INDW vs AUSW: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ: ಬಿಸಿಸಿಐಯಿಂದ ಮಹತ್ವದ ನಿರ್ಧಾರ

TV9kannada Web Team

TV9kannada Web Team | Edited By: Vinay Bhat

Updated on: Dec 02, 2022 | 10:37 AM

India Womens Squad Australia T20: ಇದೇ ತಿಂಗಳು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು ಭಾರತ ಮಹಿಳಾ ತಂಡದ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಇದೀಗ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಈ ಸರಣಿಗೆ 15 ಸದಸ್ಯರ ಭಾರತ ತಂಡವನ್ನು ಪ್ರಕಟ ಮಾಡಿದೆ.

Dec 02, 2022 | 10:37 AM
ಇದೇ ತಿಂಗಳು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು ಭಾರತ ಮಹಿಳಾ ತಂಡದ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಇದೀಗ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಈ ಸರಣಿಗೆ 15 ಸದಸ್ಯರ ಭಾರತ ತಂಡವನ್ನು ಪ್ರಕಟ ಮಾಡಿದೆ. ಬಿಸಿಸಿಐ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಸ್ಟಾರ್ ಆಟಗಾರ್ತಿ ಪೂಜಾ ವಸ್ತ್ರಾಕರ್ ಅವರನ್ನು ಈ ಸರಣಿಯಿಂದ ಕೈಬಿಡಲಾಗಿದೆ.

1 / 6
ಇಂಜುರಿಯಿಂದ ಬಳಲುತ್ತಿರುವ ಪೂಜಾ ವಸ್ತ್ರಾಕರ್ ಅವರನ್ನು ಈ ಸರಣಿಗೆ ಆಯ್ಕೆ ಮಾಡಿಲ್ಲ. ಹರ್ಮನ್​ಪ್ರೀತ್ ಕೌರ್ ನಾಯಕಿಯಾಗಿ ತಂಡವನ್ನು ಮುನ್ನಡೆಸಿದರೆ, ಸ್ಮೃತಿ ಮಂದಾನ ಉಪ ನಾಯಕಿ ಆಗಿದ್ದಾರೆ. ಶಫಾಲಿ ವರ್ಮಾ, ಜೆಮಿಯಾ ರೋಡ್ರಿಗಿಸ್ ಹಾಗೂ ದೀಪ್ತಿ ಶರ್ಮಾ ತಂಡದಲ್ಲಿ  ಸ್ಥಾನ ಪಡೆದುಕೊಂಡಿದ್ದಾರೆ.

2 / 6
ಕರ್ನಾಟಕದ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಕೂಡ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಹೆಸರಿಸಿರುವ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ನಾಲ್ಕು ನೆಟ್ ಬೌಲರ್​ಗಳನ್ನು ಕೂಡ ಹೆಸರಿಸಲಾಗಿದೆ. ಮೋನಿಕಾ ಪಟೇಲ್, ಅರುಂದತಿ ರೆಡ್ಡಿ, ಎಸ್​ಬಿ ಪೋಕರ್ಕರ್ ಹಾಗೂ ಸಿಮ್ರಾನ್ ಬಹದ್ದರೂರ್ ನೆಟ್ ಬೌಲರ್​ಗಳಾಗಿದ್ದಾರೆ.

3 / 6
ಭಾರತ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯಾ ವನಿತಯರ ನಡುವೆ ಒಟ್ಟು ಐದು ಟಿ20 ಪಂದ್ಯಗಳನ್ನು ಆಯೋಜಿಸಲಾಗಿದೆ. ಡಿಸೆಂಬರ್ 9 ರಂದು ಮೊದಲ ಟಿ20 ನಡೆದರೆ, ಡಿ. 11 ಎರಡನೇ ಟಿ20, ಡಿ. 14 ಮೂರನೇ ಪಂದ್ಯ, ಡಿ. 17 ಮತ್ತು ಡಿ. 20 ರಂದು ನಾಲ್ಕು ಮತ್ತು ಐದನೇ ಟಿ20 ನಡೆಯಲಿದೆ. ಇದರಲ್ಲಿ ಮೊದಲ ಎರಡು ಪಂದ್ಯ ಡಿ.ವೈ. ಪಾಟಿಲ್ ಸ್ಟೇಡಿಯಂ, ಉಳಿದ ಮೂರು ಪಂದ್ಯ ಸಿಸಿಐ ನಲ್ಲಿ ಆಯೋಜಿಸಲಾಗಿದೆ.

4 / 6
2023 ರಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್​ನ ತಯಾರಿಗಾಗಿ ಆಯೋಜಿಸುತ್ತಿರುವ ಪಂದ್ಯ ಇದಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ಉಭಯ ತಂಡಗಳಿಗೆ ಈ ಸರಣಿ ಮಹತ್ವದ್ದಾಗಿದ್ದು ತಂಡ ಕಟ್ಟಲು ಸರಿಯಾದ ಯೋಜನೆ ರೂಪಿಸಬೇಕಿದೆ.

5 / 6
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಜೆಮಿಯಾ ರೋಡ್ರಿಗಿಸ್, ದೀಪ್ತಿ ಶರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್ ಠಾಕೂರ್, ಮೇಘನಾ ಸಿಂಗ್, ಅಂಜಲಿ ಸಾರ್ವಾನಿ, ಎಸ್ ಮೇಘನಾ, ರಿಚ್ಚಾ ಘೋಷ್ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್.

6 / 6

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada