಂಡ್- 27 ಆಟಗಾರರು
6- ಶ್ರೀಲಂಕಾ- 23 ಆಟಗಾರರು
7- ಅಫ್ಘಾನಿಸ್ತಾನ್- 14 ಆಟಗಾರರು
8- ಐರ್ಲೆಂಡ್- 8 ಆಟಗಾರರು
9- ನೆದರ್ಲ್ಯಾಂಡ್ಸ್- 7 ಆಟಗಾರರು
10- ಬಾಂಗ್ಲಾದೇಶ್- 6 ಆಟಗಾರರು
11- ಯುಎಇ- 6 ಆಟಗಾರರು
12- ಜಿಂಬಾಬ್ವೆ- 6 ಆಟಗಾರರು
13- ನಮೀಬಿಯಾ- 5 ಆಟಗಾರರು
14- ಸ್ಕಾಟ್ಲೆಂಡ್- 2 ಆಟಗಾರರು
ಈ ಪಟ್ಟಿಯಲ್ಲಿ 714 ಭಾರತೀಯ ಆಟಗಾರರಿದ್ದಾರೆ. ಇವರಲ್ಲಿ ಭಾರತದ ಪರ ಆಡಿದ 19 ಆಟಗಾರರು ಹಾಗೂ ರಾಷ್ಟ್ರೀಯ ತಂಡದ ಪರ ಆಡದ ಐಪಿಎಲ್ನಲ್ಲಿ ಆಡಿದ 91 ಭಾರತೀಯರಿದ್ದಾರೆ. ಇನ್ನು ಚೊಚ್ಚಲ ಐಪಿಎಲ್ ಅವಕಾಶಕ್ಕಾಗಿ 604 ಭಾರತೀಯ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ.
Published On - 11:08 pm, Thu, 1 December 22